Ullal: ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಸ್ಪೀಕರ್‌ ಖಾದರ್‌ ಭೇಟಿ

ತತ್‌ಕ್ಷಣವೇ ತಾತ್ಕಾಲಿಕ ಕಾಮಗಾರಿ ನಡೆಸಲು ಸೂಚನೆ

Team Udayavani, Jul 31, 2024, 11:11 AM IST

Screenshot (38)

ಉಳ್ಳಾಲ: ಉಳ್ಳಾಲದ ಕೋಟೆಪುರದಿಂದ – ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿ ಮತ್ತು ತಲಪಾಡಿ ಗಡಿಭಾಗದವರೆಗಿನ ಕಡಲ್ಕೊರೆತ ಪೀಡಿತ ಸೂಕ್ಷ್ಮ ಪ್ರದೇಶಗಳನ್ನ ಗುರುತಿಸಿದ್ದು, ಅಲ್ಲಿ ತತ್‌ಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಲಾಗಿದೆ. ನ್ಯೂ ಉಚ್ಚಿಲ ಸಹಿತ ಉಚ್ಚಿಲ ಬೀಚ್‌ ವ್ಯಾಪ್ತಿಯಲ್ಲಿ ಕಡಲ್ಕೊರೆತದಿಂದ ಮನೆ, ಕೈಗೊಳ್ಳಲಾಗುವುದು ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.

ಉಳ್ಳಾಲದ ಕಡಲ್ಕೊರೆತ ಪೀಡಿತ ಪ್ರದೇಶಗಳಾದ ಕೋಟೆಪುರ, ಮೊಗವೀರ ಪಟ್ಣ, ಸೀಗ್ರೌಂಡ್‌, ನ್ಯೂ ಉಚ್ಚಿಲ,ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಮಾಹಿತಿ ನೀಡಿದ ಅವರು ಎಡಿಬಿ ಯೋಜನೆಯ ಮೂಲಕ ಕಡಲ್ಕೊರೆತ ತಡೆಯ ಬ್ರೇಕ್‌ ವಾಟರ್‌ ಕಾಮಗಾರಿ ನಡೆದ ಕಾರಣ ಮನೆಗಳಿಗೆ ಹಾನಿ ಉಂಟಾಗುವುದು ಬಹುತೇಕ ಕಡಿಮೆ ಆಗಿದೆ ಎಂದರು.

ಎಡಿಬಿ ಯೋಜನೆಯಿಂದ ನಡೆದ ಬ್ರೇಕ್‌ ವಾಟರ್‌ ಕಾಮಗಾರಿಯ ಸಮರ್ಪಕ ನಿರ್ವಹಣೆ ಆಗಿಲ್ಲ. ಮತ್ತೆ ಇದನ್ನ ಸುಸ್ಥಿರ ಮಾಡಲು ನಿರ್ವಹಣೆಯ ಖರ್ಚಿನ ಅಂದಾಜು ಪಟ್ಟಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಅ ಕಾರಿಗಳಿಗೆ ಸೂಚಿಸುತ್ತೇನೆ.ಅದಕ್ಕೆ ಅನುಗುಣವಾಗಿ ಮುಂದಿನ ವರುಷ ನಿರ್ವಹಣೆಯು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ ಎಂದರು.

ತುರ್ತು ಕಾಮಗಾರಿಗೆ ಬೇಡಿಕೆ

ಎಡಿಬಿ ಯೋಜನೆಯಡಿ ಉಳ್ಳಾಲ ಮೊಗವೀರಪಟ್ಣದಲ್ಲಿ ನಡೆದ ಶಾಶ್ವತ ಕಾಮಗಾರಿಯ ಸಂದರ್ಭದಲ್ಲಿ ಸಮುದ್ರದ ಮದ್ಯದಲ್ಲಿ ಹಾಕಿರುವ 2 ರೀಫ್‌ ಮಾದರಿಯ ಮದ್ಯದ ಭೂ ಪ್ರದೇಶ ಕಡಲ್ಕೊರೆತಕ್ಕೆ ಈಡಾಗುತ್ತಿದ್ದು, ತುರ್ತುಕ್ರಮವಾಗಿಇನ್ನೊಂದು ರೀಫ್‌ ಮಾದರಿಯನ್ನು ಅಳವಡಿಸಿದರೆ ಮೊಗವೀರಪಟ್ಣದ ಸಮಸ್ಯೆ ಪರಿಹಾರವಾಗಲಿದೆ ಎಂದು ಮೊಗವೀರ ಮುಖಂಡರಾದ ಭರತ್‌ ಉಳ್ಳಾಲ, ಸದಾನಂದ ಬಂಗೇರ, ಮತ್ತು ಸುಧೀರ್‌ ವಿ. ಅಮೀನ್‌, ದಯಾನಂದ್‌ ಅವರು ಯು.ಟಿ. ಖಾದರ್‌ ಅವರಿಗೆ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಖಾದರ್‌ ಮಾತನಾಡಿ, ಹಂತ ಹಂತವಾಗಿ ಇಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.

