Ramanagar: ರಾಮದೇವರ ಬೆಟ್ಟದಲ್ಲಿ ಬೃಹತ್‌ ರಾಮಮಂದಿರ


Team Udayavani, Aug 1, 2024, 5:52 PM IST

10

ರಾಮನಗರ: ಅಯೋಧ್ಯೆಯಲ್ಲಿರುವ ಮತ್ತೂಂದು ರಾಮನ ವಿಗ್ರಹವನ್ನು ತಂದು ರಾಮನಗರದ ರಾಮದೇವರ ಬೆಟ್ಟದಲ್ಲಿ ಪ್ರತಿಷ್ಠಾಪಿಸಲು ಚಿಂತನೆ ನಡೆಸಿದ್ದೇವೆ. ಈ ಸಂಬಂಧ ಅಲ್ಲಿ ಮತ್ತೂಂದು ವಿಗ್ರಹ ಕೆತ್ತನೆ ಮಾಡಿರುವ ನಾಡಿನ ಶಿಲ್ಪಿ ಗಣೇಶ್‌ಭಟ್‌ ಅವರಿಗೂ ಮನವಿ ಮಾಡಿದ್ದೇನೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ತಿಳಿಸಿದರು.

ಅಯೋಧ್ಯೆಯಲ್ಲಿ ಕನ್ನಡಿಗ ಗಣೇಶ್‌ಭಟ್‌ ಕೆತ್ತನೆ ಮಾಡಿದ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗದ ಹಿನ್ನೆಲೆಯಲ್ಲಿ. ಈ ಮೂರ್ತಿಯನ್ನು ಕರ್ನಾಟಕದಲ್ಲಿ ಯಾರಾದರೂ ತಂದು ಪ್ರತಿಷ್ಠಾಪಿಸಲಿ ಎಂಬ ಗಣೇಶ್‌ ಭಟ್‌ ಅವರ ಆಶಯವನ್ನು ಉದಯವಾಣಿ ಪ್ರಕಟಿಸಿತ್ತು. ಈ ವರದಿಯ ಬೆನ್ನಲ್ಲೇ ರಾಮನಗರದಲ್ಲಿ ಪ್ರತಿಷ್ಠಾಪಿಸಲು ಶಾಸಕ ಇಕ್ಬಾಲ್‌ ಹುಸೇನ್‌ ಸಿದ್ಧವಿರುವ ಬಗ್ಗೆ ಸಹ ಪತ್ರಿಕೆ ವರದಿ ಮಾಡಿತ್ತು. ಬುಧವಾರ ರಾಮದೇವರ ಬೆಟ್ಟದ ಅಭಿವೃದ್ಧಿ ಕಾರ್ಯದ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳಿ ಪರಿಶೀಲನೆ ನಡೆಸಿದ ಅವರು, ಈಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡಿದ್ದು, ಅವರು ಒಪ್ಪಿಗೆ ನೀಡಿದ್ದಾರೆ.

ನಮ್ಮ ನಾಯಕರಾದ ಡಿ.ಕೆ.ಸುರೇಶ್‌ ಅವರು ಈ ಬಗ್ಗೆ ಸಾಕಷ್ಟು ಶ್ರಮ ಹಾಕಿದ್ದು, ಭವ್ಯ ರಾಮ ಮಂದಿರ ನಿರ್ಮಾಣ ಮಾಡಲು ನಾವು ಸಿದ್ಧವಿದ್ದೇವೆ ಎಂದು ತಿಳಿಸಿದರು.

