Punjalkatte: ಗುದ್ದಲಿಪೂಜೆ ನಡೆದರೂ ಮುಂದುವರಿಯದ ಕಾಮಗಾರಿ
ಸಂಪೂರ್ಣ ಹದಗೆಟ್ಟ ಪುರಿಯ-ಕುಕ್ಕೇಡಿ ರಸ್ತೆ ಸಂಚಾರ ನಿಲ್ಲಿಸಿದ ಸರಕಾರಿ ಬಸ್
Team Udayavani, Aug 2, 2024, 2:06 PM IST
ಪುಂಜಾಲಕಟ್ಟೆ: ಬೆಳ್ತಂಗಡಿ ತಾಲೂಕು ಮಾಲಾಡಿ ಮತ್ತು ಕುಕ್ಕಳ ಗ್ರಾಮದಲ್ಲಿ ಹಾದು ಹೋಗುವ ಪುಂಜಾಲ ಕಟ್ಟೆ- ಪುರಿಯ-ಬುಳೆಕ್ಕರ (ಕುಕ್ಕೇಡಿ) ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ಹೊಂಡಗುಂಡಿಗಳಿಂದ ತುಂಬಿರುವ ರಸ್ತೆ ಸಂಪೂರ್ಣ ಡಾಮಾರು ಕಾಣದೆ ವರ್ಷಗಳೇ ಕಳೆದಿದ್ದು ಸಾರ್ವ ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್‌ಗೆ ಸೇರಿದ ಈ ರಸ್ತೆ ಪುಂಜಾಲಕಟ್ಟೆಯಿಂದ ವೇಣೂರನ್ನು ಸಂಪರ್ಕಿಸುವ ಅತೀ ಹತ್ತಿರದ ಹಾದಿಯಾಗಿದೆ. ಪುಂಜಾಲ ಕಟ್ಟೆಯಿಂದ ಪುರಿಯ, ಬುಳೆಕ್ಕರ, ಕುಕ್ಕೇಡಿ, ಗೋಳಿಯಂಗಡಿ ಮಾರ್ಗವಾಗಿ ವೇಣೂರು ತಲುಪುವ 10 ಕಿ.ಮೀ.ದೂರದ ಈ ರಸ್ತೆಯಲ್ಲಿ ನಿತ್ಯ ಪ್ರಯಾಣಿಕರಿದ್ದಾರೆ. ಪುಂಜಾಲಕಟ್ಟೆಯಿಂದ ಪುರಿಯ ಕೇವಲ ಎರಡೂವರೆ ಕಿ.ಮೀ.ದೂರವಿದೆ.
ಈ ಊರುಗಳಿಂದ ಪ್ರಾಥಮಿಕ ವಿದ್ಯಾಭ್ಯಾಸ ಸಹಿತ ಶಿಕ್ಷಣಕ್ಕೆ ಮಕ್ಕಳು ಪುಂಜಾಲಕಟ್ಟೆ ,ಮಡಂತ್ಯಾರು, ಅಥವಾ ವೇಣೂರುಗೆ ಹೋಗಬೇಕು. ಸಹಕಾರಿ ಸಂಘಗಳು, ಬ್ಯಾಂಕ್,ಆಸ್ಪತ್ರೆಗಳಿಗೆ ಹಾಗೂ ಇನ್ನಿತರ ವ್ಯವಹಾರಗಳಿಗೆ ಬರುವವರೂ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಯಾವ ಊರಿಗೆ ಹೋಗಬೇಕಾದರೂ ಸ್ವಂತ ವಾಹನ ಅಥವಾ ಆಟೊರಿಕ್ಷಾವನ್ನು ಆಶ್ರಯಿಸಬೇಕು. ನಡೆದುಕೊಂಡು ಬರುವವರೂ ಇದ್ದಾರೆ. ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಹದಗೆಟ್ಟ ಈ ರಸ್ತೆಯಲ್ಲಿ ಬರುವುದೇ
ಪ್ರಯಾಸವಾಗಿದೆ. ದ್ವಿಚಕ್ರ ವಾಹನಗಳು ಎದ್ದು ಬಿದ್ದೂ ಹೇಗಾದರೂ ಸಂಚರಿಸುತ್ತವೆ. ಅಟೋ ರಿಕ್ಷಾಗಳೂ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಒಂದು ಸರಕಾರಿ ಬಸ್ ಈ ಮೊದಲು ಸಂಚರಿಸುತ್ತಿದ್ದು ಇದೀಗ ಅದೂ ನಿಂತು ಹೋಗಿದೆ.
