Congress Govt., ಎರಡು ತಿಂಗಳ ಗಡುವಿಗೆ ಸಚಿವರು ಭುಸು ಭುಸು
ಅನುದಾನ ಇಲ್ಲದೆ ಸಾಧನೆ ಹೇಗೆ: ಕೆಲವು ಸಚಿವರ ಪ್ರಶ್ನೆ
Team Udayavani, Aug 6, 2024, 7:15 AM IST
ಬೆಂಗಳೂರು: ಎರಡು2 ತಿಂಗಳಲ್ಲಿ ಕಾರ್ಯವೈಖರಿ ಬದಲಿಸಿಕೊಳ್ಳ ದಿದ್ದರೆ ಸಚಿವ ಸ್ಥಾನ ತೊರೆಯಲು ಸಿದ್ಧರಾಗಿ ಎಂಬ ಕಾಂಗ್ರೆಸ್ ಹೈಕಮಾಂಡ್‌ನ “ಎಚ್ಚರಿಕೆ ಸಂದೇಶ’ ಈಗ ಸಚಿವ ಸಂಪುಟ ಸದಸ್ಯರಲ್ಲಿ ಅಸಮಾಧಾನ ಉಂಟುಮಾಡಿದೆ. ಗಡುವಿನ ಹಿನ್ನೆಲೆಯಲ್ಲಿ ಹಲವು ಸಚಿವರು ಈಗ ಒಳಗೊಳಗೆ ಭುಸುಗುಡುತ್ತಿದ್ದಾರೆ. ಹೈಕಮಾಂಡ್‌ನ ಈ ನಡೆ ಕಾಂಗ್ರೆಸ್ ಪಾಳೆಯದಲ್ಲಿ ಹಲವು ಬಗೆಯ ವ್ಯಾಖ್ಯಾನಗಳಿಗೆ ಆಸ್ಪದ ನೀಡಿದೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಾರದೆ ಕರ್ನಾಟಕದ ಬಗ್ಗೆ ಹೈಕಮಾಂಡ್ ಇರಿಸಿದ್ದ ನಿರೀಕ್ಷೆ ಹುಸಿಯಾಗಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಹೈಕಮಾಂಡ್ ಸಚಿವರ ಕಾರ್ಯವೈಖರಿಯ ಮೌಲ್ಯಮಾಪನ ನಡೆಸಿ ನಿಷ್ಕ್ರಿಯತೆಯಿಂದ ಹೊರಬಂದು ಕಾರ್ಯದಕ್ಷತೆ ತೋರಬೇಕೆಂದು ಎಚ್ಚರಿಕೆ ಸಂದೇಶ ನೀಡಿರುವ ಕ್ರಮ ಸರಿಯಲ್ಲ ಎಂಬ ಮಾತುಗಳು ಈಗ ಸಚಿವ ಸಂಪುಟ ಸದಸ್ಯರ ವಲಯದಿಂದಲೇ ಕೇಳಿಬರುತ್ತಿವೆ.ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 14 ತಿಂಗಳು ಪೂರೈಸಿದೆ.
ಈ ಅವಧಿಯಲ್ಲಿ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದರೂ ಸರಕಾರ ಹಾಗೂ ಪಕ್ಷದ ವರ್ಚಸ್ಸು ವೃದ್ಧಿಸಿಲ್ಲ. ಅದಕ್ಕೆ ಸಚಿವರ ನಡೆಯೇ ಪ್ರಮುಖ ಕಾರಣ ಎಂಬುದನ್ನು ಹೈಕಮಾಂಡ್ ಪತ್ತೆ ಹಚ್ಚಿದೆ. ಜತೆಗೆ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು, ಆಡಳಿತ ಪಕ್ಷಕ್ಕೆ ಸೇರಿದ ಶಾಸಕರ ಕೆಲಸಗಳಿಗೆ ಸಚಿವರು ಸರಿಯಾಗಿ ಸ್ಪಂದಿಸದಿರುವುದು ಕೂಡ ಕಾರಣ ಎನ್ನಲಾಗಿದೆ.