ಭಕ್ತಿಯಿಂದ ಕಟ್ಟುತ್ತೇವೆ: ಈ ಹಿಂದೆ ದಕ್ಷಿಣ ಅಯೋಧ್ಯೆ ಮಾದರಿಯಲ್ಲಿ ರಾಮಮಂದಿರ ಕಟ್ಟುವು ದಾಗಿ ಬಿಜೆಪಿ ಸರ್ಕಾರ ಹೇಳಿದ್ದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಕ್ಬಾಲ್‌ಹುಸೇನ್‌, ಬಿಜೆಪಿ ಯವರು ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಹೊರಗಿನಿಂದ ಬಂದವರು ರಾಜ ಕಾರಣ ಮಾಡಿಕೊಂಡು ಹೋಗುತ್ತಾರೆ. ಆದರೆ, ನಾವು ಈ ಜಿಲ್ಲೆಯವರು, ರಾಜಕಾರಣ ಮಾಡಲು ಆಗುವುದಿಲ್ಲ. ಭಕ್ತಿಯಿಂದ ರಾಮಮಂದಿರ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಇಡೀ ದೇಶವೇ ತಿರುಗಿ ನೋಡುವ ರಾಮಮಂದಿರ ಕಟ್ಟುತ್ತೇವೆ ಎಂದು ತಿಳಿಸಿದರು.

ನಾವು ರಾಮನ ಹೆಸರಿನಲ್ಲಿ ರಾಜಕಾರಣ, ಜೀವನ ಮಾಡಲ್ಲ: ನಮ್ಮ ಜನ ಸಾವಿರಾರು ವರ್ಷಗಳಿಂದ ರಾಮನನ್ನು ಪೂಜೆ ಮಾಡಿಕೊಂಡು ಬಂದಿದ್ದಾರೆ. ನಾವು ಸಹ ಹುಟ್ಟಿದಾಗಿನಿಂದ ರಾಮನನ್ನು ಪೂಜಿಸು ತ್ತಿದ್ದೇವೆ. ನಾವು ರಾಮನ ಹೆಸರಿನಲ್ಲಿ ರಾಜಕಾರಣ, ಜೀವನ ಎರಡನ್ನೂ ಮಾಡುವುದಿಲ್ಲ.ನಾವು ಭಕ್ತಿ ಯಿಂದ ಕೆಲಸ ಮಾಡುತ್ತೇವೆ. ನಾವು ಬೇರೆಯವರ ರೀತಿಯಲ್ಲ, ನಾವು ಈ ಜಿಲ್ಲೆಯ ಮಕ್ಕಳು ಇಲ್ಲೇ ಹುಟ್ಟಿದ್ದೇವೆ. ಇಲ್ಲೇ ಮಣ್ಣಾಗುತ್ತೇವೆ ಬೇರೆಯವರ ರೀತಿ ಈ ವಿಚಾರದಲ್ಲಿ ರಾಜಕಾರಣ ಮಾಡಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಲಸೌಕರ್ಯಕ್ಕೆ ಕ್ರಮ: ರಾಮದೇವರ ಬೆಟ್ಟಕ್ಕೆ ಮೂಲ ಸೌಕರ್ಯ ಕಲ್ಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳ ಲಾಗುವುದು. ಬುಧವಾರ ಭೇಟಿ ನೀಡಿ ಇಲ್ಲಿನ ಕುಂದುಕೊರತೆಗಳನ್ನು ವೀಕ್ಷಿಸಿದ್ದೇನೆ. ಭಕ್ತರ ಸುರಕ್ಷತೆಗೆ ರೇಲಿಂಗ್ಸ್‌ ಅಳವಡಿಸುವುದು, ಮಹಿಳಾ ಭಕ್ತರಿಗೆ ಅನಾನುಕೂಲವಾಗುತ್ತಿದ್ದು, ಶೌಚಾಲಯ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವುದು, ಭಕ್ತರು ದಾಸೋಹ ನಡೆಸಲು ಅನುಕೂಲ ವಾಗುವಂತೆ ದಾಸೋಹ ಭವನ, ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ತೇಜಸ್ವಿನಿ, ಪೌರಾಯುಕ್ತ ಡಾ.ಜಯಣ್ಣ, ಶ್ರೀ ರಾಮಗಿರಿ ಸೇವಾ ಸಮಿತಿ ಅದ್ಯಕ್ಷ ಎಸ್‌. ನರಸಿಂಹಯ್ಯ, ಗೌರವಾಧ್ಯಕ್ಷ ಶೇಷಾದ್ರಿ ಅಯ್ಯರ್‌, ಖಜಾಂಚಿ ಪದ್ಮನಾಭ್‌, ಸಹ ಕಾರ್ಯ ದರ್ಶಿ ಗಳಾದ ಯತೀಶ್‌, ವೆಂಕಟೇಶ್‌, ಸಂತೋಷ್‌.ಪಿ, ಜಗದೀಶ್‌, ಮುಖಂಡ ಸಿಎನ್‌. ಆರ್‌.ವೆಂಕಟೇಶ್‌, ದೇವಾಲಯದ ಅರ್ಚಕ ನಾಗರಾಜು ಭಟ್‌, ಮುಖಂಡರಾದ ನಾಗರಾಜು, ಗುರು ಪ್ರಸಾದ್‌, ಅನಿಲ್‌ ಜೋಗೇಂದರ್‌, ವಾಸು, ಪಾದ್ರಳ್ಳಿ ಮಹದೇವು, ಪರ್ವಿಜ್‌ ಪಾಷ, ಶ್ರೀನಿವಾಸ, ವಸೀಂ, ಆಯಿಷಾ, ಪವಿತ್ರಾ, ಗಿರಿಜಮ್ಮ, ಆರೀಪ್‌, ಹರೀಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಇದ್ದರು.

