Karnataka ಕಾಂಗ್ರೆಸ್‌ನಲ್ಲಿ ಸದ್ಯವೇ ದಲಿತ ಸಿಎಂ: ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯರಿಂದ ದಲಿತರಿಗೆ ಮೋಸ ; ಓಟ್‌ ಬ್ಯಾಂಕ್‌ ಉಳಿಸಿಕೊಳ್ಳಲು ದಲಿತ ಸಿಎಂ ಮಾಡಲು ಕಾಂಗ್ರೆಸ್‌ ಪ್ರಯತ್ನ

Team Udayavani, Aug 1, 2024, 6:30 AM IST

Karnataka ಕಾಂಗ್ರೆಸ್‌ನಲ್ಲಿ ಸದ್ಯವೇ ದಲಿತ ಸಿಎಂ: ಛಲವಾದಿ ನಾರಾಯಣಸ್ವಾಮಿ

ನೂರಕ್ಕೆ ನೂರು ಪ್ರತಿಶತ ಸಿದ್ದರಾಮಯ್ಯನವರು ಈ ಬಾರಿ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುವುದಿಲ್ಲ. ಮುಡಾ, ವಾಲ್ಮೀಕಿ ಹಗರಣ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ, ದಲಿತ ಪರ ಯೋಜನೆಗಳ ರದ್ಧತಿ ಸೇರಿದಂತೆ ಅನೇಕ ನಡೆಗಳು ಅವರನ್ನು ಖಂಡಿತವಾಗಿಯೂ ಈ ಬಾರಿ ಬಲಿ ತೆಗೆದುಕೊಳ್ಳಲಿದೆ. ಆ ನಿಟ್ಟಿನಲ್ಲಿ ನಮ್ಮ ಹೋರಾಟವೂ ತೀವ್ರಗೊಳ್ಳಲಿದೆ ಎಂದು ವಿಧಾನ ಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ವಿಪಕ್ಷ ನಾಯಕರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಉದಯವಾಣಿ “ನೇರಾನೇರ’ ಸಂದರ್ಶನದಲ್ಲಿ ಈ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು ಸಿದ್ದರಾಮಯ್ಯ ದಲಿತ ಸಮುದಾಯಕ್ಕೆ ಮಾಡಿದ ಅತೀ ದೊಡ್ಡ ಮೋಸ. “ಸಿದ್ದರಾಮಯ್ಯನವರೇ ನೀವು ಇಷ್ಟು ವರ್ಷಗಳ ಕಾಲ ದಲಿತರ ಹೆಸರು ಹೇಳಿಕೊಂಡು ಈಗ ಅವರ ಚರ್ಮ ಕಿತ್ತು ಚಪ್ಪಲಿ ಮಾಡಿಕೊಂಡು ಬಿಟ್ಟಿರಿ’ ಎಂದು ನಾನು ಸದನದಲ್ಲೇ ಹೇಳಿದ್ದೇನೆ. ಸಂವಿಧಾನದ ಹೆಸರು ಹೇಳಿಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಕ್ಕಾಗಿ, ಅಂಬೇಡ್ಕರ್‌ ಹೆಸರು ಹೇಳಿಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯನವರ ಅಧಿಕಾರವನ್ನು ಬಲಿ ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಅಂಬೇಡ್ಕರ್‌ ಸಿದ್ಧಾಂತಕ್ಕೆ ಬೆಲೆ ಇರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂದರ್ಶನದ ಪೂರ್ಣಪಾಠ ಹೀಗಿದೆ…..

