PSI ಸಾವಿನ ಪ್ರಕರಣದ ತನಿಖೆ ಸಿಬಿಐಗೆ ಕೊಡಿ: ಆರ್‌. ಅಶೋಕ್‌

18 ಗಂಟೆ ಬಳಿಕ ಪ್ರಕರಣ ದಾಖಲು, ಒಂದೇ ಗಂಟೆಯಲ್ಲಿ ಸಿಐಡಿಗೆ ಸಿಐಡಿಗೆ ಕೊಟ್ಟ ಕೇಸ್‌ಗಳ ಗತಿ ಏನಾಗಿದೆ?: ವಿಪಕ್ಷ ನಾಯಕ

Team Udayavani, Aug 5, 2024, 6:45 AM IST

PSI ಸಾವಿನ ಪ್ರಕರಣದ ತನಿಖೆ ಸಿಬಿಐಗೆ ಕೊಡಿ: ಆರ್‌. ಅಶೋಕ್‌

ಕೊಪ್ಪಳ: ಯಾದಗಿರಿ ಪಿಎಸ್‌ಐ ಪರಶುರಾಮ ಛಲವಾದಿ ಸಾವಿನ ಪ್ರಕರಣವನ್ನು ರಾಜ್ಯ ಸರಕಾರ ಕೂಡಲೇ ಸಿಬಿಐಗೆ ಕೊಡಬೇಕೆಂದು ವಿಪಕ್ಷ ನಾಯಕ ಆರ್‌. ಅಶೋಕ್‌ ಆಗ್ರಹಿಸಿದರು.

ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್‌ಐ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಾತನಾಡಿ, ಪಿಎಸ್‌ಐ ಮೃತಪಟ್ಟ ಬಳಿಕ ಎಸ್ಪಿ 18 ಗಂಟೆಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೆಲ್ಲವೂ ಸಿಎಂ, ಗೃಹ ಸಚಿವರ ಗಮನಕ್ಕಿಲ್ಲದೇ ನಡೆಯುವಂಥದ್ದಲ್ಲ. ಆದರೆ ನಾವು ಯಾರೂ ಸಿಐಡಿಗೆ ಕೊಡಿ ಎಂದು ಕೇಳಿಲ್ಲ. ಕುಟುಂಬವೂ ಸಹಿತ ಸಿಐಡಿಗೆ ಒತ್ತಾಯಿಸಿಲ್ಲ. ಆದರೆ ಒಂದೇ ಗಂಟೆಯಲ್ಲಿ ಸರಕಾರ ಸಿಐಡಿ ತನಿಖೆಗೆ ಕೊಟ್ಟಿದೆ. ಹಿಂದೆ ಸಿಐಡಿಗೆ ಕೊಟ್ಟಿರುವ ಪ್ರಕರಣ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಪ್ರಕರಣವನ್ನು ರಾಜ್ಯ ಸರಕಾರ ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ. ಈ ಪ್ರಕರಣ ಸಿಬಿಐಗೆ ಕೊಡಬೇಕು ಎಂದು ಕುಟುಂಬ ವರ್ಗವೂ ಒತ್ತಾಯ ಮಾಡಿದೆ. ನಾನು ವಿಪಕ್ಷದ ನಾಯಕನಾಗಿ ಇದನ್ನು ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

ಈ ಸರಕಾರ, ಯಾದಗಿರಿ ಪೊಲೀಸರು ನಡೆದುಕೊಂಡು ರೀತಿ ನನಗೆ ನೋವಾಗಿದೆ. ಮೃತ ಪಿಎಸ್‌ಐ ಪತ್ನಿ 9 ತಿಂಗಳ ತುಂಬು ಗರ್ಭಿಣಿ ಪತಿಯ ಸಾವಿನ ಪ್ರಕರಣ ದಾಖಲಿಸಲು ರಸ್ತೆಯಲ್ಲಿ ಕುಳಿತು ಧರಣಿ ಮಾಡುವಂತ ಸ್ಥಿತಿ ಬಂದಿತು. ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್‌ ದಲಿತ ಪಿಎಸ್‌ಐ ನಮ್ಮ ಏರಿಯಾದಲ್ಲಿ ಇರಬಾರದು ಎಂದಿದ್ದಾನಂತೆ. ದಲಿತರ ಬಗ್ಗೆ ಇಷ್ಟೊಂದು ಕೀಳು ಮಟ್ಟದಲ್ಲಿ ಕಾಣುವುದು ಯಾವ ಸಂಸ್ಕೃತಿ ಎಂದರು.

