Paris; ಹಾಕಿಯಲ್ಲಿ ಭಾರತದ ವಿಕ್ರಮ; ಶೂಟೌಟ್ ಬ್ರಿಟನ್ ವಿರುದ್ದ ಗೆದ್ದು ಸೆಮಿಗೆ ಎಂಟ್ರಿ
Team Udayavani, Aug 4, 2024, 3:48 PM IST
ಪ್ಯಾರಿಸ್: ಅತ್ಯಂತ ರೋಮಾಂಚನಕಾರಿಯಾಗಿ ಸಾಗಿದ ಭಾರತ ಮತ್ತು ಗ್ರೇಟ್ ಬ್ರಿಟನ್ ನಡುವಿನ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಮಹತ್ವದ ಗೆಲುವಿನೊಂದಿಗೆ ಭಾರತವು ಒಲಿಂಪಿಕ್ಸ್ ಕೂಟದ ಸೆಮಿ ಫೈನಲ್ ಗೆ ಎಂಟ್ರಿ ಪಡೆದಿದೆ.
ಪಂದ್ಯವು 1-1ರಿಂದ ಸಮನಾದ ಬಳಿಕ ಫಲಿತಾಂಶಕ್ಕಾಗಿ ಶೂಟೌಟ್ ಮೊರೆ ಹೋಗಲಾಯಿತು. ಕೊನೆಯ ಒಲಿಂಪಿಕ್ ಆಡುತ್ತಿರುವ ಭಾರತದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಪೆನಾಲ್ಟಿ ಶೂಟೌಟ್‌ನಲ್ಲಿ ಹೀರೋ ಆದರು. ಭಾರತವು ಶೂಟೌಟ್‌ನಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿ ಸತತ ಎರಡನೇ ಒಲಿಂಪಿಕ್ ಸೆಮಿ ಫೈನಲ್ ಪ್ರವೇಶ ಮಾಡಿತು.
ಟೋಕಿಯೊ 2020ರ ಒಲಿಂಪಿಕ್ಸ್ ನಲ್ಲಿ ಭಾರತವು ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಬಾರಿಯ ಪುರುಷರ ಹಾಕಿ ಸ್ಪರ್ಧೆಯ ಸೆಮಿಫೈನಲ್ ಮಂಗಳವಾರ(ಆಗಸ್ಟ್ 6) ನಡೆಯಲಾಯಿತು.
17ನೇ ನಿಮಿಷದಲ್ಲಿ ಭಾರತದ ಅಮಿತ್ ರೋಹಿದಾಸ್ ಗೆ ರೆಡ್ ಕಾರ್ಡ್ ನೀಡಲಾಯಿತು. 22ನೇ ನಿಮಿಷದಲ್ಲಿ ಭಾರತದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮೊದಲ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. 27ನೇ ನಿಮಿಷದಲ್ಲಿ ಬ್ರಿಟನ್ ನ ಲೀ ಮೊರ್ಟನ್ ಗೋಲು ಬಾರಿಸಿ 1-1ರ ಸಮಬಲಕ್ಕೆ ತಂದರು. ಒಂದು ಕಡಿಮೆ ಸದಸ್ಯರೊಂದಿಗೆ ಆಡಿದ ಭಾರತವು ಭಾರೀ ಪೈಪೋಟಿಯ ಹೊರತಾಗಿಯೂ ಬಳಿಕ ಬ್ರಿಟನ್ ಗೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ.
ಪೆನಾಲ್ಟಿ ಶೂಟೌಟ್ ನಲ್ಲಿ ಭಾರತದ ಪರ ಹರ್ಮನ್‌ಪ್ರೀತ್, ಲಲಿತ್, ಸುಖಜೀತ್, ಅಭಿಷೇಕ್ ಮತ್ತು ರಾಜ್‌ಕುಮಾರ್ ಗೋಲು ಬಾರಿಸಿದರು. ಬ್ರಿಟನ್ ಪರ ಜೇಮಸ್ ಆಲ್ಬೆ, ವಾಲಸ್ ಗೋಲು ಬಾರಿಸಿದರು. ಆದರೆ ನಂತರದ ಎರಡು ಗೋಲುಗಳನ್ನು ತಡೆದ ಶ್ರೀಜೆಶ್ ಭಾರತಕ್ಕೆ ಹೀರೋ ಆಗಿ ಮೂಡಿ ಬಂದರು.
ಅರ್ಜೈಂಟಿನಾ ಮತ್ತು ಜರ್ಮನಿ ನಡುವಿನ ಪಂದ್ಯದಲ್ಲಿ ಗೆದ್ದವರ ವಿರುದ್ದ ಭಾರತ ಸೆಮಿ ಫೈನಲ್ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Perth test: ಜೈಸ್ವಾಲ್, ವಿರಾಟ್ ಶತಕ; ಆಸೀಸ್ ಗೆ ಭಾರೀ ಗುರಿ ನೀಡಿದ ಭಾರತ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.