ನ್ಯೂ ಉಚ್ಚಿಲ ರಸ್ತೆ ಸಂಪರ್ಕ ಕಡಿತದ ಭೀತಿ

ನ್ಯೂ ಉಚ್ಚಿಲದ ವಾಸ್ಕೊ ರೆಸಾರ್ಟ್‌ ಮುಂದೆ ಕಡಲು ಪ್ರಕ್ಷುಬ್ಧಗೊಂಡಿದ್ದು,ಉಚ್ಚಿಲ-ಸೋಮೇಶ್ವರ ಸಂಪರ್ಕ ರಸ್ತೆ ಕಡಿತಗೊಳ್ಳುವ ಭೀತಿ ಎದುರಾಗಿದೆ. ಪ್ರದೇಶದ ಕಡಲ ತೀರದಲ್ಲಿರುವ ಯೋಗೀಶ್‌ ಅವರ ಮನೆಯು ಕೊಚ್ಚಿ ಹೋಗುವ ಹಂತದಲ್ಲಿದೆ. ನ್ಯೂ ಉಚ್ಚಿಲಕ್ಕೆ ಭೇಟಿ ನೀಡಿದ ಖಾದರ್‌ ಅವರು ಯೋಗೀಶ್‌ ಅವರನ್ನ ಭೇಟಿ ನೀಡಿ ಧೈರ್ಯ ತುಂಬಿದರು. ಮನೆ, ಸಂಪರ್ಕ ರಸ್ತೆಗೆ ಹಾನಿಯಾಗಲು ನಾವು ಬಿಡುವುದಿಲ್ಲ ತತ್‌ ಕ್ಷಣವೇ ತಾತ್ಕಾಲಿಕ ರಕ್ಷಣಾ ಕಾಮಗಾರಿ ನಡೆಸಲು ಆದೇಶಿಸಿರುವುದಾಗಿ ಹೇಳಿದರು.

ಖಾಸಗಿ ಜಾಗಕ್ಕೆ ಕಲ್ಲು ಹಾಕಲು ನಿಯಮ ಜಾರಿ

ಕೆಲವರು ಸಮುದ್ರ ತೀರದ ತಮ್ಮ ಜಾಗದ ಮುಂದೆ ಅಲೆಗಳನ್ನು ನಿಯಂತ್ರಿಸಲು ಕಲ್ಲುಗಳನ್ನು ಹಾಕುತ್ತಿದ್ದಾರೆ. ಸಾರ್ವಜನಿಕ ರಸ್ತೆಯ ಜಾಗ ಬಿಟ್ಟು, ಭವಿಷ್ಯದ ಕಾಮಗಾರಿಗೆ ತೊಂದರೆ ಕೊಡದಂತೆ ಖಾಸಗಿಯವರು
ಅಧಿಕಾರಿ ಗಳಿಂದ ಒಪ್ಪಿಗೆ ತೆಗೆದೇ ಸಮುದ್ರ ತೀರಕ್ಕೆ ಕಲ್ಲುಗಳನ್ನು ಹಾಕುವ ಕಾಮಗಾರಿ ನಡೆಸಬೇಕೆಂಬ ನಿಯಮ ಮಾಡಿರುವುದಾಗಿ ಸ್ಪೀಕರ್‌ ಖಾದರ್‌ಹೇಳಿದರು. ಮಂಗಳೂರು ಸಹಾಯಕ ಕಮಿಷನರ್‌ ಹರ್ಷವರ್ಧನ್‌, ಉಳ್ಳಾಲ ತಾಲೂಕುತಹಶೀಲ್ದಾರ್‌ ಪುಟ್ಟರಾಜು, ಬಂದರು ಇಲಾಖೆ ಅಧಿಕಾರಿ ರಾಜೇಶ್‌, ಉಳ್ಳಾಲ ನಗರಸಭಾ ಕಮಿಷನರ್‌ ವಾಣಿ ವಿ. ಆಳ್ವ, ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮಾಲಿನಿ,ಕಂದಾಯ ಅಧಿಕಾರಿ ಪ್ರಮೋದ್‌ ಕುಮಾರ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಶೆಟ್ಟಿ ಬೋಳಿಯಾರು,ಮುಖಂಡರಾದ ಸುರೇಶ್‌ ಭಟ್ನಗರ, ರವಿಶಂಕರ್‌ ಸೋಮೇಶ್ವರ, ಆಯೂಬ್‌ಮಂಚಿಲ, ಮಹಮ್ಮದ್‌ ಮುಕ್ಕಚ್ಚೇರಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Surathkal: ಕಾಟಿಪಳ್ಳ ಮಸೀದಿ ಕಲ್ಲು ತೂರಾಟ ವಿಚಾರ; ನಾಲ್ವರನ್ನು ಬಂಧಿಸಿದ ಪೊಲೀಸರು

Surathkal: ಕಾಟಿಪಳ್ಳ ಮಸೀದಿಗೆ ಕಲ್ಲು: 6 ಮಂದಿ ಸೆರೆ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

ನಿಂದನೆ ಒಪ್ಪದ ಶಾಸಕ ಮುನಿರತ್ನ; 2ನೇ ಧ್ವನಿ ಪರೀಕ್ಷೆ

taliban

Afghanistan; ಪೋಲಿಯೋ ಲಸಿಕೆಗೆ ತಾಲಿಬಾನ್‌ ತಡೆ: ವಿಶ್ವಸಂಸ್ಥೆ ಆರೋಪ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.