Malpe: ಕಡಲ ತೀರದಲ್ಲಿ ಹರಡಿದ ರಾಶಿ ರಾಶಿ ತ್ಯಾಜ್ಯ

ಸೀ ವಾಕ್‌ನಿಂದ ಬೀಚ್‌ವರೆಗೂ ಭಾರೀ ಪ್ರಮಾಣದ ಕಸ ಕಡ್ಡಿ; ತ್ವರಿತವಾಗಿ ತೆರವು ಮಾಡಲು ಪರಿಸರ ಪ್ರಿಯರ ಮನವಿ

Team Udayavani, Aug 3, 2024, 3:37 PM IST

Screenshot (92)

ಮಲ್ಪೆ: ಮಳೆಗಾಲದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಅಲೆಗಳು ಸಮುದ್ರದೊಳಗಿನ ಕಸಕಡ್ಡಿ ತ್ಯಾಜ್ಯಗಳನ್ನು ತೀರಕ್ಕೆ ತಂದು ಎಸೆಯುವುದು ಸಾಮಾನ್ಯ ಸಂಗತಿ.

ಇದೀಗ ಮಲ್ಪೆ ಬೀಚ್‌ನಲ್ಲಿ ಹೇರಳ ಪ್ರಮಾಣದಲ್ಲಿ ಕಸ ಬಿದ್ದಿದೆ. ಮಲ್ಪೆ ಸೀವಾಕ್‌ನಿಂದ ಬೀಚ್‌ವರೆಗೂ ಹರಡಿಕೊಂಡಿದೆ. ಕೆಲವಡೆ ದಪ್ಪ ದಪ್ಪ ಪದರಾಗಿ ಬಿದ್ದಿದೆ. ಇದರಲ್ಲಿ ಕೊಳೆತ ಗಿಡ, ಮರಗಳ ಎಲೆಗಳು ಮಾತ್ರವಲ್ಲದೆ ನಾನಾ ರೀತಿಯ ಪ್ಲಾಸ್ಟಿಕ್‌ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಬಿದ್ದಿರುವ ಭಾರೀ ಮಳೆಗಾಳಿಯಿಂದಾಗಿ ಈ ತಾಜ್ಯಗಳು ನದಿ ನೀರಿನೊಂದಿಗೆ ಸಮುದ್ರ ಸೇರಿತ್ತು. ಈಗ ಸಮುದ್ರ ಉಬ್ಬರದ ಸಮಯದಲ್ಲಿ ಸಾಗರ ಗರ್ಭ ಸೇರಿದ್ದ ಈ ಎಲ್ಲ ಕಸಕಡ್ಡಿಗಳು ಮಲ್ಪೆ ಬೀಚ್‌ ಕಡಲತೀರದಲ್ಲಿ ರಾಶಿಯಾಗಿ ಬಿದ್ದಿದೆ.

ಇಂದ್ರಾಣಿ, ಉದ್ಯಾವರ ಹೊಳೆಯ ಮೂಲಕ ಪ್ಲಾಸ್ಟಿಕ್‌ ಇಂದ್ರಾಣಿ

ನದಿ, ಉದ್ಯಾವರ ಹೊಳೆಗಳು ಹರಿದು ಇಲ್ಲಿನ ಸಮುದ್ರ ಸೇರುತ್ತವೆ. ಇದಕ್ಕೆ ಹೊಂದಿಕೊಂಡಿರುವ ಜನರು ಪ್ಲಾಸ್ಟಿಕ್‌ ತ್ಯಾಜ್ಯವನ್ನು ನದಿಯಲ್ಲಿ ಎಸೆಯುತ್ತಿದ್ದು ಇವು ಹರಿದು ಬಂದು ಕೊನೆಯಲ್ಲಿ ಕಡಲು ಸೇರುತ್ತಿವೆ. ಹತ್ತಾರು ವರ್ಷ ಕರಗದ ಪ್ಲಾಸ್ಟಿಕ್‌ತ್ಯಾಜ್ಯಗಳು ಕಡಲಿನಲ್ಲಿಹಲವಾರು ವರ್ಷಗಳಿಂದ ಸಂಗ್ರಹವಾಗಿ ಕಡಲ ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿವೆ ಎಂಬುದು ಪರಿಸರ ಪ್ರಿಯರ ಆರೋಪವಾಗಿದೆ.

ಪ್ರವಾಸಿಗರು ತಂಪು ಪಾನೀಯ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ತರುವುದು ಸಾಮಾನ್ಯ. ಪಾನೀಯ ಕುಡಿದು ಮೋಜು ಅನುಭವಿಸುವ ಕೆಲ ಪ್ರವಾಸಿಗರು ವಾಪಸು ತೆರಳುವಾಗ ನಿರುಪಯುಕ್ತ ಬಾಟಲಿಗಳನ್ನು ಕಡಲ ತೀರದಲ್ಲಿ ಎಸೆದು ಹೋಗುತ್ತಾರೆ. ಇದರಿಂದ ಅಪಾರ ಪ್ರಮಾಣದ ಪ್ಲಾಸ್ಟಿಕ್‌ ತ್ಯಾಜ್ಯ ಕಡಲ ತೀರದಲ್ಲಿ ಸಂಗ್ರಹವಾಗುತ್ತಿದೆ. ಪ್ರವಾಸಿಗರಲ್ಲಿ ಕಡಲ ಪರಿಸರದ ಬಗ್ಗೆ ಕಾಳಜಿ ಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ಪ್ಲಾಸ್ಟಿಕ್‌ತ್ಯಾಜ್ಯದಿಂದ ಪರಿಸರ ಅತೀ ಹೆಚ್ಚು ಹಾನಿಗೀಡಾಗುತ್ತಿವೆ. ವಿವಿಧ ಸಂಘ, ಸಂಸ್ಥೆಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಆಗಾಗ ಬೀಚ್‌ಸ್ವತ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರುತ್ತಾರೆ. ಆದರೆ ಪ್ರತಿ ಬಾರಿಯೂ ರಾಶಿಗಟ್ಟಲೆ ಪ್ಲಾಸ್ಟಿಕ್‌ತ್ಯಾಜ್ಯ ದೊರೆಯುತ್ತಿರುವುದು ಜನರ ನಿರ್ಲಕ್ಷಕ್ಕೆ  ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.

