Bengaluru: ಹೈಸ್ಕೂಲ್ ಸಹಪಾಠಿಗಳ ಕಿರುಕುಳ: ಗೃಹಿಣಿ ಆತ್ಮಹತ್ಯೆ
ಮಹಿಳೆಗೆ ಮದುವೆಯಾಗಿದ್ದರೂ ಆರೋಪಿಗಳಿಂದ ಲೈಂಗಿಕ ಕಿರುಕುಳ ; ಬಾಗಲಗುಂಟೆಯಲ್ಲಿ ಘಟನೆ
Team Udayavani, Aug 3, 2024, 1:16 PM IST
ಬೆಂಗಳೂರು: ಶಾಲಾ ಸಹಪಾಠಿಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಿಡೇದಹಳ್ಳಿ ನಿವಾಸಿ ಮಮತಾ (31) ಮೃತ ಮಹಿಳೆ.
ಬಾಗಲಗುಂಟೆ ಠಾಣಾ ವ್ಯಾಪ್ತಿಯ ಸಿಡೇದಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಪೊಲೀಸರು, ಜೆ.ಪಿ.ನಗರ ನಿವಾಸಿ, ಆರೋಪಿ ಗಣೇಶ್ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೂಬ್ಬ ಆರೋಪಿ ಅಶೋಕ್ ಎಂಬಾತನ ಬಂಧನಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ವಿವಾಹ ಪೂರ್ವದಲ್ಲಿ ಜೆ.ಪಿ.ನಗರದಲ್ಲಿ ವಾಸವಾಗಿದ್ದ ಮಮತಾಗೆ ಆರೋಪಿಗಳು ಹೈಸ್ಕೂಲ್ ಸಹಪಾಠಿಗಳಾಗಿದ್ದರು. ಆ ನಂತರ ಮಮತಾರಿಗೆ ಕೆಲ ವರ್ಷಗಳ ಹಿಂದೆ ಲೋಕೇಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ 6 ವರ್ಷದ ಗಂಡು ಮಗು ಇದ್ದು, ಸಿಡೇದಹಳ್ಳಿಯಲ್ಲಿ ವಾಸವಿದ್ದರು. ಲೋಕೇಶ್ ಫುಡ್ ಡಿಲಿವರಿ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದರು. ಬುಧವಾರ ಸಂಜೆ ಪತಿ ಲೋಕೇಶ್, ಹಲವು ಬಾರಿ ಕರೆ ಮಾಡಿದರು ಪತ್ನಿ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಪಕ್ಕದ ಮನೆಯವರಿಗೆ ಲೋಕೇಶ್ ಕರೆ ಮಾಡಿ ತಿಳಿಸಿದ್ದರು. ಪಕ್ಕದ ಮನೆಯವರು ಬಂದು ನೋಡಿದಾಗ ಮಮತಾ ಆತ್ಮಹತ್ಯೆಗೆ ಶರಣಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಆರೋಪಿಗಳಿಂದ ಸೆಕ್ಸ್ ಗೆ ಒತ್ತಾಯ: ಡೆತ್‌ನೋಟ್
ಆತ್ಮಹತ್ಯೆಗೂ ಮೊದಲು ಮಮತಾ, ಹೈಸ್ಕೂಲ್‌ನ ಸಹಪಾಠಿಗಳಾದ ಅಶೋಕ್ ಮತ್ತು ಗಣೇಶ್ ಅವರ ಲೈಂಗಿಕ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನಗೆ ಏನಾದರೂ ಆದರೆ ಅದಕ್ಕೆ ಅಶೋಕ್ ಹಾಗೂ ಗಣೇಶ್ ಹೊಣೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ. ಇನ್ನು ಮಮತಾಗೆ ಹೈಸ್ಕೂಲ್ ಸಹಪಾಠಿಗಳಾಗಿದ್ದ ಆರೋಪಿಗಳು, ಆಕೆಗೆ ರಾತ್ರಿ ವೇಳೆಯಲ್ಲಿ ಮೇಸೆಜ್ ಕಳುಹಿಸುತ್ತಿದ್ದರು. ಹೊರಗಡೆ ಹೋಗೋಣ, ಟ್ರಿಪ್‌ಗೆ ಹೋಗೋಣ ಬಾ ಅಂತಾ ಕರೆಯುತ್ತಿದ್ದರು. ಅಲ್ಲದೇ ಆಕೆಗೆ ಅಶ್ಲೀಲ ಸಂದೇಶ ಕಳಿಸುವುದಲ್ಲದೇ ತಮ್ಮೊಂದಿಗೆ ದೈಹಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದರು. ಸಹಕರಿಸದಿದ್ದರೆ ನಿನ್ನ ಸಂಸಾರ ಹಾಳು ಮಾಡುವುದಾಗಿ ಬೆದರಿಕೆಯೊಡ್ಡುತ್ತಿದ್ದರು. ಈ ವಿಚಾರ ಮಮತಾ ಪತಿಗೂ ಗೊತ್ತಾಗಿ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದರು. ಆದರೂ ಸಹ ಆರೋಪಿಗಳು ಮಮತಾಗೆ ಕಿರುಕುಳ ನೀಡುವುದನ್ನು ಬಿಟ್ಟಿರಲಿಲ್ಲ. ಅದರಿಂದ ಮನನೊಂದ ಮಮತಾ, ಡೆತ್‌ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.