ಎಫ್‌ಎಸ್‌ಎಲ್‌ ವರದಿಗೆ ಮುನ್ನವೇ ಸಾವಿನ ಷರಾ ಬರೆದ ಪರಂ: ಅಶೋಕ್‌
ಪಿಎಸ್‌ಐ ಸಾವಿನ ಎಫ್‌ಎಸ್‌ಎಲ್‌ ಸಾವಿನ ವರದಿಯೇ ಬಂದಿಲ್ಲ. ಆದರೆ ಗೃಹ ಸಚಿವರು ಹೃದಯಾಘಾತದಿಂದ ಪಿಎಸ್‌ಐ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇದೆಂಥ ದುರಂತದ ಸಂಗತಿ. ಮೃತರ ಕುಟುಂಬಕ್ಕೆ ನ್ಯಾಯ ಸಿಗಬೇಕು. ನಾವು ಇದನ್ನು ಅಷ್ಟು ಸುಲಭವಾಗಿ ಬಿಡುವುದಿಲ್ಲ. ಪಾದಯಾತ್ರೆ ಮಧ್ಯೆ ಈ ಕುಟುಂಬವನ್ನು ಭೇಟಿ ಮಾಡಿದ್ದೇನೆ. ಮೃತ ಪಿಎಸ್‌ಐ ಕುಟುಂಬದ ಜತೆ ನಾವಿದ್ದೇವೆ. ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಲಿದ್ದೇವೆ ಎಂದು ಅಶೋಕ್‌ ಹೇಳಿದರು.

ಅಶೋಕ್‌ ಕಾಲಿಗೆ ಬಿದ್ದು ಗೋಳಾಡಿದ ತಾಯಿ!
ಮೃತ ಪರಶುರಾಮ ಅವರ ನಿವಾಸಕ್ಕೆ ವಿಪಕ್ಷ ನಾಯಕ ಆರ್‌. ಅಶೋಕ್‌ ಕಾಲಿಡುತ್ತಿದ್ದಂತೆ ಪರಶುರಾಮ ಅವರ ತಾಯಿ ಹಿರೇಗಂಗಮ್ಮ, “ನನ್ನ ಮಗನನ್ನು ಬದುಕಿಸಿ ಕೊಡಿ’ ಎಂದ ಅವರ ಕಾಲಿಗೆ ಬಿದ್ದು ಗೋಳಾಡಿದರು. ತತ್‌ಕ್ಷಣ ತಾಯಿಯ ಕೈ ಹಿಡಿದ ಅಶೋಕ್‌ ಅವರು ತಮ್ಮ ತಲೆಗೆ ಒತ್ತಿಕೊಂಡು ನಮಸ್ಕರಿಸಿ ಸಾಂತ್ವನ ಹೇಳಿದರು. ಸಹೋದರ ಹನುಮಂತಪ್ಪ ಮಾತನಾಡಿ, ನಮ್ಮ ಪರಶುರಾಮ ತುಂಬಾ ಬುದ್ಧಿವಂತ. ಹಲವು ನೌಕರಿ ಬಿಟ್ಟು ಪಿಎಸ್‌ಐ ಹುದ್ದೆಗೆ ಸೇರಿದ್ದ, ಆತನಿಗೆ ದೊಡ್ಡ ಕನಸಿತ್ತು. ಸಮಾಜ ಸೇವೆ ಮಾಡಬೇಕೆಂಬ ಹಂಬಲ ಇತ್ತು. ಕೂಲಿ ಕೆಲಸ ಮಾಡಿ ಆತನಿಗೆ ಶಿಕ್ಷಣ ಕೊಡಿಸಿದ್ದೆವು. ಆತನೂ ಕೂಲಿ ಕೆಲಸ ಮಾಡಿ ಜೀವನ ಕಟ್ಟಿಕೊಂಡು ನೌಕರಿ ಸೇರಿದ್ದ. ಆತನನ್ನು ವರ್ಗಾವಣೆ ಮಾಡುವ ವಿಷಯ ನಮಗೆ ತಿಳಿದಿತ್ತು. ಆಗ 30 ಲಕ್ಷ ರೂ. ಕೊಡಬೇಕು ಎಂದಿದ್ದ. ನಾವು ಅಷ್ಟು ಹಣವಂತರಲ್ಲ. ನಮ್ಮಿಂದ ಕೊಡಲಾಗದು ಎಂದು ಹೇಳಿದ್ದೆವು. ಆತನು ತುಂಬಾ ಒತ್ತಡದಲ್ಲಿದ್ದ. ಒಂದೆರಡು ದಿನ ಮನೆಯಲ್ಲಿ ರಜೆ ಮಾಡಿ ಇಲ್ಲೇ ಇರು ಎಂದಿದ್ದೆವು. ಆದರೆ ನನಗೆ ರಜೆ ಹಾಕಲು ಬರುವುದಿಲ್ಲ, ತುಂಬಾ ಒತ್ತಡದ ಕೆಲಸ ಎಂದು ಪದೇ ಪದೆ ಹೇಳುತ್ತಿದ್ದ ಎಂದು ಕಣ್ಣೀರಾದರು.

