Olympics: 10m Air Pistol ಮಿಶ್ರ ಡಬಲ್ಸ್ನಲ್ಲಿ ಭಾರತಕ್ಕೆ ಕಂಚಿನ ಪದಕ; ಭಾಕರ್ ಇತಿಹಾಸ
Team Udayavani, Jul 30, 2024, 1:42 PM IST
ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ (Paris Olympics) ಭಾರತದ ಪದಕದ ಖಾತೆ ತೆರೆದ ಶೂಟರ್ ಮನು ಭಾಕರ್ (Manu Bhakar) 10 ಮೀಟರ್ ಏರ್ ಪಿಸ್ತೂಲ್ (10m Air Pistol) ಮಿಶ್ರ ಡಬಲ್ಸ್ನಲ್ಲೂ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ.
ಸರಬ್ಜೋತ್ ಸಿಂಗ್ (Sarabjot Singh) ಜೊತೆಯಲ್ಲಿ ಮಿಶ್ರ ತಂಡದ ವಿಭಾಗದಲ್ಲಿ ಕಣಕ್ಕಿಳಿದಿದ್ದ ಅವರು ಸೌತ್ ಕೊರಿಯಾದ ಲೀ ವಾನ್ ಹೊ ಮತ್ತು ಯೆ-ಜಿನ್ ವಿರುದ್ಧ ಕಂಚಿಗೆ ಗುರಿಯಿಟ್ಟಿದ್ದಾರೆ. ಒಂದೇ ಆವೃತ್ತಿಯಲ್ಲಿ ಎರಡು ಪದಕ ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸ ಬರೆದಿದ್ದಾರೆ.
ಆರಂಭದಲ್ಲೇ ಲೀಡ್ ಕಾಯ್ದುಕೊಂಡಿದ್ದ ಮನು- ಸರಬ್ಜೋತ್ 16-10 ರಿಂದ ಕೊರಿಯಾವನ್ನು ಸೋಲಿಸಿ ಕಂಚು ಮುಡಿಗೇರಿಸಿಕೊಂಡಿದೆ. ಆ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡನೇ ಪದಕವನ್ನು ಭಾರತ ಗೆದ್ದಿದೆ.
ಭಾರತದ ಜೋಡಿಗೆ 580 ಅಂಕ
ಸೋಮವಾರದ (ಜು.29ರಂದು) ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್- ಸರಬ್ಜೋತ್ ಸಿಂಗ್ ಒಟ್ಟು 580 ಅಂಕ ಸಂಪಾದಿಸಿ ಕಂಚಿನ ಸ್ಪರ್ಧೆಗೆ ಅಣಿಯಾಗಿದ್ದರು. ಮನು ಭಾಕರ್ ಮೊದಲೆರಡು ಸುತ್ತಿನಲ್ಲಿ ತಲಾ 98 ಅಂಕ ಗಳಿಸಿ ಭರವಸೆ ಮೂಡಿಸಿದರು. ಆದರೆ 3ನೇ ಸುತ್ತಿನಲ್ಲಿ ಹಿನ್ನಡೆಯಾಯಿತು. ಇಲ್ಲಿ ಲಭಿಸಿದ್ದು 95 ಅಂಕ. ಸರಬ್ಜೊತ್ ಸಿಂಗ್ ಕ್ರಮವಾಗಿ 95, 97 ಹಾಗೂ 97 ಅಂಕ ಗಳಿಸಿದರು. ಇವರು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಗುರಿ ತಪ್ಪಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.