ಹಾಗಾದರೆ ಈ ಬಾರಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕನಸು ನನಸಾಗಲಿದೆಯೇ ?
ಒಂದೆಡೆ ಬಿಜೆಪಿಯಲ್ಲಿ ದಲಿತ ನಾಯಕರಿಗೆ ಗೌರವ ಆದ್ಯತೆ ನೀಡುತ್ತಿ ದ್ದರೆ, ಕಾಂಗ್ರೆಸ್‌ನಲ್ಲಿ ವ್ಯತಿರಿಕ್ತ ಬೆಳವಣಿಗೆ ನಡೆಯುತ್ತಿದೆ. ದಲಿತರ ಹಣ ನುಂಗುವಂಥದ್ದು, ಮುಡಾದಲ್ಲಿ ದಲಿತ ಕುಟುಂಬದ ಜಮೀನಿಗೆ ಸಿಗಬೇಕಾದ ಪರಿಹಾರವನ್ನು ಸಿಎಂ ಕುಟುಂಬ ಪಡೆಯುತ್ತಿರುವುದನ್ನು ನೋಡಿ ದಲಿತರು ಕುಪಿತಗೊಂಡಿದ್ದಾರೆ. ಅವರೆಲ್ಲ ಎಲ್ಲಿ ಬಿಜೆಪಿ ಕಡೆ ವಾಲಿ ಬಿಡುತ್ತಾರೋ ಎಂಬ ಆತಂಕ ಕಾಂಗ್ರೆಸ್‌ ನಾಯಕರನ್ನು ಕಾಡುತ್ತಿದೆ. ನಮ್ಮ ಅಂಗಡಿ ಖಾಲಿಯಾಗುತ್ತದೆ, ವ್ಯಾಪಾರ ನಿಂತು ಹೋಗುತ್ತದೆ ಎಂದು ದಲಿತರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಮಾಡ ಬೇಕೆಂಬ ಚಿಂತನೆ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ.

ಅಂದರೆ ಈ ಬಾರಿ ಸಿದ್ದರಾಮಯ್ಯ ಪೂರ್ಣಾವಧಿ ಅಧಿಕಾರದಲ್ಲಿ ಇರುವ ಸಾಧ್ಯತೆ ಇಲ್ಲವೇ ?
ನೂರಕ್ಕೆ ನೂರು ಪ್ರತಿಶತ ಸಿದ್ದರಾಮಯ್ಯನವರು ಈ ಬಾರಿ ಪೂರ್ಣಾ ವಧಿ ಮುಖ್ಯಮಂತ್ರಿಯಾಗಿರುವುದಿಲ್ಲ. ಮುಡಾ, ವಾಲ್ಮೀಕಿ ಹಗರಣ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ದುರ್ಬಳಕೆ, ದಲಿತ ಪರ ಯೋಜನೆಗಳ ರದ್ಧತಿ ಸೇರಿದಂತೆ ಅನೇಕ ನಡೆಗಳು ಸಿದ್ದರಾಮಯ್ಯನವರನ್ನು ಖಂಡಿತವಾಗಿಯೂ ಈ ಬಾರಿ ಬಲಿ ತೆಗೆದುಕೊಳ್ಳಲಿದೆ. ಸಂವಿಧಾನದ ಹೆಸರು ಹೇಳಿಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದಕ್ಕಾಗಿ, ಅಂಬೇಡ್ಕರ್‌ ಹೆಸರು ಹೇಳಿಕೊಂಡು ದಲಿತರಿಗೆ ಅನ್ಯಾಯ ಮಾಡಿದ್ದಕ್ಕಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯನವರ ಅಧಿಕಾರವನ್ನು ಬಲಿ ತೆಗೆದುಕೊಳ್ಳಲೇಬೇಕು.

