landslides ವಯನಾಡಿನ ದೃಶ್ಯ ನೋಡಿ ಊಟ ಸೇರುತ್ತಿಲ್ಲ: ನಾಗರಾಜ್
Team Udayavani, Aug 4, 2024, 11:48 PM IST
ಸಕಲೇಶಪುರ: ಭೀಕರ ಭೂ ಕುಸಿತದಿಂದ ತತ್ತರಿಸಿರುವ ಕೇರಳದ ವಯನಾಡಿನಲ್ಲಿ ರಕ್ಷಣಾ ಕಾರ್ಯಕ್ಕೆ ಬೆಂಗಳೂರಿನಿಂದ ತೆರಳಿದ ಎನ್‌ಡಿಆರ್‌ಎಫ್ ನ 30 ಜನರ ತಂಡದಲ್ಲಿ ನಿರತರಾಗಿರುವ ಕುರುಭತ್ತೂರು ಗ್ರಾ.ಪಂ.ನ ದೊಡ್ಡನಹಳ್ಳಿಯ ಹವಾಲ್ದಾರ್ ನಾಗರಾಜ್ ಕಾರ್ಯಾಚರಣೆ ವೇಳೆ ಎದುರಾದ ಸವಾಲುಗಳು, ಭೀಕರ ಸ್ಥಿತಿಗತಿ, ಜನರ ನೋವು ಸೇರಿದಂತೆ ಕಣ್ಣೀರಿನ ಕಥೆಗಳನ್ನು “ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.
ಭೂಕುಸಿತವಾದ ವಯನಾಡು ಸಮೀಪದ ಮುಂಡಕೈ ಹಾಗೂ ಚೂರಲ್‌ವುಲ ಗ್ರಾಮಗಳ ಮಧ್ಯೆ 630 ಮನೆಗಳು ಇದ್ದವು. ಬಹುತೇಕ ಮನೆಗಳು ಕುಸಿದರೆ, ಕೆಲವು ಅನಾಥವಾಗಿವೆ. 380 ಮೃತದೇಹಗಳು ಸಿಕ್ಕಿವೆ, ಮೃತರ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇಲ್ಲಿನ ದೃಶ್ಯಗಳನ್ನು ನೋಡಿ ನಮಗೆ ಊಟ ತಿಂಡಿ ಸರಿಯಾಗಿ ಸೇರುತ್ತಿಲ್ಲ. ಅರ್ಧಂಬರ್ಧ ಮೃತದೇಹಗಳು ನೀರಿನಲ್ಲಿ, ಕೆಸರಿನಲ್ಲಿ ದೊರಕುತ್ತಿವೆ. ಜಾನುವಾರುಗಳು ಅನಾಥವಾಗಿದ್ದು ನಮ್ಮನ್ನು ನೋಡಿ ಅವರ ಮಾಲಕರೆಂದು ಬರುತ್ತವೆ. ಆದರೆ ಅನಂತರ ಗೊತ್ತಾಗಿ ಹಿಂದಿರುಗಿ ಹೋಗುತ್ತವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Save Life: ಚಾರ್ಮಾಡಿ ಘಾಟ್‌ನಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ; ಜೀವ ರಕ್ಷಿಸಿದ ಪೊಲೀಸರು
Arseekere: ಈಡೇರದ ಹೈಟೆಕ್ ಬಸ್ ನಿಲ್ದಾಣದ ಕನಸು
Hassan: ಸಾಲಬಾಧೆ: ಜಮೀನಿನಲ್ಲೇ ಆತ್ಮಹ*ತ್ಯೆಗೆ ಶರಣಾದ ಆಲೂರಿನ ರೈತ ದಂಪತಿ
Holenarseepur: ಈ ಸರ್ಕಾರಿ ಆಸ್ಪತ್ರೆಗೆ ಬೇಕು ಮಾತ್ರೆ, ಗ್ಲೂಕೋಸ್!
Shravanabelagola;ಅಹಿಂಸಾ ಮಾರ್ಗದಿಂದಷ್ಟೇ ಜಗದ ಶಾಂತಿ: ಪೇಜಾವರ ಶ್ರೀ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.