Belthangady: 27 ಎಕ್ರೆಯ ಚಾರ್ಮಾಡಿ ಪೆರ್ನಾಳೆ ಕೆರೆ ಗೇಟು ತೆರೆಯಲು ಈಶ್ವರ ಮಲ್ಪೆ ತಂಡ ಸಾಹಸ
ಕೆರೆಯಲ್ಲಿ ಹೆಚ್ಚಿನ ನೀರು ತುಂಬಿರುವ ಕಾರಣ ಸಾಧ್ಯವಾಗಿರಲಿಲ್ಲ
Team Udayavani, Aug 4, 2024, 6:45 AM IST
ಬೆಳ್ತಂಗಡಿ,: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಪೆರ್ನಾಳೆಯಲ್ಲಿರುವ 27.47 ಎಕ್ರೆ ವ್ಯಾಪ್ತಿಯ ವಿಶಾಲ ಕೆರೆಯಲ್ಲಿ ಈ ಬಾರಿ ಮಳೆಗಾಲಕ್ಕೆ ಕರೆ ಪೂರ್ಣ ತುಂಬಿದ ಪರಿಣಾಮ ಇದರ ಗೇಟು ತೆರೆಯಲು ಮುಳುಗು ತಜ್ಞ ಈಶ್ವರ ಮಲ್ಪೆ ತಂಡದವರು ಆ.3ರಂದು ಯಶಸ್ವಿ ಕಾರ್ಯಾಚರಣೆ ನಡೆಸಿದರು.
ಅಪಾಯದಲ್ಲಿದ್ದ ಕೆರೆ ನೀರು
ಚಾರ್ಮಾಡಿ ಅರಣ್ಯ ಭಾಗದಲ್ಲಿರುವ ಈ ಕೆರೆ ಗ್ರಾಮದ ಸುಮಾರು 300ಕ್ಕಿಂತ ಅಧಿಕ ಕುಟುಂಬಗಳಿಗೆ ಬೇಸಗೆಯ ಕೃಷಿ ನೀರಿಗೆ ಆಧಾರವಾಗಿದೆ. ಈ ಬಾರಿ ಮಳೆಗೆ ಕೆರೆ ಸಂಪೂರ್ಣ ತುಂಬಿತ್ತು. ಕೆರೆ ನೀರು ಹೊರ ಬಿಡಲು ಅಳವಡಿಸಲಾದ ಗೇಟು ಮುಚ್ಚಿದ್ದು ಅದನ್ನು ತೆರೆಯಲು ಸ್ಥಳೀಯಾಡಳಿತ ಮತ್ತು ಸ್ಥಳೀಯರು ಸಾಕಷ್ಟು ಪ್ರಯತ್ನಿಸಿದ್ದರು. ಕೆರೆಯಲ್ಲಿ ಹೆಚ್ಚಿನ ನೀರು ತುಂಬಿರುವ ಕಾರಣ ಸಾಧ್ಯವಾಗಿರಲಿಲ್ಲ. ನೀರು ಹೊರಬಿಡದಿದ್ದಲ್ಲಿ ಕೆರೆ ನಾಲೆ ಅಥವಾ ಬದಿ ಒಡೆದು ಈ ಪರಿಸರದ ನೆಲ್ಲಿಗುಡ್ಡೆ, ಕಂಚಾರಿ ಕಂಡ, ಬೇಂದ್ರಾಳ ಮೊದಲಾದ ಪ್ರದೇಶಕ್ಕೆ ಆತಂಕ ಎದುರಾಗಿತ್ತು.
ತೆರವು ಕಾರ್ಯಾಚರಣೆ
ಈಶ್ವರ್ ಮಲ್ಪೆ ಅವರ ತಂಡ ಶನಿವಾರ ಸ್ಥಳಕ್ಕಾಗಮಿಸಿ ಸುಮಾರು 20 ಅಡಿ ಆಳಕ್ಕೆ ಇಳಿದು ಪರಿಶೀಲಿಸಿತು. ಬೇಸಗೆ ಕಾಲದಲ್ಲಿ ನೀರು ಸಂಗ್ರಹಿಸಲು ಇಟ್ಟಿದ್ದ ಮರಳಿನ ಗೋಣಿಗಳು ಗೇಟಿಗೆ ಸಿಲುಕಿದ್ದನ್ನು ಗಮನಿಸಿ, ಅವುಗಳನ್ನು ಸ್ಥಳಾಂತರಿಸಿ ಗೇಟು ತೆರೆಯುವ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದರು.
ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅರಣ್ಯ, ಪೊಲೀಸ್, ಅಗ್ನಿಶಾಮಕ ಸಿಬಂದಿ, ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fraud Case: ಗೂಗಲ್ ಪೇ ಮಾಡಿದೆ ಎಂದು ಹೇಳಿ ಮೋಸ
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.