![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 1, 2024, 2:09 PM IST
ಸಾಸ್ತಾನ: ಸಾಸ್ತಾನದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಬಾರಕೂರನ್ನುಸಂಪರ್ಕಿಸುವ ರಸ್ತೆಯಲ್ಲಿ ಬೆಣ್ಣೆಕುದ್ರು ಬಳಿ ನಿರ್ಮಾಣಗೊಂಡ ನೂತನ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಈಗ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಭಾಗಶಃ ಶಿಥಿಲಗೊಂಡಿದ್ದ ಕಿರು ಸೇತುವೆಗೆ ಬದಲಾಗಿ ನಿರ್ಮಿಸಲ್ಪಟ್ಟ ನೂತನ ಸೇತುವೆ ಕಾಮಗಾರಿ ಮಳೆಗಾಲದ ಮುನ್ನ ಪೂರ್ಣಗೊಂಡಿದ್ದು, ಈಗಾಗಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇತುವೆಯ ಕೂಡುರಸ್ತೆಗೆ ಡಾಮರೀಕರಣ ಹಾಗೂ ತಡೆಗೋಡೆ ಕಾಮಗಾರಿ ಬಾಕಿ ಉಳಿದಿದ್ದು ಮಳೆಗಾಲ ಮುಗಿಯುತ್ತಿದ್ದಂತೆ ಸೇತುವೆಯಲ್ಲಿ ಈ ಕಾಮಗಾರಿಗಳು ಪೂರ್ಣಗೊಂಡು ಮುಕ್ತ ಸಂಚಾರಕ್ಕೆ ಅಧಿಕೃತ ಚಾಲನೆ ದೊರಕಲಿದೆ.
ಬೃಹತ್ ವಾಹನ ಬಿಟ್ಟು ಲಘು ವಾಹನಗಳು ತಿರುಗಾಡಲು ಈಗಾಗಲೇ ಅನುವು ಮಾಡಿಕೊಡಲಾಗಿದ್ದು, ಈ ಭಾಗದ ಜನರಿಗೆ ಈ ಹಿಂದೆ ಇದ್ದ ಸಂಚಾರ ತೊಂದರೆಗಳು ದೂರವಾಗಲಿದೆ.
ಸಾಸ್ತಾನದಿಂದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಪಾಂಡೇಶ್ವರ, ಮೂಡಹಡು, ಬೆಣ್ಣೆಕುದ್ರು ಗ್ರಾಮದ ಮೂಲಕ ಬಾರಕೂರನ್ನು ಸಂಪರ್ಕಿಸುವ ಈ ರಸ್ತೆ ಇನ್ನು ಮುಖ್ಯ ರಸ್ತೆಯಾಗಿ ಮಾರ್ಪಾಡಾಗಿ ಕುಂದಾಪುರದಿಂದ
ಸಾಸ್ತಾನದ ತನಕದ ಜನರಿಗೆ ಸುಲಭ ಸಂಪರ್ಕ ಕೊಂಡಿ ರಸ್ತೆಯಾಗಿ ಮೂಡಿಬರಲಿದೆ.
ಸಾಸ್ತಾನ -ಬೆಣ್ಣೆಕುದ್ರು -ಬಾರಕೂರು ರಸ್ತೆ ಸಂಚಾರ ಮಾರ್ಗವನ್ನು ವಿಸ್ತರಿಸಿ ಆಭಿವೃದ್ಧಿ ಪಡಿಸುವ ಬಗ್ಗೆ ಹಲವಾರು ಸಮಯದಿಂದ ಬಂದ ಬೇಡಿಕೆ ಬಂದಹಿನ್ನಲೆಯಲ್ಲಿ ಹಿಂದಿನ ಅಗಲ ಕಿರಿದಾದ ರಸ್ತೆಯನ್ನು ಕೆಲವು ಭಾಗಗಳಲ್ಲಿ ವಿಸ್ತರಿಸಿ ಆಭಿವೃದ್ಧಿಗೊಳಿಸಿದ್ದರೂ ಇನ್ನು ಕೆಲವು ಕಡೆ ರಸ್ತೆ ವಿಸ್ತರಿಸಲು ಬಾಕಿ ಇದೆ. ಹಿಂದಿನ ಸೇತುವೆ ಸಂಚಾರಕ್ಕೆ ತೊಡಕಾದ ಹಂತದಲ್ಲಿ ಇಲಾಖೆ ಇಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕಾರ್ಯೋನ್ಮುಖಗೊಂಡಿದ್ದು, ಸೇತುವೆ ಕಾಮಗಾರಿ ಶೀಘ್ರವಾಗಿ ನಿರ್ಮಾಣಗೊಂಡಿರುವುದು ಜನರಲ್ಲಿ ಸಂತಸ ಮೂಡಿಸಿದೆ.
ಇನ್ನಷ್ಟು ಅಭಿವೃದ್ಧಿ
ಬಾರಕೂರು- ಬೆಣ್ಣೆಕುದ್ರು ನೂತನ ಸೇತುವೆ ನಿರ್ಮಾಣ ಈ ಭಾಗದ ಜನರಿಗೆ ಸಂತಸ ತಂದಿದೆ. ಮುಂದಿನ ವರ್ಷಗಳಲ್ಲಿ ಬೆಣ್ಣೆಕುದ್ರು – ಪಾಂಡೇಶ್ವರ ಪರಿಸರದಲ್ಲಿಬಹಳಷ್ಟು ಅಭಿವೃದ್ಧಿಯಾಗುವ ಸೂಚನೆಗಳಿದ್ದು ಈ ಸೇತುವೆ ನಿರ್ಮಾಣ ಈ ಪ್ರಗತಿ ಕಾರ್ಯಗಳಿಗೆ ಮುನ್ನುಡಿಯಾಗಲಿದೆ ಎಂದು ಬೆಣ್ಣೆಕುದ್ರು ನಿವಾಸಿ ಸತೀಶ್ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.
ಬಹುತೇಕಕಾಮಗಾರಿ ಪೂರ್ಣ
ಬಾರಕೂರು- ಬೆಣ್ಣೆಕುದ್ರು ಸೇತುವೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ. ಉಳಿದಂತೆ ಸೇತುವೆ ಕೂಡುರಸ್ತೆ ಹಾಗೂ ಪ್ರತಿಬಂಧ ನಿರ್ಮಾಣ ಕಾರ್ಯ ಕೂಡಲೇ ಪ್ರಾರಂಭವಾಗಲಿದೆ. ಅಧಿಕ ಭಾರದ ವಾಹನಗಳು ಸಂಚರಿಸದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಉಡುಪಿಯ ಸಹಾಯಕ ಎಂಜಿನಿಯರ್‌ಶಾಂತಾರಾಮ್ ಆಚಾರ್ಯ ತಿಳಿಸಿದ್ದಾರೆ.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.