ಶೀಘ್ರ ದಲಿತ ಸಿಎಂ ವಾದ ನಿಜವಾಗುತ್ತದೆಯೇ?
ನಾನು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಚರ್ಚೆಯನ್ನಷ್ಟೇ ಹೇಳುತ್ತಿದ್ದೇನೆ. ಇದು ಆಗುವ ಹಂತದಲ್ಲೂ ಇರಬಹುದು. ಆದರೆ ಇದು ಕಾಂಗ್ರೆಸ್‌ ಹೃದಯಪೂರ್ವಕವಾಗಿ ದಲಿತರನ್ನು ಮುಖ್ಯಮಂತ್ರಿಯನ್ನಾಗಿಸು ವುದಿಲ್ಲ. ಬಿಜೆಪಿ ದಲಿತರಿಗೆ ನೀಡುವ ಆದ್ಯತೆಗೆ ಇದು ಉತ್ತರವಾಗ ಲಿದೆಯೇ ವಿನಃ ದಲಿತರಿಗೆ ಹೃದಯದಿಂದ ಕೊಡುವುದಲ್ಲ. ಅರವತ್ತು ವರ್ಷ ದಲಿತರು ನಿಮ್ಮ ಜತೆ ನಿಂತರೂ ಹೊರಗಡೆಯಿಂದ ಬಂದ ಸಿದ್ದರಾಮಯ್ಯನವರಿಗೆ ಕೇವಲ ಆರು ವರ್ಷಕ್ಕೆ ಸಿಎಂ ಮಾಡಿದರು. ಖರ್ಗೆಯಂಥವರು 60 ವರ್ಷ ದುಡಿದರೂ ಮುಖ್ಯಮಂತ್ರಿ ಮಾಡು ವುದಕ್ಕೆ ಮನಸು ಮಾಡಲಿಲ್ಲ. ದಲಿತರ ಪರ ಎಂದು ಹೇಳುವ ಕಾಂಗ್ರೆಸ್‌ನಲ್ಲಿ ಮೂರು ಅಥವಾ ನಾಲ್ಕು ಕುಟುಂಬಗಳನ್ನು ಬಿಟ್ಟರೆ ಇಡಿ ಇತಿ ಹಾಸದಲ್ಲಿ ಬೇರೆ ಯಾರಿಗಾದರೂ ಶಾಶ್ವತವಾಗಿ ಅಧಿಕಾರ ಕೊಟ್ಟಿ ದ್ದಾರಾ, ಬೆಳೆಸಿದ್ದಾರಾ ? ಆ ಮೂರ್‍ನಾಲ್ಕು ಕುಟುಂಬಗಳನ್ನು ತೋರಿಸಿಕೊಂಡೇ ಕಾಂಗ್ರೆಸ್‌ ದಲಿತರ ವೋಟ್‌ ಗಿಟ್ಟಿಸುವ ಕೆಲಸ ಮಾಡುತ್ತಿದೆ.

ವಿಪಕ್ಷ ನಾಯಕನಾಗಿ ನಿಮ್ಮ ಗುರಿ ?
ಜನರ ಸಂಕಷ್ಟಕ್ಕೆ ಸ್ಪಂದಿಸುವುದಕ್ಕೆ ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ಇದುವರೆಗೆ ಜೀವನದಲ್ಲಿ ಕಪ್ಪು ಚುಕ್ಕೆ ಇಟ್ಟುಕೊಂಡವನ್ನಲ್ಲ. ಯಾವುದೇ ಕಳಂಕವಿಲ್ಲದೇ ಬದುಕಬೇಕೆಂಬ ಆಸೆ ನನ್ನಲ್ಲಿ ಇದೆ. ವಿಧಾನ ಪರಿಷತ್ತಿನ ನಿಕಟಪೂರ್ವ ವಿಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಒಂದು ಹೆಸರಿತ್ತು. ನಿಷ್ಕಳಂಕ ವ್ಯಕ್ತಿ ಎಂದು. ನಾನೀಗ ಅವರ ಸ್ಥಾನಕ್ಕೆ ಬಂದಿದ್ದೇನೆ. ಅದನ್ನೇ ಮುಂದುವರಿಸಿಕೊಂಡು ಹೋಗಬೇಕೆಂಬ ಜವಾಬ್ದಾರಿ ನನಗಿದೆ. ನನ್ನ ಇಡಿ ಜೀವನದಲ್ಲಿ ನನ್ನವರು ಎಂದು ಕೈ ಹಿಡಿದವರು ಯಾರು ಇಲ್ಲ. ನನ್ನನ್ನು ಕೈ ಹಿಡಿದಿದ್ದು ಒಂದು ಅಂಬೇಡ್ಕರ್‌ ಅವರ ತತ್ತಾ$Ìದರ್ಶ. ಇನ್ನೊಂದು ಬಿಜೆಪಿಯ ನಾಯಕತ್ವ.

