ಮಾನವಿಯತೆ ಮೆರೆದ ಕಂದಾಯ ಅಧಿಕಾರಿ: ಸುದ್ದಿ ಪ್ರಕಟವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಡಿಸಿ
Team Udayavani, Aug 2, 2024, 11:42 AM IST
ತೀರ್ಥಹಳ್ಳಿ : ಜೀವ ಉಳಿಸಲು ವೈದ್ಯರು ಎಷ್ಟು ಮುಖ್ಯವೋ ನಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಇರುವ ಆಂಬುಲೆನ್ಸ್ ವಾಹನ ಕೂಡ ಅಷ್ಟೇ ಮುಖ್ಯ. ಆದರೆ ಬೆಂಗಳೂರು 108 ಸಿಬ್ಬಂದಿಗಳ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತವಾದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಪುಷ್ಯ ಮಳೆ ಅಬ್ಬರಕ್ಕೆ ತಾಲೂಕಿನಾದ್ಯಂತ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ಪ್ರವಾಹ ಬಂದ ಹಿನ್ನಲೆಯಲ್ಲಿ ಕುರುವಳ್ಳಿಯ ಜಯಚಾಮರಾಜೇಂದ್ರ ತುಂಗಾ ಸೇತುವೆ ಪಕ್ಕ ವಾಸಿಸುವ ಟೆಂಟ್ ತುಂಗಾ ಕಾಲೋನಿ ನಿವಾಸಿಗಳನ್ನು ಪಟ್ಟಣದ ಕೆ ಟಿ ಕೆ ಕಲ್ಯಾಣ ಮಂಟಪ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ಈ ಕಾಳಜಿ ಕೇಂದ್ರದ ನಿರಾಶ್ರಿತರಲ್ಲಿ 9 ತಿಂಗಳು ತುಂಬಿದ ತುಂಬು ಗರ್ಭಿಣಿ ಮಹಿಳೆ ಇದ್ದು ಅವರಿಗೆ ತಿವ್ರ ತರದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ 108 ಆಂಬುಲೆನ್ಸ್ ಗೆ ಅಲ್ಲೇ ಇದ್ದ ನಿರಾಶ್ರಿತರಲ್ಲಿ ಒಬ್ಬರು ಕರೆ ಕೂಡ ಮಾಡಿದ್ದಾರೆ. ಕರೆ ಮಾಡಿ 45 ನಿಮೀಷ ವಾದರೂ ಆಂಬುಲೆನ್ಸ್ ಬಂದಿಲ್ಲ .ಮಳೆ ಇದ್ದುದರಿಂದ ರಸ್ತೆಯಲ್ಲಿ ಯಾವುದೇ ವಾಹನ ಕೂಡ ಇರಲಿಲ್ಲ ನಂತರ ಪುನಃ ಮತ್ತೆ 108 ಆಂಬುಲೆನ್ಸ್ ಗೆ ಕರೆ ಮಾಡಿದರೆ ತೀರ್ಥಹಳ್ಳಿ ಎಲ್ಲಿ ಬರುತ್ತೆ,ಕೆ.ಟಿ.ಕೆ ಎಲ್ಲಿ ಬರುತ್ತೆ… ? ಯಾವ ಊರು ನೀವು ಹೇಳಿದಲ್ಲಿಗೆ ಬರಲು ಆಗುವುದಿಲ್ಲ ಒಂದು ಘಂಟೆ ಕಾಯಿರಿ ಎಂದು ಬೇಜವಾಬ್ದಾರಿ ಮಾತನ್ನು ಬೆಂಗಳೂರು 108 ಆಂಬುಲೆನ್ಸ್ ಸಿಬ್ಬಂದಿಗಳು ಹೇಳಿದ್ದಾರೆ. ಆಂಬುಲೆನ್ಸ್ ಬಾರದ ಕಾರಣ ಮಹಿಳೆಗೆ ಹೊಟ್ಟೆ ತುಂಬಾ ನೋವಾಗಿ ವದ್ದಾಡುತ್ತಾ ಇರುವಾಗ ಅಲ್ಲಿನ ನಿರಾಶ್ರಿತರು ಏನಾದರೂ ಅವಗಢ ಆದ ಮೇಲೆ ಅಂಬುಲೆನ್ಸ್ ನವರು ಬರ್ತಾರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಯಚಾಮರಾಜೇಂದ್ರ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿಗಳು ಗಮನಿಸಿ ಮುಂದೆ ಈ ರೀತಿ ಆಗದಂತೆ ಜನರ ಕಷ್ಟಕ್ಕೆ ಸ್ಪಂದನೆ ಮಾಡುವಂತೆ 108 ಬೆಂಗಳೂರು ಆಂಬುಲೆನ್ಸ್ ಸಿಬ್ಬಂದಿಗಳಿಗೆ ತಿಳಿ ಹೇಳಬೇಕಿದೆ ಎನ್ನುವ ಸುದ್ದಿ ಉದಯವಾಣಿ ಪತ್ರಿಕೆ ವೆಬ್ ಸೈಟ್ ಸುದ್ದಿ ಮಾಡಲಾಗಿತ್ತು.
ಮಾನವೀಯತೆ ಮೆರೆದ ಕಂದಾಯ ಇಲಾಖೆ ಅಧಿಕಾರಿ ಸುಧೀರ್ ..!
