NEET ಪ್ರಕ್ರಿಯೆಯೇ ಬದಲಾಗಲಿ: ಸುಪ್ರೀಂ ನಿರ್ದೇಶನಗಳೇನು?
Team Udayavani, Aug 3, 2024, 6:34 AM IST
ಹೊಸದಿಲ್ಲಿ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಶುಕ್ರವಾರ ವಿಸ್ತೃತ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್, ಇಡೀ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯಲ್ಲಿ ಸುಧಾರಣೆ ತರಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಜತೆಗೆ, ಪ್ರಶ್ನೆ ಪತ್ರಿಕೆ ಸೋರಿಕೆ ಜಾರ್ಖಂಡ್‌ನ ಹಜಾರಿಬಾಘ ಮತ್ತು ಬಿಹಾರದ ಪಾಟ್ನಾಗೆ ಮಾತ್ರ ಸೀಮಿತವಾಗಿದೆ. ಸೋರಿಕೆಯು ವ್ಯಾಪಕವಾಗಿಲ್ಲ. ಹೀಗಾಗಿ 2024ರ ನೀಟ್-ಯುಜಿ ಪರೀಕ್ಷೆಯನ್ನು ರದ್ದುಗೊಳಿಸುವುದಿಲ್ಲ ಎಂದೂ ತಿಳಿಸಿದೆ. ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು, ರಾಷ್ಟ್ರೀಯ ಪರೀûಾ ಸಂಸ್ಥೆ (NTA) ಪದೇ ಪದೆ ತನ್ನ ನಿಲುವುಗಳನ್ನು ಬದಲಿಸುವುದನ್ನು ನಿಲ್ಲಿಸಬೇಕು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹೇಳಿದೆ.
ಪರೀಕ್ಷಾ ಸುಧಾರಣೆಗೆ ಸೂಚನೆ: ಎನ್‌ಟಿಎ ಕಾರ್ಯ ನಿರ್ವಹಣೆ ಮತ್ತು ಪರೀûಾ ಸುಧಾರಣೆಗಳಿಗೆ ಕೇಂದ್ರ ಸರ್ಕಾರ ನೇಮಿಸಿರುವ ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ನೇತೃತ್ವದ ಸಮಿತಿಗೆ ಸೆ.30ರೊಳಗೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕೆಂದು ಕೋರ್ಟ್ ಸೂಚಿಸಿದೆ. ಪರೀûಾ ವ್ಯವಸ್ಥೆಯನ್ನು ಸದೃಢಗೊಳಿಸುವುದಕ್ಕಾಗಿ ತಾಂತ್ರಿಕ ಸುಧಾರಣೆಗಳನ್ನು ಅಳವಡಿಸಿಕೊಳ್ಳುವ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ಗಳನ್ನು ಸಮಿತಿ ರಚಿಸಬೇಕು. ಅಲ್ಲದೇ, ನೀಟ್-ಯುಜಿ ಪರೀಕ್ಷೆ ವೇಳೆ ಎತ್ತಲಾದ ಸಮಸ್ಯೆಗಳನ್ನು ಕೇಂದ್ರ ಸರ್ಕಾರವು ಬಗೆಹರಿಸಬೇಕು ಎಂದೂ ನಿರ್ದೇಶನ ನೀಡಿದೆ.
ಏನಿದು ವಿವಾದ?: ನೀಟ್-ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಪಡಿಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ಗೆ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರಿಂಕೋರ್ಟ್ ಜು.23ರಂದು ಮರು ಪರೀಕ್ಷೆಗೆ ಆದೇಶಿ ಸುವುದಿಲ್ಲ ಎಂದು ಮಧ್ಯಾಂತರ ತೀರ್ಪು ನೀಡಿತ್ತು. ಸದ್ಯದಲ್ಲೇ ವಿಸ್ತೃತ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಅದರಂತೆ ಶುಕ್ರವಾರ ವಿವರವಾದ ತೀರ್ಪು ನೀಡಿದೆ.
