Paris 2024; ಗಾಯಗೊಂಡು ಸೆಮಿ ಫೈನಲ್ ನಿಂದ ಹಿಂದೆ ಸರಿದ ಮಾಜಿ ಪದಕ ವಿಜೇತೆ ಕೆರೊಲಿನಾ ಮರಿನ್
Team Udayavani, Aug 4, 2024, 3:23 PM IST
ಪ್ಯಾರಿಸ್: ಮಾಜಿ ಬ್ಯಾಡ್ಮಿಂಟನ್ ಚಿನ್ನದ ಪದಕ ವಿಜೇತೆ ಕೆರೊಲಿನಾ ಮರಿನ್ ಅವರು ಭಾನುವಾರ (ಆ.04) ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್ ಪಂದ್ಯದ ವೇಳೆ ತಮ್ಮ ಬಲ ಮೊಣಕಾಲಿನ ಗಾಯಕ್ಕೆ ಒಳಗಾಗಿ ಕೂಟ ತ್ಯಜಿಸಿದರು.
ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧದ ತಮ್ಮ ಮಹಿಳಾ ಸಿಂಗಲ್ಸ್ ಸೆಮಿಫೈನಲ್ ಪಂದ್ಯದ ವೇಳೆ ಕೆರೊಲಿನಾ ಮರಿನ್ ಅವರು ಗಾಯಗೊಂಡರು.
ಸ್ಪೇನ್ ನ ಆಟಗಾರ್ತಿ ಮರಿನ್ 2016ರ ರಿಯೊ ಒಲಿಂಪಿಕ್ಸ್ ನ ಫೈನಲ್ ನಲ್ಲಿ ಭಾರತದ ಪಿ.ವಿ ಸಿಂಧು ಅವರನ್ನು ಸೋಲಿಸಿ ಚಿನ್ನ ಗೆದ್ದುಕೊಂಡಿದ್ದರು.
ಮೂರು ಬಾರಿಯ ವಿಶ್ವ ಚಾಂಪಿಯನ್ ಮರಿನ್ ಇಂದಿನ ಪಂದ್ಯದಲ್ಲಿಎದುರಾಳಿ ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ದ ಮೊದಲ ಸೆಟ್ ಗೆದ್ದು, ಎರಡನೇ ಸೆಟ್ ಮುನ್ನಡೆ ಕಾಯ್ದುಕೊಂಡಿದ್ದರು. 21-14, 10-06 ರಲ್ಲಿದ್ದಾಗ ಮೊಣಕಾಲಿನ ನೋವಿಗೆ ಒಳಗಾದರು. ಪಟ್ಟಿಯನ್ನು ಕಟ್ಟಿಕೊಂಡು ಇನ್ನೆರಡು ಅಂಕಗಳನ್ನು ಆಡಿದರಾದರೂ ಬಳಿಕ ನಿವೃತ್ತಿ ಹೊಂದಲು ನಿರ್ಧರಿಸಿದರು. ಕಣ್ಣೀರು ಸುರಿಸಿಕೊಂಡು ಮರಿನ್ ಮೈದಾನದಿಂದ ಹೊರಹೋದರು.
heartbreaking 💔💔 moment in @Paris2024 #Olympics #carolinamarin gets injured in
2nd set of #Badminton semi-final pic.twitter.com/NSvsj3mlsR— ͏͏͏͏͏͏ ͏͏͏͏͏ˢᵃˡᵃᵃʳ (@_keshav____) August 4, 2024
31 ವರ್ಷದ ಮರಿನ್ ಈ ಹಿಂದೆ ತನ್ನ ಎರಡೂ ಮೊಣಕಾಲುಗಳಲ್ಲಿ ಆಂಟೀರಿಯರ್ ಕ್ರೂಸಿಯೇಟ್ ಲಿಗಮೆಂಟ್ (ACL) ಗಾಯಗಳಿಂದ ಬಳಲುತ್ತಿದ್ದರು.
2012 ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಚೀನಾದ ವಾಂಗ್ ಕ್ಸಿನ್ ಅವರು ಕಂಚಿನ ಪದಕಕ್ಕಾಗಿ ಭಾರತದ ಸೈನಾ ನೆಹ್ವಾಲ್ ವಿರುದ್ಧ 21-18, 1-0 ಅಂತರದಲ್ಲಿ ಆಡುವಾಗ ಮೊಣಕಾಲು ಗಾಯಗೊಂಡು ಹಿಂದೆ ಸರಿದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.