Delhiಯಲ್ಲಿ ಕೇಂದ್ರದಿಂದ ಟೊಮೆಟೋ ಮಾರಾಟ: ಕೆ.ಜಿ.ಗೆ 60 ರೂ. ನಿಗದಿ
ಬೆಲೆ 100 ರೂ.ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಸರಕಾರದಿಂದ ಈ ಕ್ರಮ
Team Udayavani, Jul 30, 2024, 6:00 AM IST
ಹೊಸದಿಲ್ಲಿ: ಮುಂದಿನ 7-10 ದಿನಗಳಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಟೊಮೆಟೋ ದರ ಇಳಿಕೆಯಾಗಲಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಸರಕಾರದ ವತಿ ಯಿಂದ ಪ್ರತಿ ಕೆಜಿ ಟೊಮೆಟೋಗೆ 60 ರೂ.ನಂತೆ ಮಾರಾಟ ಮಾಡುವ ಸೌಲಭ್ಯ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಇತ್ತೀಚಿನ ದಿನ ಗಳಲ್ಲಿ ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರತಿ ಕೇಜಿ ಟೊಮೆಟೋಗೆ 70 ರೂ.ಗಳಿಂದ 100 ರೂ. ವರೆಗೆ ಏರಿಕೆಯಾಗಿತ್ತು. ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ನಿಯಮಿತ (ಎನ್ಸಿಸಿಎಫ್)ದ ವತಿಯಿಂದ ಟೊಮೆಟೋ ಮಾರಾಟ ನಡೆಸಲು ವ್ಯವಸ್ಥೆ ಮಾಡಲಾ ಗಿದೆ. ಬೆಲೆ ಏರಿಕೆಯನ್ನು ನಿಯಂತ್ರಿ ಸಲು ಕೇಂದ್ರವು ಬೆಲೆ ಸ್ಥಿರೀಕರಣ ನಿಧಿಯನ್ನು (ಪಿಎಸ್ಎಫ್)ಸ್ಥಾಪಿಸಿದೆ ಎಂದು ಜೋಷಿ ತಿಳಿಸಿದರು.
ಟೊಮೇಟೊಗಳನ್ನು ರೈತರಿಂದ ನೇರವಾಗಿ ಅಥವಾ ಹೋಲ್ ಸೇಲ್ ಮಂಡಿಗಳಲ್ಲಿ ಕೊಳ್ಳಲಾಗುವುದು ಇದರಿಂದ ಮಧ್ಯವರ್ತಿಯ ವೆಚ್ಚ ಕಡಿಮೆಯಾಗುವುದರಿಂದ, ಇದರ ನೇರ ಲಾಭವನ್ನು ಬಳಸಿ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಟೊಮೇಟೊ ಪೂರೈಸಲಾಗುವುದು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.