ನಿಮಗೆ ಬಿಜೆಪಿ ಸೇರುವಾಗಲೇ ಈ ನಿರೀಕ್ಷೆ ಇತ್ತಾ ?
ನಾನು ರಾಜಕಾರಣ ಮಾಡುತ್ತಿದ್ದೇನೆ. ಪಿಯುಸಿ ಆದ ಮೇಲೆ ಡಿಗ್ರಿ ಮಾಡಲೇಬೇಕಲ್ಲ ? ನಾನು ಡಿಗ್ರಿ ಪೂರೈಸಿದ್ದೇನೆ. ಕಾಂಗ್ರೆಸ್‌ ನಾಯಕತ್ವ ನನ್ನನ್ನು ಗ್ರಹಿಸಲಿಲ್ಲ. ಆದರೆ ಬಿಜೆಪಿಯವರು ನನ್ನ ಯೋಗ್ಯತೆ ಗಮನಿಸಿದರು. ನನ್ನನ್ನು ಯಾವ ರೀತಿ ಎಲ್ಲಿ ಬಳಕೆ ಮಾಡಬೇಕೆಂಬ ವಿಶ್ವಾಸವೂ ಅವರಲಿತ್ತು. ನಾನು ಕೂಡ ಮೈಗಳ್ಳನಾಗದೇ ಎಲ್ಲವನ್ನೂ ಮರೆತು ಪಕ್ಷಕ್ಕೆ ನಾನು ತೊಡಗಿಸಿಕೊಂಡೆ. ಇವತ್ತಿಗೂ ನಾನು ಬೆಳಗ್ಗೆ ಎದ್ದ ತತ್‌ಕ್ಷಣ ಪಕ್ಷದ ಕಚೇರಿಗೆ ಹೋಗುತ್ತೇನೆ. ಮಧ್ಯಾಹ್ನ ಅಲ್ಲಿಯೇ ಊಟ ಮಾಡಿ ಸಂಜೆಯವರೆಗೂ ನಿಯೋಜಿಸಿದ ಕರ್ತವ್ಯ ನಿಭಾಯಿಸಿ, ಸಂಜೆ ಯಾವುದಾದರೊಂದು ಟಿವಿ ಚರ್ಚೆಯಲ್ಲಿ ಭಾಗವಹಿಸಿ ಸೀದಾ ಮನೆಗೆ ಹೋಗುತ್ತೇನೆ. ಇದನ್ನು ಬಿಟ್ಟರೆ ನನಗೆ ಯಾವ ಅಭ್ಯಾಸವಾಗಲಿ, ವ್ಯವಹಾರವಾಗಲಿ ಇಲ್ಲ. ಇದನ್ನು ಪಕ್ಷ ಗುರುತಿಸಿದೆ.