ಯಾದಗಿರಿಗೆ ಸಿಐಡಿ ತಂಡ; ಮಾಹಿತಿ ಸಂಗ್ರಹ
ಯಾದಗಿರಿ: ಯಾದಗಿರಿ ನಗರ ಪೊಲೀಸ್‌ ಠಾಣೆ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣದ ತನಿಖೆಗೆ ಇಳಿದಿರುವ ಸಿಐಡಿ ತಂಡ ರವಿವಾರ ನಗರದ ಸಿಐಡಿ ಕಚೇರಿಗೆ ಆಗಮಿಸಿ ಮಹತ್ವದ ಮಾಹಿತಿ ಕಲೆ ಹಾಕಿದೆ. ಸಿಐಡಿ ಡಿವೈಎಸ್ಪಿ ಪುನೀತ್‌ ನೇತೃತ್ವದ ತಂಡ ಗ್ರಾಮೀಣ ಪೊಲೀಸ್‌ ಠಾಣೆ ಹಾಗೂ ಎಸ್‌ಪಿ ಕಚೇರಿಗೆ ತೆರಳಿ ಎರಡು ಪೆನ್‌ಡ್ರೈವ್‌ ಹಾಗೂ ಪರಶುರಾಮ ಬಳಸುತ್ತಿದ್ದ ಫೋನ್‌ ವಶಕ್ಕೆ ಪಡೆದಿದೆ. ನಗರ ಠಾಣೆ ಸಿಬಂದಿಯಿಂದಲೂ ಮಾಹಿತಿ ಸಂಗ್ರಹಿಸಿದೆ.

ಗ್ರಾಮೀಣ ಠಾಣೆ ಸಿಪಿಐ ಸುನೀಲ್‌ ಮೂಲಿಮನಿ ಹಾಗೂ ಪಿಎಸ್‌ಐ ಹಣಮಂತ ಬಂಕಲಗಿ ಸಿಐಡಿ ಅಧಿಕಾರಿಗಳಿಗೆ ಸಾಥ್‌ ನೀಡಿದ್ದಾರೆ.

ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ ಹಾಗೂ ಪುತ್ರ ಪಂಪಣ್ಣಗೌಡ ವಿರುದ್ಧ ಪಿಎಸ್‌ಐ ಪರಶುರಾಮ ಪತ್ನಿ ಶ್ವೇತಾ ದೂರು ನೀಡಿದ್ದರು. ಪ್ರಕರಣ ತೀವ್ರತೆ ಅರಿತ ರಾಜ್ಯ ಸರಕಾರ ಶನಿವಾರ ಸಿಐಡಿಗೆ ವಹಿಸಿದೆ.

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

2-koppala

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

5-govt-office

ಕೃಷ್ಣ ನಿಧನ;ಪ್ರಮುಖ‌ ಸರಕಾರಿ ಕಚೇರಿಗಳಲ್ಲಿ ಅರ್ಧಕ್ಕೇರದ ರಾಷ್ಟ್ರಧ್ವಜ;ಅಧಿಕಾರಿಗಳಿಂದ ಅಗೌರವ

1-gangavathi

ಎಸ್.ಎಂ.ಕೃಷ್ಣ ನಿಧನ; ಶೋಕಾಚರಣೆ ಆದೇಶಕ್ಕೆ ಕಿಮ್ಮತ್ತು ನೀಡದ ಬಿಇಒ,ಸಮಾಜ ಕಲ್ಯಾಣ ಇಲಾಖೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.