Sandalwood; ಕಾಪಿರೈಟ್ ಬಗ್ಗೆ ಸಿನಿಮಾ ಮಂದಿ ತಿಳಿದುಕೊಳ್ಳಬೇಕಿದೆ: ರಕ್ಷಿತ್ ಶೆಟ್ಟಿ
Team Udayavani, Aug 3, 2024, 3:19 PM IST
“ಸಿನಿಮಾದವರಿಗೆ ಕಾಪಿರೈಟ್ ಆ್ಯಕ್ಟ್ ಏನು ಎಂಬುದೂ ಇನ್ನೂ ಅರ್ಥವಾಗಿಲ್ಲ. ನಾನು ಅದನ್ನು ಕೋರ್ಟ್ನಲ್ಲೇ ತಿಳಿದುಕೊಳ್ಳುತ್ತೇನೆ..’ – ಹೀಗೆ ನೇರವಾಗಿ ಹೇಳುವ ಮೂಲಕ ರಕ್ಷಿತ್ ಶೆಟ್ಟಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಬ್ಯಾಚುಲರ್ ಪಾರ್ಟಿ ಸಿನಿಮಾದಲ್ಲಿ ಎರಡು ಹಾಡುಗಳನ್ನು ಪ್ರಸಾರದ ಹಕ್ಕು ಪಡೆಯದೇ ಬಳಸಿದ್ದಾರೆ ಎಂದು ಆಡಿಯೋ ಕಂಪೆನಿಯೊಂದು ರಕ್ಷಿತ್ ಶೆಟ್ಟಿ ಅವರ ಮೇಲೆ ಪ್ರಕರಣ ದಾಖಲಿಸಿತ್ತು. ಈ ಕುರಿತು ಶುಕ್ರವಾರ ವಿಚಾರಣೆಗೆ ರಕ್ಷಿತ್ ಶೆಟ್ಟಿ ಹಾಜರಾಗಿದ್ದರು.
ಈ ವೇಳೆ ಮಾತನಾಡಿದ ಅವರು, “ನಾವು ಸಿನಿಮಾದ ಸನ್ನಿವೇಶಕ್ಕೆ ತಕ್ಕಂತೆ ಕೆಲವು ಹಾಡುಗಳನ್ನು ಬಳಸಿರುತ್ತೇವೆ. ಎಲ್ಲವೂ ಕಾಪಿರೈಟ್ ಆದರೆ ಕನ್ನಡದ ಯಾವ ಹಾಡನ್ನು ಸಿನಿಮಾಗಳಲ್ಲಿ ಬಳಕೆ ಮಾಡುವಂತೆಯೇ ಇಲ್ವಾ? ಕಾಪಿರೈಟ್ ಆ್ಯಕ್ಟ್ ಏನು ಎಂಬುದು ಇನ್ನೂ ಯಾರಿಗೂ ಅರ್ಥ ಆಗಿಲ್ಲ. ಈ ಪ್ರಕರಣವನ್ನು ನಾನು ಕೋರ್ಟ್ನಲ್ಲಿ ಫೈಟ್ ಮಾಡುವ ಜೊತೆಗೆ ಕಾಪಿರೈಟ್ ಏನು ಅನ್ನೋದು ಕೋರ್ಟ್ನಲ್ಲಿಯೇ ತಿಳಿದುಕೊಳ್ಳಬೇಕು’ ಎಂದ ರಕ್ಷಿತ್ ಶೆಟ್ಟಿ, “ಮೂರ್ನಾಲ್ಕು ಮ್ಯೂಸಿಕ್ ಸಂಸ್ಥೆಗಳು ಕೇಸ್ ಹಾಕಲು ಕಾಯುತ್ತಿರುತ್ತವೆ. ಇವರ ಕೆಲಸವೇ ಇದು. ಸಿನಿಮಾ ರಿಲೀಸ್ ಆದ ತಕ್ಷಣ ಎಲ್ಲೆಲ್ಲಿ ಕೇಸ್ ಹಾಕಬಹುದು ಎಂದು ಕಾಯುತ್ತಾ ಇರುತ್ತಾರೆ’ ಎನ್ನುವ ಮೂಲಕ ತಮ್ಮ ಬೇಸರ ಹೊರ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.