Stock Market:ಅಮೆರಿಕದ ಆರ್ಥಿಕ ಹಿಂತರಿತದ ಭೀತಿ-ಬಾಂಬೆ ಷೇರುಪೇಟೆ ವಹಿವಾಟು ಅಲ್ಲೋಲಕಲ್ಲೋಲ!
ಫ್ರಾನ್ಸ್ ರಾಜಕೀಯ ಅಸ್ಥಿರತೆ ಜಾಗತಿಕ ವಹಿವಾಟಿನ ಮೇಲೆ ಪರಿಣಾಮ ಬೀರಿದೆ..
Team Udayavani, Aug 5, 2024, 10:34 AM IST
ಮುಂಬೈ: ಅಮೆರಿಕದ ಆರ್ಥಿಕ ಹಿಂಜರಿತದ ಕಳವಳದ ಹಿನ್ನೆಲೆಯಲ್ಲಿ ಜಪಾನ್, ಹಾಂಗ್ ಕಾಂಗ್, ಇಸ್ರೇಲ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಸೋಮವಾರ (ಆಗಸ್ಟ್ 05) ಷೇರುಪೇಟೆ ಆರಂಭಿಕ ವಹಿವಾಟಿನಲ್ಲೇ ಭಾರೀ ಕುಸಿತ ಕಂಡ ಪರಿಣಾಮ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ, ನಿಫ್ಟಿ ದೊಡ್ಡ ಇಳಿಕೆಯೊಂದಿಗೆ ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬರೋಬ್ಬರಿ 1,533.11 ಅಂಕಗಳಷ್ಟು ಕುಸಿತ ಕಂಡಿದ್ದು 79,448.84 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 463.50 ಅಂಕ ಕುಸಿತವಾಗಿದ್ದು, 24,254.20 ಅಂಕಕ್ಕೆ ಇಳಿಕೆಯಾಗಿದೆ.
ರೂಪಾಯಿ ಮೌಲ್ಯ ಕೂಡಾ ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಆರ್ಥಿಕ ಹಿಂಜರಿಕೆಯ ಭೀತಿ ಜಾಗತಿಕ ಮಾರುಕಟ್ಟೆ ಮೇಲೆ ಬೀರಿದ್ದು, ಇದರಿಂದಾಗಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಭಾರೀ ಪ್ರಮಾಣದಲ್ಲಿ ಕುಸಿತವಾಗಲು ಕಾರಣವಾಗಿದೆ.
“ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಮಧ್ಯಾಹ್ನದ ಹೊತ್ತಿಗೆ 2,600 ಅಂಕ ಭಾರೀ ಪತನದೊಂದಿಗೆ, 78,385.49 ಅಂಕಗಳ ಗಡಿಗೆ ಕುಸಿದಿತ್ತು. ಬಳಿಕ 2,300.20 ಅಂಕಗಳ ಕುಸಿತದೊಂದಿಗೆ 78,654.23 ಅಂಕಗಳಲ್ಲಿ ವಹಿವಾಟು ಮುಂದುವರಿಸಿದೆ.”
2,300 ಅಂಕಗಳ ಕುಸಿತದ ಪರಿಣಾಮ ಹೂಡಿಕೆದಾರರಿಗೆ ಬರೋಬ್ಬರಿ 18 ಲಕ್ಷ ಕೋಟಿ ರೂಪಾಯಿ ನಷ್ಟವನ್ನುಂಟು ಮಾಡಿದೆ. ಸೂಚ್ಯಂಕ ಭಾರೀ ಕುಸಿತದಿಂದಾಗಿ ಷೇರುಪೇಟೆ ಮೌಲ್ಯ 457.16 ಲಕ್ಷ ಕೋಟಿಯಿಂದ 443.29 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ಜಾಗತಿಕವಾಗಿ ಹೂಡಿಕೆದಾರರು ಮಧ್ಯ ಏಷ್ಯಾದ ಬೆಳವಣಿಗೆಯನ್ನು ಕೂಡಾ ಗಮನಿಸುತ್ತಿದ್ದು, ಇಸ್ರೇಲ್, ಹಮಾಸ್ ಯುದ್ಧ, ಹಮಾಸ್ ಮುಖಂಡನ ಹತ್ಯೆ, ಬಾಂಗ್ಲಾ ದಳ್ಳುರಿ, ಫ್ರಾನ್ಸ್ ರಾಜಕೀಯ ಅಸ್ಥಿರತೆ ಜಾಗತಿಕ ವಹಿವಾಟಿನ ಮೇಲೆ ಪರಿಣಾಮ ಬೀರಿರುವುದಾಗಿ ವರದಿ ತಿಳಿಸಿದೆ.
ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಜೆಎಸ್ ಡಬ್ಲ್ಯು ಸ್ಟೀಲ್, ಅದಾನಿ ಪೋರ್ಟ್ಸ್, ಮಾರುತಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ನಷ್ಟ ಕಂಡಿವೆ. ಮತ್ತೊಂದೆಡೆ ಸನ್ ಫಾರ್ಮಾ, ಯುನಿಲಿವರ್ ಲಾಭಗಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.