ಹಾಗಾದರೆ ಕಾಂಗ್ರೆಸ್‌ನಲ್ಲಿ ನಿಮ್ಮಂಥವರು ಇಲ್ಲವಾ ?
ಅಲ್ಲೂ ಇದ್ದಾರೆ. ಆದರೆ ಅಲ್ಲಿನ ನಾಯಕತ್ವ ಅಂಥವರನ್ನು ಗುರುತಿಸುವುದಿಲ್ಲ. ಬೆಳಗ್ಗೆಯಿಂದ ಸಂಜೆಯವರೆಗೆ ಎಲ್ಲೋ ಕೆಲಸ ಮಾಡಿ, ಸಂಜೆ ಟ್ರಿಮ್ಮಾಗಿ ಡ್ರೆಸ್‌ ಮಾಡಿಕೊಂಡು ಬಂದು ನಾಯಕರನ್ನು ಕಾರಲ್ಲಿ ಕುಳ್ಳಿರಿಸಿಕೊಂಡು ಬೇರೆ ಬೇರೆ ಕಡೆ ಸುತ್ತಾಡಿಸಿಕೊಂಡು ಬಂದವರನ್ನು ಮಾತ್ರ ಅಲ್ಲಿ ಗುರುತಿಸುತ್ತಾರೆ. ನಮ್ಮಲ್ಲಿ ಆ ವ್ಯವವಸ್ಥೆ ಇಲ್ಲ. ಇಲ್ಲಿ ಪಕ್ಷದ ಕೆಲಸ ಮಾಡಿ, ಜನರ ಜತೆಯಲ್ಲಿ ಬೆರೆತು ಬಂದವನಿಗೆ ಬೆಲೆ ಇದೆ. ಇದು ಬಿಜೆಪಿ ಹಾಗೂ ಅನ್ಯ ಪಕ್ಷದವರಿಗೆ ಇರುವ ವ್ಯತ್ಯಾಸ.

ನಿಮ್ಮ ಈ ಬೆಳವಣಿಗೆ ಕಾಂಗ್ರೆಸ್‌ನಲ್ಲಿರುವವರಿಗೂ ಸಂತೋಷ ತಂದಿರಬೇಕು ?
ನನ್ನಂತೆ ಅನ್ಯಾಯಕ್ಕೆ ಒಳಪಟ್ಟ ಸಹಸ್ರಾರು ಜನರು ಕಾಂಗ್ರೆಸ್‌ನಲ್ಲಿ ಇಂದಿಗೂ ಇದ್ದಾರೆ. ನಾನು ವಿಪಕ್ಷ ನಾಯಕನಾಗಿ ಘೋಷಣೆಯಾಗುತ್ತಿದ್ದಂತೆ ಹೆಚ್ಚು ಕರೆಗಳು ಬಂದಿದ್ದೇ ಕಾಂಗ್ರೆಸ್‌ ನಾಯಕರಿಂದ. ನಿನ್ನ ಬೆಳವಣಿಗೆ ನಮಗೆ ಖುಷಿ ತಂದಿದೆ. ನಾವು ಇಲ್ಲಿ ಸತ್ತೇ ಹೋಗಿದ್ದೇವೆ. ಇಲ್ಲಿ ನಮಗೆ ರಾಜಕೀಯ ಜೀವ ಬರುತ್ತದೆ ಎಂದು ಅನ್ನಿಸುತ್ತಿಲ್ಲ. ಅಂಥ ಪರಿಸ್ಥಿತಿಯಲ್ಲಿ ನಾವಿಲ್ಲಿ ಸಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