ಎಲ್ಕಕ್ಕಿಂತ ಮುಖ್ಯವಾಗಿ ಅಭಿವೃದ್ಧಿ ಕೆಲಸಗಳು ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬುದೂ ಹೈಕಮಾಂಡ್‌ಗೆ ಮನವರಿಕೆ ಆಗಿದೆ. ಇವೆಲ್ಲದರ ನಡುವೆಯೂ ಸಚಿವರನ್ನು ನಿಷ್ಕ್ರಿಯರೆಂದು ಬಹಿರಂಗವಾಗಿ ಹಣೆಪಟ್ಟಿ ಕಟ್ಟಿದ್ದು ಸರಿಯಲ್ಲ. ತಮ್ಮ ತಮ್ಮ ಇಲಾಖೆಗಳಲ್ಲಿ ಸದಾ ಸಕ್ರಿಯರಾಗಲು, ಕಾರ್ಯದಕ್ಷತೆ ತೋರಲು ಇಲಾಖೆಯಲ್ಲಿ ಸಾಕಷ್ಟು ಅನುದಾನವೇ ಇಲ್ಲ. ಬರಿಗೈಯಲ್ಲಿ ಕೆಲಸ ಮಾಡಿ ತೋರಿಸಿ ಅಂದರೆ ಹೇಗೆ ಎಂದು ಕೆಲವು ಸಚಿವರು ಪ್ರಶ್ನಿಸತೊಡಗಿದ್ದಾರೆನ್ನಲಾಗಿದೆ.
ಅನುದಾನವೇ ಇಲ್ಲ: ಅಸಮಾಧಾನ
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್‌ಸಿಂಗ್ ಸುಜೇìವಾಲ ಸಚಿವರಿಗೆ ಚಾಟಿ ಬೀಸಿರುವ ಕ್ರಮಕ್ಕೆ ಬಹಳ ಆಕ್ಷೇಪ ವ್ಯಕ್ತವಾಗಿದೆ. ಸರಕಾರ ಬಂದ ದಿನದಿಂದಲೂ ಕೆಲವು ಇಲಾಖೆಗಳನ್ನು ಹೊರತುಪಡಿಸಿದರೆ ಇತರ ಇಲಾಖೆಗಳಿಗೆ ಸಮರ್ಪಕ ಅನುದಾನವೇ ಇಲ್ಲ. ನಮ್ಮ ಪಕ್ಷದ ಶಾಸಕರೇ ಬಂದು ಹತ್ತಿಪ್ಪತ್ತು ಲಕ್ಷ ರೂ. ಮೌಲ್ಯದ ಕೆಲಸ ಮಾಡಿಕೊಡಿ ಎಂದು ಕೇಳಿದರೂ ಮಾಡಿಕೊಡುವ ಸ್ಥಿತಿಯಲ್ಲಿ ನಾವಿಲ್ಲ. ಇಂತಹ ಸ್ಥಿತಿಯಲ್ಲಿ ನಾವು ಇರುವಾಗ ಕಾರ್ಯದಕ್ಷತೆ ತೋರಿಸುವುದು ಎಲ್ಲಿಂದ ಎಂದು ಕೆಲವು ಸಚಿವರು ಆಪ್ತ ವಲಯದಲ್ಲಿ ಚರ್ಚಿಸಿದ್ದಾರೆಂದು ತಿಳಿದುಬಂದಿದೆ.
ಕಳೆದ ವರ್ಷ ರಾಜ್ಯವನ್ನು ಬರಗಾಲ ಕಾಡಿತ್ತು. ಕುಡಿಯುವ ನೀರು ಪೂರೈಸುವುದೇ ದೊಡ್ಡ ಸವಾಲು ಆಗಿತ್ತು ಎಂದು ಕೆಲವು ಸಚಿವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಲೋಕಸಭಾ ಚುನಾವಣೆ ನೆಪದಲ್ಲಿ 2 ತಿಂಗಳಿಗೂ ಹೆಚ್ಚು ಕಾಲ ನೀತಿ ಸಂಹಿತೆ ಜಾರಿಯಲ್ಲಿತ್ತು. ನಮ್ಮ ಸರಕಾರ ಬಂದು ಹೊಸ ಬಜೆಟ್ ಮಂಡಿಸಿ ಕೆಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಒಟ್ಟಾರೆ ಲೆಕ್ಕ ಹಾಕಿದರೆ 8 ತಿಂಗಳಷ್ಟೇ ನಾವು ಸರಿಯಾಗಿ ಅಧಿಕಾರ ನಡೆಸಿದ್ದೇವೆ. ಈ ಅಲ್ಪ ಅವಧಿಯಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ಹೈಕಮಾಂಡ್ ಅರ್ಥ ಮಾಡಿಕೊಳ್ಳಬೇಕಿತ್ತು ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.