ಪುಂಜಾಲಕಟ್ಟೆ-ವೇಣೂರು ಸಂಪರ್ಕದ ಗೋಳಿಯಂಗಡಿ ಬಳಿ ಸೇತುವೆ ನಿರ್ಮಾಣದ ಬೇಡಿಕೆಯೂ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಇಲ್ಲಿ ಕಿರುಸೇತುವೆಯಲ್ಲೇ ಸಂಚರಿಸಬೇಕಾಗಿದೆ.
ಮಳೆಗಾಲ ಮುನ್ನ ಸಂಘಟನೆಗಳು ಸೇರಿಶ್ರಮದಾನ ನಡೆಸಿ ಗಿಡಗಂಟಿ ತೆಗೆದು ಸ್ವತ್ಛಗೊಳಿಸಿದ್ದರು. ಇದೀಗ ರಸ್ತೆಯುದ್ದಕ್ಕೂ ಹೊಂಡ, ಗುಂಡಿಗಳ ಜತೆ ಪೊದರು, ಕಳೆಗಿಡ ಬೆಳೆದು ರಸ್ತೆಯನ್ನು ಮತ್ತಷ್ಟು ಕಿರಿದಾಗಿಸಿದೆ. ಇದ್ದ ಚರಂಡಿಯೂ ಮುಚ್ಚಿ ಹೋಗಿದೆ.
ಜನಪ್ರತಿನಿಧಿಗಳು, ಇಲಾಖಾಧಿ ಕಾರಿಗಳು ಕೂಡಲೇ ಮುತುವರ್ಜಿವಹಿಸಿ ಯಾವುದಾದರೂ ಯೋಜನೆಯಡಿ ಸೇರಿಸಿ ಮುಂದಕ್ಕೆ ರಸ್ತೆ ಅಭಿವೃದ್ದಿಗೊಳಿಸಬೇಕೆಂದು ಸಾರ್ವಜನಿಕರ ಆಗ್ರಸಿದ್ದಾರೆ.
ಗುದ್ದಲಿಪೂಜೆ ನಡೆನದರೂ ನಡೆಯದ ಕಾಮಗಾರಿ
ಪುಂಜಾಲಕಟ್ಟೆ ಯಿಂದ ಗಂಪದಡ್ಡ ವರೆಗೆ ಸುಮಾರು ಮುಕ್ಕಾಲು ಕಿ.ಮೀ. ರಸ್ತೆ ಭಾಗ ಕುಕ್ಕಳ ಗ್ರಾಮಕ್ಕೆ ಸೇರಿದರೆ, ಉಳಿದ ಭಾಗ ಮಾಲಾಡಿ, ಕುಕ್ಕೇಡಿ ಗ್ರಾಮಗಳಿಗೆ ಸೇರುತ್ತದೆ. ಹಲವಾರು ವಾಹನಗಳು ಸಾಗುತ್ತಿದ್ದರೂ ರಸ್ತೆ ಮಾತ್ರ ತೀರಾ ಕಿರಿದಾಗಿದೆ. 2000 ನೇ ಇಸವಿಯಲ್ಲಿ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ಸೇರ್ಪಡೆಗೊಂಡಿದ್ದರೂ ಕಾರಣಾಂತರಗಳಿಂದ ಅಭಿವೃದ್ಧಿ ಕಾರ್ಯ ಮುಂದುವರೆಯಲಿಲ್ಲ. 2009-10ರಲ್ಲಿ ಮರು ಡಾಮರೀಕರಣಗೊಂಡಿತ್ತು. ಮತೆ 2018ರಲ್ಲಿ ತೇಪೆ ಕಾರ್ಯ ದುರಸ್ತಿ ನಡೆದಿತ್ತು. ಆದರೆ ಸಂಪೂರ್ಣ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿಲ್ಲ. 2023ರಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಗುದ್ದಲಿಪೂಜೆಯೂ ನಡೆದಿತ್ತು. ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಗ್ರಾಮಸ್ಥರು ಚರ್ಚೆ ನಡೆಸಿದರೂ ಪ್ರಯೋಜನವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.