ನಿಮ್ಮ ಮುಂದೆ ಸವಾಲಿದೆ. ಗ್ಯಾರಂಟಿ ಹಣ ವರ್ಗಾವಣೆ, ಪ್ರಬುದ್ಧ ಯೋಜನೆ ಸ್ಥಗಿತ, ಮುಡಾ ಸೇರಿದಂತೆ ಹಲವು ಸವಾಲಿದೆ. ಸರಕಾರದ ವಿರುದ್ಧ ಹೋರಾಟಕ್ಕೆ ಸಿದ್ದವಾಗಿದ್ದೀರಾ ?
ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಮೇಲೆ 7ಡಿ ರದ್ದು ಪಡಿಸಿ, 7 ಸಿಯಲ್ಲಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿದರು. ಈ ಬಗ್ಗೆ ನಾನು ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಆಕ್ಷೇಪಿಸಿದೆ. ದಲಿತರ ಹಣವನ್ನು ಯಾವ ಸೆಕ್ಷನ್‌ ಮೂಲಕ ಗ್ಯಾರಂಟಿ ಯೋಜನೆಗೆ ವಿನಿಯೋಗಿಸಿದರೂ ತಪ್ಪೇ. ಇದರ ವಿರುದ್ಧ ನನ್ನ ಹೋರಾಟ ಮುಂದುವರಿಯುತ್ತದೆ. 11, 114 ಕೋಟಿ ರೂ. ಮೊದಲ ವರ್ಷದಲ್ಲಿ, 14, 282 ಕೋಟಿ ರೂ. ಒಟ್ಟಾರೆ 25, 396 ಕೋಟಿ ರೂ. ದಲಿತರ ಹಣವನ್ನು ಕಾಂಗ್ರೆಸ್‌ ಸರಕಾರ ಲೂಟಿ ಹೊಡೆದಿದೆ.
ಪ್ರಬುದ್ಧ ಯೋಜನೆಯಲ್ಲಿ ನಮ್ಮ ಮಕ್ಕಳು ಓದುತ್ತಿದ್ದರು. ವಿದೇಶದಲ್ಲಿ ಪಿಎಚ್‌.ಡಿ ಮಾಡುತ್ತಿದ್ದರು. ಆದರೆ ಈ ಸರಕಾರ ಅದನ್ನು ನಿಲ್ಲಿಸಿಬಿಟ್ಟಿದೆ. ಅದ್ಯಾರೋ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಮಣಿವಣ್ಣನ್‌, “ಹೊರ ದೇಶಕ್ಕೆ ಹೋಗಿ ಓದುವುದೆಲ್ಲ ವೇಸ್ಟ್‌’ ಎಂದು ನಮ್ಮ ವಿದ್ಯಾರ್ಥಿಗಳಿಗೆ ಹಂಗಿಸಿದ್ದಾರಂತೆ. ಇದರಿಂದ ರೋಸಿ ಹೋಗಿರುವ ನಮ್ಮ ವಿದ್ಯಾರ್ಥಿಗಳು ರಾಜ್ಯಪಾಲರ ಬಳಿಗೆ ಹೋಗಿ ನಮ್ಮ ಕಿಡ್ನಿ ಮಾರಾಟ ಮಾಡುವುದಕ್ಕೆ ಅವಕಾಶ ಕೊಡಿ, ನಾವು ವಿದೇಶಕ್ಕೆ ಹೋಗಿ ಪಿಎಚ್‌.ಡಿ ಮಾಡುತ್ತೇವೆ’ ಎಂಬ ಪರಿಸ್ಥಿತಿಗೆ ಸಿದ್ದರಾಮಯ್ಯನವರ ಸರಕಾರ ದಲಿತ ಸಮುದಾಯದವರನ್ನು ತಂದಿದೆ. ಹೀಗಾಗಿ ನಮ್ಮ ಹೋರಾಟ ನಿರಂತರ.

ರಾಜ್ಯದಿಂದ ರಾಷ್ಟ್ರಮಟ್ಟದವರೆಗೂ ಕರ್ನಾಟಕದ ದಲಿತ ನಾಯಕರು ಅತ್ಯಂತ ಪ್ರಭಾವ ಶಾಲಿಗಳಾಗಿದ್ದಾರೆ. ಅವರ ಗಮನಕ್ಕೆ
ಇದೆಲ್ಲ ಇಲ್ಲವೇ ?
ರಾಜ್ಯ ಸರಕಾರ ನಮ್ಮ ಹಣವನ್ನು ದೋಚುತ್ತಿದ್ದರೂ ಅವರ್ಯಾರು ಮಾತನಾಡುತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ದಲಿತರೇ ! ಆದರೆ ನೀವು ಮಾಡುತ್ತಿರುವುದು ತಪ್ಪು ಎಂದು ರಾಜ್ಯ ಸರಕಾರದ ವಿರುದ್ಧ ಚಕಾರ ಎತ್ತಿಲ್ಲ. ಅದನ್ನು ಬಿಟ್ಟು ಸರಕಾರ ಹಾಗೂ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಂತಿದ್ದಾರೆ. ಖರ್ಗೆಯವರೂ ಸೇರಿ ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಆದರೆ ನಾನು ಸಮುದಾಯದ ಪರವಾಗಿ ನಿಂತು ಹೋರಾಡುತ್ತೇನೆ.

