Delhi; ಒತ್ತುವರಿ ತೆರವಿಗೆ ಬುಲ್ಡೋಜರ್ ಬಳಕೆ ಆರಂಭ!
ಕೋಚಿಂಗ್ ಸೆಂಟರ್‌ನಲ್ಲಿ 3 ಐಎಎಸ್ ಆಕಾಂಕ್ಷಿಗಳ ಸಾವು ಬೆನ್ನಲ್ಲೇ ದಿಲ್ಲಿ ಪಾಲಿಕೆ ಕ್ರಮ... : ಸಂಸತ್ತಿನಲ್ಲಿ ಚರ್ಚೆ
Team Udayavani, Jul 30, 2024, 12:53 AM IST
ಹೊಸದಿಲ್ಲಿ: ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಬೆನ್ನಲ್ಲೇ ಅಕ್ರಮ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಚುರುಕುಗೊಳಿಸಿರುವ ದೆಹಲಿ ಮಹಾನಗರ ಪಾಲಿಕೆ 13 ಸೆಂಟರ್‌ಗಳಿಗೆ ಬೀಗ ಜಡಿದಿದೆ. ಅಲ್ಲದೆ, ಚರಂಡಿ ಒತ್ತುವರಿ ಮಾಡಿಕೊಂಡಿ ರುವ ಕಟ್ಟಡಗಳ ವಿರುದ್ಧ ಕ್ರಮಕ್ಕಾಗಿ ಬುಲ್ಡೋಜರ್ ಬಳಕೆ ಮಾಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿ ಕೆಯ ಓರ್ವ ಅಧಿಕಾರಿಯನ್ನು ವಜಾ ಮಾಡಲಾಗಿದ್ದು, ಮತ್ತೂಬ್ಬರನ್ನು ಅಮಾನತು ಮಾಡಲಾಗಿದೆ. ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದು ಪಾಲಿಕೆ ಕಮಿಷನರ್ ಹೇಳಿದ್ದಾರೆ.
5 ಮಂದಿ ಬಂಧನ: ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 5 ಮಂದಿಯನ್ನು ಬಂಧಿಸಿ ದ್ದಾರೆ. ವಿದ್ಯಾರ್ಥಿಗಳ ಸಾವಿಗೆ ಸಂಬಂಧಿಸಿದಂತೆ ದೆಹಲಿ ಮೇಯರ್ ಶೆಲ್ಲಿ ತುರ್ತು ಸಭೆ ನಡೆಸಿದ್ದಾರೆ.
ನರಕದಂಥ ಪ್ರದೇಶದಲ್ಲಿ ವಾಸ್ತವ್ಯ -ಸಿಜೆಐಗೆ ವಿದ್ಯಾರ್ಥಿಗಳ ಪತ್ರ: ನಾವು ನರಕದಂತಹ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ಮೂವರು ವಿದ್ಯಾರ್ಥಿಗಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಸಿಜೆಐ ಡಿ.ವೈ.ಚಂದ್ರಚೂಡ್‌ಗೆ ಪತ್ರ ಬರೆದಿದ್ದಾರೆ. ಕಟ್ಟಡಗಳನ್ನು ಸರಿ ಯಾಗಿ ನಿರ್ಮಾಣ ಮಾಡದ ಕಾರಣ ದುರಂತಗಳು ಸಂಭವಿಸಿವೆ. ಇದು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ದಿಂದಾಗಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಕೋಚಿಂಗ್ ಸೆಂಟರ್‌ನಲ್ಲಿ ಸಾವು: ಸಂಸತ್ತಿನಲ್ಲಿ ಚರ್ಚೆ
ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿರುವ ಘಟನೆ ಕುರಿತು ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರಸ್ತಾಪ ವಾಯಿತು. ಪ್ರಶ್ನೋತ್ತರ ಕಲಾಪದ ಬಳಿಕ ರಾಜ್ಯಸಭೆ ಯಲ್ಲಿ ಅಲ್ಪ ಕಾಲದ ಚರ್ಚೆಗೆ ಸಭಾಪತಿ ಜಗದೀಪ್ ಧನಕರ್ ಅವಕಾಶ ನೀಡಿದರು. ಲೋಕಸಭೆಯಲ್ಲಿ ಬಿಜೆಪಿ ಬಾನ್ಸುರಿ ಸ್ವರಾಜ್, ಎಸ್‌ಪಿಯ ಅಖೀಲೇಶ್ ಯಾದವ್, ಕಾಂಗ್ರೆಸ್‌ನ ಶಶಿ ತರೂರ್ ಮಾತನಾಡಿದರು. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಧನಕರ್, ಕೋಚಿಂಗ್ ಸೆಂಟರ್‌ಗಳು ಇತ್ತೀಚೆಗೆ ವಾಣಿಜ್ಯೀ ಕರಣಗೊಂಡಿವೆ. ಪ್ರತಿನಿತ್ಯ ಪತ್ರಿಕೆಯಲ್ಲಿ 3 ಪುಟಗಳಷ್ಟು ಇವುಗಳದ್ದೇ ಜಾಹೀರಾತು ಗಳಿರುತ್ತವೆ. ಜತೆಗೆ ಅವು ಗ್ಯಾಸ್ ಚೇಂಬರ್‌ನಂತೆ ಆಗಿವೆ ಎಂದು ಸಭಾಪತಿ ವಿಷಾದ ವ್ಯಕ್ತಪಡಿ ಸಿದರು. ಸದನದಲ್ಲಿದ್ದ ಬಿಜೆಪಿ ಸಂಸದರು ಇದು ಆಪ್ ಸರಕಾರದ ನಿರ್ಲಕ್ಷ್ಯದಿಂದಾದ ಘಟನೆ ಎಂದು ಆಪ್ ವಿರುದ್ಧ ಕಿಡಿಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.