ಮೀನುಗಾರರಿಗೂ ತಲೆನೋವಾದ ಪ್ಲಾಸ್ಟಿಕ್‌ ತ್ಯಾಜ್ಯ

ಸಮುದ್ರದಲ್ಲಿ ಮೀನಿನ ಬಲೆಗೆ ಪ್ಲಾಸ್ಟಿಕ್‌ ತ್ಯಾಜ್ಯಗಳು ಸಿಲುಕುತ್ತಿದೆ ಎನ್ನಲಾಗುತ್ತಿದೆ. ಕೆಲವೊಂದು ಸಲ ಮೀನುಗಾರಿಕೆ ನಡೆಸುವಾಗ ಮೀನಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್‌ ತ್ಯಾಜ್ಯಗಳೇ ಬಲೆಗೆ ಬೀಳುತ್ತದೆ ಎನ್ನುತ್ತಾರೆ ಮೀನುಗಾರರು. ಇದರಿಂದ ಮೀನುಗಾರರಿಗೆ ತೊಂದರೆಯಾಗುತ್ತಿದೆ. ಇಷ್ಟೊಂದು ಪ್ಲಾಸ್ಟಿಕ್‌ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಜನರ ನಿರ್ಲಕ್ಷದಿಂದಾಗಿ ಸಮುದ್ರದಲ್ಲಿ ಪ್ಲಾಸ್ಟಿಕ್‌ ಸಿಗುತ್ತಿರುವುದು ಆತಂಕಕಾರಿ ವಿಷಯವೇ ಸರಿ.

ತತ್‌ಕ್ಷಣ ತೆರವು ಮಾಡಬೇಕು
ಹೊಳೆಯ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ ತಾಜ್ಯಗಳಲ್ಲದೆ ಸಮುದ್ರದಲ್ಲಿಯೂ ಬಲೆ ಇನ್ನಿತರ ತಾಜ್ಯಗಳು ಕಡಲತೀರವನ್ನು ಸೇರುತ್ತಿವೆ. ಆದರೆ ಅದು ಮತ್ತೆ ಕಡಲನ್ನು ಸೇರುವ ಮೊದಲು ತ್ಯಾಜ್ಯವನ್ನು ತೆರವು ಮಾಡಬೇಕಾಗಿದೆ. ಜಿಲ್ಲಾಡಳಿತ ಈಮಳೆಗಾಲದಲ್ಲಿ ಆಗಾಗ ಇಲ್ಲಿ ಬೀಳುವ ಕಸವನ್ನು ಸ್ವತ್ಛ ಮಾಡುವ ಮೂಲಕ ಅದರ ಸೌಂದರ್ಯವನ್ನು ಉಳಿಸಬೇಕಾಗಿದೆ.

ಟಾಪ್ ನ್ಯೂಸ್

election

By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

US; Mike Waltz is the new security adviser

US; ಮೈಕ್‌ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ

Ripponpete

Ripponpete: ಖಾಸಗಿ ಬಸ್‌ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Court-Symbol

Gangolli: ಪಿಸ್ತೂಲ್‌ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು

MAHE-13

Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್‌.ಎಸ್‌.ಬಲ್ಲಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ACT

Mangaluru: ಗಾಂಜಾ ಸೇವನೆ; ಯುವಕನ ಬಂಧನ

14

Mangaluru: ಸ್ಕೂಟರ್‌ ಕಳವು; ಪ್ರಕರಣ ದಾಖಲು

16-moodbidri

Mudbidri: ದ್ವಿಚಕ್ರ ವಾಹನ ಅಪಘಾತ; ಗಾಯಾಳು ಸವಾರ ಮೃತ್ಯು

5

Bajpe: ಊರಿನ ಜಾರಿಗೆ ಸಿಪ್ಪೆಗೆ ಹೊರರಾಜ್ಯದಲ್ಲಿ ಬೇಡಿಕೆ

4(3

Mangaluru: ಮುಂಗಾರು ಹಂಗಾಮಿನಲ್ಲಿ ಈ ಬಾರಿ ಬೇಸಾಯ ತಡವಾದರೂ ಉತ್ತಮ ಬೆಳೆ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

election

By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

US; Mike Waltz is the new security adviser

US; ಮೈಕ್‌ ವಾಲ್ಟ್ಜ್ ನೂತನ ಭದ್ರತಾ ಸಲಹೆಗಾರ; ಚೀನಾ ವಿರೋಧಿ ನಿಲುವುವುಳ್ಳ ನಾಯಕರಿಗೆ ಅಧಿಕಾರ

U.P: ಪತ್ನಿ, ಮಕ್ಕಳ  ಕೊಂದು ಸ್ಟೇಟಸ್‌ ಹಾಕಿದ!

U.P: ಪತ್ನಿ, ಮಕ್ಕಳ  ಕೊಂದು ಸ್ಟೇಟಸ್‌ ಹಾಕಿದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.