ಖರ್ಗೆಯವರ ಗಮನಕ್ಕೆ ತರುತ್ತೀರಾ ?
ಇಲ್ಲ. ನಾನು ಮಾಧ್ಯಮಗಳ ಮೂಲಕ ಅವರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದೇನೆ. ಆದರೆ ನೇರವಾಗಿ ಮಾಡಿಲ್ಲ. ಏಕೆಂದರೆ ನಾನು ಖರ್ಗೆಯವರ ಜತೆಗೆ ಬಹುಕಾಲ ಇದ್ದವನು. ಅವರ ಬಗ್ಗೆ ಬೇಸರಗೊಂಡು ಪಕ್ಷ ತ್ಯಜಿಸಿದೆ. ಅವರು ನನಗೆ ನ್ಯಾಯ ಕೊಡಿಸಲಿಲ್ಲ. ಏಳು ಬಾರಿ ನಾನು ಪ್ರಯತ್ನಿಸಿದರೂ ಅವರು ನನಗೆ ಅವಕಾಶ ಕಲ್ಪಿಸಲಿಲ್ಲ. ಒಮ್ಮೆಯಂತೂ ಅವರೇ ಅಧ್ಯಕ್ಷರಿದ್ದರು. ಎರಡು ಬಾರಿ ಪರಮೇಶ್ವರ ಇದ್ದರೂ ಸಿಗಲಿಲ್ಲ. ಹಾಗಾದರೆ ನನ್ನ ಕೈ ಹಿಡಿಯುವವರು ಯಾರು ?

ಯಾಕೆ ಹಾಗಾಯಿತು?
ಯಾಕೆಂದು ಅವರನ್ನೇ ನೀವು ಕೇಳಬೇಕು. ಅದೇ ಅವರ ಮಗ ಆದರೆ ? ಕಾಡಿಬೇಡಿ ಖರ್ಗೆ ಟಿಕೆಟ್‌ ತಂದರು. ಒಮ್ಮೆ ಅವರ ಮಗನಿಗೆ ಟಿಕೆಟ್‌ ಸಿಗುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಖರ್ಗೆ ಒಂದು ವಾರ ದಿಲ್ಲಿ ಬಿಟ್ಟು ಈಚೆ ಬರಲಿಲ್ಲ. ನಮಗೂ ಹಾಗೆ ಮಾಡಬಹುದಿತ್ತಲ್ಲ ? ಮಗನಿಗೆ ಅವರು ಫಾದರುÅ ; ಆದರೆ ನಾನು “ಗಾಡ್‌ ಫಾದರ್‌’ ಅಂದುಕೊಂಡಿದ್ದೆ. ಆದಾಗಿಯೂ ಅವರು ನನ್ನನ್ನು ತಿರಸ್ಕಾರ ಮಾಡಿದರು. ಹೀಗಾಗಿ ಯಾವುದೇ ವಿಚಾರ ಸೃಷ್ಟಿಯಾದರೂ ನಾನು ಅವರನ್ನು ಸಂಪರ್ಕಿ ಸುವ ಗೊಡವೆಗೆ ಹೋಗುವುದಿಲ್ಲ. ಆದರೆ ಮಾಧ್ಯಮಗಳ ಮೂಲಕ ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತೇನೆ. “ನನ್ನ ಜನರಿಗೆ ಅನ್ಯಾಯ ಆಗುತ್ತಿದೆ ಎಂದು ನನಗನಿಸಿದಂತೆ ಅವರಿಗೂ ಅನ್ನಿಸಲಿ.

