Runway Flooded: ಮಳೆಗೆ ಕೋಲ್ಕತ್ತಾ ವಿಮಾನ ನಿಲ್ದಾಣದ ರನ್‌ವೇ ಜಲಾವೃತ…
ಮತ್ತೆ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
Team Udayavani, Aug 3, 2024, 3:59 PM IST
ಕೋಲ್ಕತ್ತಾ : ಭಾರೀ ಮಳೆಯಿಂದಾಗಿ ಕೊಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ಸಂಪೂರ್ಣ ಜಲಾವೃತಗೊಂಡಿದೆ.
ಭಾರೀ ಮಳೆಯಿಂದಾಗಿ ಕೋಲ್ಕತ್ತಾ, ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರದಲ್ಲಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ದಿನವಿಡೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಮಧ್ಯ ಮತ್ತು ದಕ್ಷಿಣ ಕೋಲ್ಕತ್ತಾದಲ್ಲಿ ಹೆಚ್ಚಿನ ಮಳೆಯಾಗಿದ್ದು ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ ಎಂದು ಪೊಲೀಸರು ವರದಿ ಮಾಡಿದ್ದಾರೆ, ಶುಕ್ರವಾರ ಮಧ್ಯಾಹ್ನದಿಂದ ಕೆಲವು ಪ್ರದೇಶಗಳಲ್ಲಿ 7 ಸೆಂ.ಮೀ.ವರೆಗೆ ಮಳೆಯಾಗಿದೆ ಎಂದು ಹೇಳಲಾಗಿದೆ.
ವಿಮಾನ ಸಂಚಾರದ ಮೇಲೆ ಪರಿಣಾಮ ಬೀರಿಲ್ಲ:
ಭಾರಿ ಮಳೆಯ ಪರಿಣಾಮ ವಿಮಾನ ನಿಲ್ದಾಣದ ರನ್ ವೇ ಯಲ್ಲಿ ಅಪಾರ ಪ್ರಮಾಣದ ನೀರು ನಿಂತಿದ್ದು ಜೊತೆಗೆ ಪಾರ್ಕಿಂಗ್ ವಲಯದಲ್ಲೂ ಹೆಚ್ಚಿನ ಪ್ರಮಾಣದ ನೀರು ನಿಂತಿರುವುದು ಕಂಡುಬಂದಿದ್ದು ಆದರೆ ವಿಮಾನಯಾನ ಅಧಿಕಾರಿಗಳ ಮಾಹಿತಿಯ ಪ್ರಕಾರ ವಿಮಾನ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Himachal: ಮೇಘಸ್ಪೋಟಕ್ಕೆ ಇಡೀ ಗ್ರಾಮವೇ ಸರ್ವ ನಾಶ ಉಳಿದದ್ದು ಒಂದು ಮನೆ ಮಾತ್ರ
#Kolkata #airport runway flooded due to heavy #rainfall
Track LIVE updates: https://t.co/LiCrSyUgSp pic.twitter.com/oKGAaitKJE
— Hindustan Times (@htTweets) August 3, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT: ಭಾರತ ವಿರುದ್ದದ ಮೊದಲ ಟೆಸ್ಟ್ ಗೆ ಆಸೀಸ್ ತಂಡ ಪ್ರಕಟ; ಒಂದು ಅಚ್ಚರಿಯ ಆಯ್ಕೆ
Kambala: ಪಿಲಿಕುಳ ಜೋಡುಕರೆಯಲ್ಲಿ ಮತ್ತೆ ಮೊಳಗಲಿದೆ ಕಹಳೆಗಳ ಸದ್ದು!
Covid Scam: ಕೋವಿಡ್ ಅಕ್ರಮ ವರದಿಯಿಂದ ಏನೂ ಆಗದು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
Waqf Notice: ವಕ್ಫ್ ಬೋರ್ಡ್ ರದ್ದತಿಗೆ ಪಕ್ಷಭೇದ ಮರೆತು ಶ್ರಮಿಸಿ: ಪಲಿಮಾರು ಶ್ರೀ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.