ರಾಮನಗರ ಹೆಸರು: ಯಾರೂ ತೆಗೆಯೋಲ್ಲ ನಮ್ಮ ಸರ್ಕಾರ ಜಿಲ್ಲೆಯ ಹೆಸರನ್ನು ಮಾತ್ರ ಬದಲಾವಣೆ ಮಾಡುತ್ತಿದೆಯೇ ವಿನಾ ರಾಮ ನಗರದ ಹೆಸರನ್ನಲ್ಲಾ. ರಾಮನಗರದ ಹೆಸರು ಎಲ್ಲಿಗೂ ಹೋಗುತ್ತಿಲ್ಲ. ರಾಮನಗರ ಹೆಸರೂ ಇರಲಿದೆ, ಶ್ರೀರಾಮಚಂದ್ರನ ಬೆಟ್ಟವೂ ಇರಲಿದೆ. ಅಭಿವೃದ್ಧಿಗಾಗಿ ಜಿಲ್ಲೆಯ ಹೆಸರನ್ನು ಮೊದಲು ಇದ್ದ ರೀತಿ ಮರು ನಾಮಕರಣ ಮಾಡುತ್ತಿದ್ದೇವೆ ಅಷ್ಟೇ. ಈ ನೆಲ ಪವಿತ್ರ ಇತಿಹಾಸ ಹೊಂದಿದ್ದು, ಪ್ರಭು ಶ್ರೀ ರಾಮದೇವರು ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆ ಇದೆ. ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಅರ್ಥಪೂರ್ಣ ರಾಮೋತ್ಸವ: ಮೊದಲಬಾರಿಗೆ ರಾಮನಗರದಲ್ಲಿ ರಾಮೋತ್ಸವ ಆಚರಿಸಲು ತಯಾರಿ ನಡೆಸುತ್ತಿದ್ದೇವೆ. ರಾಮದೇವರ ಬೆಟ್ಟದ ಸಮಿತಿ, ಹಿರಿಯರನ್ನು ಗಣನೆಗೆ ತೆಗೆದುಕೊಂಡು ಅವರ ಸಲಹೆ ಸೂಚನೆ ಮೇರೆಗೆ ರಾಮೋತ್ಸವ ಮಾಡುತ್ತೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ ಕೈ ಹಾಕುತ್ತಿದ್ದೇವೆ. ಎಲ್ಲಾ ಜಾತಿ ಧರ್ಮ ಒಗ್ಗೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.