ಇ-ರಿಕ್ಷಾದಲ್ಲಿ ಪ್ರಶ್ನೆಪತ್ರಿಕೆ: ಸುಪ್ರೀಂ ಕಳವಳ
ನೀಟ್ ಪ್ರಶ್ನೆಪತ್ರಿಕೆಗಳನ್ನು ಇ-ರಿಕ್ಷಾಗಳಲ್ಲಿ ಸಾಗಿಸಲಾಗಿದೆ ಎಂಬ ಸುದ್ದಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇ-ರಿಕ್ಷಾಗಳು, ಖಾಸಗಿ ಕೊರಿಯರ್ ಕಂಪನಿಗಳ ಮೂಲಕ ಪ್ರಶ್ನೆಪತ್ರಿಕೆ ಸಾಗಾಟ ಮಾಡಿರುವುದು ಅವುಗಳ ಭದ್ರತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡುತ್ತದೆ. ಹೀಗಾಗಿ, ಪ್ರಶ್ನೆಪತ್ರಿಕೆಗಳ ಸಾಗಾಟದ ವಿಚಾರದಲ್ಲಿ ಇನ್ನು ಮುಂದೆ ಸಮರ್ಪಕ ಭದ್ರತಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಸುಪ್ರೀಂ ನಿರ್ದೇಶನಗಳೇನು?
ನೀಟ್-ಯುಜಿ ಪರೀಕ್ಷಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪುನಾರಚನೆ ಮಾಡಬೇಕು. ಭದ್ರತೆಯಲ್ಲಿ ಸುಧಾರಣೆ, ದತ್ತಾಂಶ ಸಂರಕ್ಷಣಾ ಕ್ರಮಗಳು, ನಿಯಮಿತ ಆಡಿಟ್‌ಗಳು, ಪರೀಕ್ಷಾ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ, ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣೆಗೆ ಕ್ರಮ, ಪ್ರಶ್ನೆಪತ್ರಿಕೆಗಳ ಸಾಗಾಟಕ್ಕೆ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಹಲವು ಸೂಚನೆಗಳನ್ನು ಸುಪ್ರೀಂ ಕೋರ್ಟ್ ನೀಡಿದೆ.
ನೀಟ್‌ಗೆ ಮುನ್ನ ವೈದ್ಯ ಶಿಕ್ಷಣ ವ್ಯವಹಾರವಾಗಿತ್ತು: ನಡ್ಡಾ
ಹೊಸದಿಲ್ಲಿ: ನೀಟ್ ಪರೀಕ್ಷೆಯನ್ನು ಪರಿಚಯಿಸುವು ದಕ್ಕೂ ಮುನ್ನ ವೈದ್ಯಕೀಯ ಶಿಕ್ಷಣ ವ್ಯವಹಾರವಾಗಿತ್ತು. ಪಿಜಿ ಸೀಟುಗಳನ್ನು 8 ರಿಂದ 13 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಶುಕ್ರವಾರ ಹೇಳಿ ದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ವಿವಾದದ ನಡುವೆಯೇ ನಡ್ಡಾರ ಈ ಹೇಳಿಕೆ ಮಹತ್ವ ಪಡೆದಿದೆ. ನೀಟ್ ಕುರಿತು ಡಿಎಂಕೆ ರಾಜ್ಯಸಭಾ ಸದಸ್ಯ ಎಂ ಮೊಹಮ್ಮದ್ ಅಬ್ದುÇÉಾ ಮಂಡಿಸಿದ ಖಾಸಗಿ ಸದಸ್ಯರ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, ತಾವು ಮೊದಲ ಬಾರಿ ಆರೋಗ್ಯ ಸಚಿವರಾಗಿದ್ದಾಗ ನೀಟ್ ಜಾರಿಯಾಯ್ತು. ಅದಕ್ಕೂ ಮೊದಲು ವೈದ್ಯಕೀಯ ಶಿಕ್ಷಣದಲ್ಲಿ ಭ್ರಷ್ಟಾಚಾರ ತುಂಬಿತ್ತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.