ಖರ್ಗೆಯವರ ಬಳಿಕ ಕರ್ನಾಟಕದಲ್ಲಿ ದಲಿತ ನಾಯಕರಾದ ತಮಗೆ ಸಂವಿಧಾನಾತ್ಮಕ ಜವಾಬ್ದಾರಿ ಸಿಕ್ಕಿದೆ. ಇದನ್ನು ನಿರೀಕ್ಷೆ ಮಾಡಿದ್ದಿರಾ ?
ಬಿಜೆಪಿಯಲ್ಲಿ ನನಗೆ ಇದು ಯೋಗದಿಂದ ಬಂದಿದ್ದಲ್ಲ, ಯೋಗ್ಯತೆಯಿಂದ ಬಂದಿದ್ದು. ನಾನು ಈ ಮಾತನ್ನು ಸದನದಲ್ಲೂ ಹೇಳಿದ್ದೇನೆ. ಆದರೆ ನಾನು ನಲವತ್ತು ವರ್ಷಗಳ ಕಾಲ ಯಾರನ್ನು ಮತ್ತು ಯಾವ ಪಕ್ಷವನ್ನು ನಂಬಿದ್ದೆನೋ, ಅವರು ನನ್ನ ಯೋಗ್ಯತೆಯನ್ನು ಗುರುತಿಸುವಲ್ಲಿ ವಿಫ‌ಲರಾದರು. ನನ್ನಂಥ ಅನೇಕರಿಗೆ ಕಾಂಗ್ರೆಸ್‌ನಲ್ಲಿ ಅನ್ಯಾಯವಾಗಿದೆ. ನನ್ನ ಯೌವ್ವನದ ಬದುಕಿನ ನಲವತ್ತು ವರ್ಷವನ್ನು ಒಂದು ಪಕ್ಷಕ್ಕೆ ಮುಡಿಪಾಗಿಟ್ಟಾಗ ನನ್ನ ಯೋಗ್ಯತೆ ಯನ್ನು ಗುರುತಿಸುವುದಕ್ಕೆ ಸಾಧ್ಯವಾಗಿಲ್ಲ ಎಂದರೆ ನನ್ನ ತಾಳ್ಮೆಗೂ ಒಂದು ಮಿತಿ ಇರುತ್ತದೆಯಲ್ಲವೇ ? ಆ ತಾಳ್ಮೆಯ ಕಟ್ಟೆ ಒಡೆದಾಗ ನನ್ನ ತೀರ್ಮಾನವನ್ನು ನಾನು ಮಾಡಬೇಕಾಯ್ತು. ಬಿಜೆಪಿಗೆ ಬಂದೆ. ಪಕ್ಷದ ನಾಯಕತ್ವ ನನ್ನನ್ನು ಗುರುತಿಸಿದೆ. ಇಲ್ಲಿ ಪಕ್ಷದ ನಾಯಕತ್ವ ಹೇಗಿದೆಯೆಂದರೆ ಯೋಗ್ಯರನ್ನು ಯೋಗ್ಯ ಸ್ಥಾನದಲ್ಲಿ ಕುಳ್ಳಿರಿಸುತ್ತದೆ.

ಉದಯವಾಣಿ ಸಂದರ್ಶನ:  ರಾಘವೇಂದ್ರ ಭಟ್‌

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

ನಾನೂ ಸೀನಿಯರ್‌ ಲೀಡರ್‌, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ

BR-patil

Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

Congress ಪಕ್ಷದ‌ಲ್ಲಿ ನಾಯಕತ್ವಕ್ಕಾಗಿ ಗಲಾಟೆ ಇಲ್ಲ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.