ಈ ವೇಳೆ ನಿರಾಶ್ರಿತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅದಿಕಾರಿ ನಿರಾಶ್ರಿತರಿಗೆ ಕಾಫಿ, ಟೀ ಕೊಡಲು ತಾವೇ ಖುದ್ದಾಗಿ ಕೆ ಟಿ ಕೆ ಕಲ್ಯಾಣ ಮಂಟಪಕ್ಕೆ ಬರುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ರವರು ಮಹಿಳೆ ಹೊಟ್ಟೆ ನೋವೂ ತಾಳಲಾರದೆ ವದ್ದಾಡುವುದನ್ನು ನೊಡಿ ತಕ್ಷಣ ತಡಮಾಡದೇ 108 ವಾಹನ ಕಾಯದೆ ತಮ್ಮ ಕಾರಿನಲ್ಲಿ ಗರ್ಭಿಣಿ ಮಹಿಳೆಯನ್ನು ಕೂರಿಸಿಕೊಂಡು ಹೋಗಿ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ಸೆರಿಸಿದ್ದಾರೆ. ರಾತ್ರಿ ಗರ್ಭಿಣಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ, ತಾಯಿ ಮಗು ಆರೋಗ್ಯವಾಗಿದ್ದಾರೆ
ಆಸ್ಪತ್ರೆಯಲ್ಲಿ ಮಹಿಳೆ ಗಂಡು ಮಗುವಿಗೆ ಜನ್ಮ ನೀಡುತಿದ್ದಂತೆ ತುಂಗಾ ಕಾಲೋನಿ ನಿರಾಶ್ರಿತರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ತಕ್ಷಣ ಸ್ಪಂದಿಸಿದ ಕಂದಾಯ ಇಲಾಖೆ ಅಧಿಕಾರಿಗಳಾದ ಸುಧೀರ್ ಅವರ ಮಾನವೀಯತೆಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಎಲ್ಲಾ ನಿರಾಶ್ರಿತರು ಸಂತಸ ಪಟ್ಟು ಕಂದಾಯ ಇಲಾಖೆ ಅಧಿಕಾರಿ ಸುಧೀರ್ ಮತ್ತು ಮೋಹನೇಶ್, ಲೋಕೇಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಉದಯವಾಣಿಯಲ್ಲಿ ಬಂದ ಸುದ್ದಿ ನೋಡುತ್ತಿದ್ದಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಈಗಾಗಲೇ ತೀರ್ಥತಹಳ್ಳಿಯಲ್ಲಿರುವ ಕಾಳಜಿ ಕೇಂದ್ರಕ್ಕೆ ಎಲ್ಲಾ ಸೌಕರ್ಯ ನೀಡಲಾಗಿದೆ. ಚಿಕ್ಕ ಮಕ್ಕಳಿಗೆ ಹಾಲು, ಬ್ರೆಡ್, ಬಿಸ್ಕೆಟ್‌ಗಳನ್ನು ನೀಡಲು ತಿಳಿಸಿದ್ದೇನೆ. ತುಂಬು ಗರ್ಭಿಣಿ ಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯದೆ ಮೆರೆದ ಕಂದಾಯ ಅಧಿಕಾರಿಯ ಬಗ್ಗೆ ಪ್ರಶಂಸಿಸಿದರು. ಕಂದಾಯ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ ನಿರಾಶ್ರಿತರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನೀಡಲು ತಿಳಿಸುತ್ತೇನೆ. ಈಗಾಗಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳಲ್ಲಿ ಮಾತನಾಡಿದ್ದೇನೆ ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತಾಯಿ ಮಗುವಿಗೆ ಉತ್ತಮ ಆರೈಕೆ ಮಾಡಲು ತಿಳಿಸಿದ್ದೇನೆ. ನಿರ್ಲಕ್ಷ್ಯ ಮಾಡಿದ 108 ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿಲ್ಲಾಧಿಕಾರಿ ಗುರದತ್ ಹೆಗಡೆಯವರು ಉದಯವಾಣಿ ತೀರ್ಥಹಳ್ಳಿ ವಾರದಿಗಾರ ಶ್ರೀಕಾಂತ್ ನಾಯಕ್ ರವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು.
ಇದನ್ನೂ ಓದಿ: Wayanad Tragedy: 308 ಕ್ಕೇರಿದ ಮೃತರ ಸಂಖ್ಯೆ, ಡ್ರೋನ್ ಆಧಾರಿತ ರಾಡಾರ್ ಮೂಲಕ ಪತ್ತೆ ಕಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ
Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!
Covid scam: ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ಕಾನೂನು ಕ್ರಮ ಜರುಗಿಸಲು ಸಮಿತಿ ಶಿಫಾರಸು
By Poll: ಬಳ್ಳಾರಿಯಲ್ಲಿ ನಿಮ್ಮ ಅಟ್ಟಹಾಸ ಮುರಿದದ್ದು ಸಿದ್ದರಾಮಯ್ಯ ಅನ್ನೋದು ಮರೀಬೇಡಿ: ಸಿಎಂ
Belagavi: ಗ್ರಾಮ ಪಂಚಾಯತ್ ಕಟ್ಟಡಕ್ಕೆ ಕಿಡಿಗೇಡಿಗಳಿಂದ ಪೆಟ್ರೋಲ್ ಬಾಂಬ್ ಎಸೆತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.