Bajpe: ಹಬ್ಬದ ದಿನಗಳಲ್ಲಿ ದರ ಹೆಚ್ಚಾಗುವ ಸಾಧ್ಯತೆ
ಮಳೆಗೆ ತರಕಾರಿ ಇಳುವರಿ ಕುಂಠಿತ: ಕೃಷಿಕರಿಗೆ ನಷ್ಟ
Team Udayavani, Aug 6, 2024, 3:35 PM IST
ಬಜಪೆ: ಸತತ ಮಳೆಗೆ ತರಕಾರಿ ಬೆಳೆಗೆ ಭಾರಿ ಹಾನಿಯಾಗಿದ್ದು ಕೃಷಿಕರಿಗೆ ನಷ್ಟ ಸಂಭವಿಸಿದೆ. ಈ ಬಾರಿ ಮಳೆ ತಡವಾಗಿ ಬಂದ ಕಾರಣ ಕೃಷಿಕರಲ್ಲಿ ತರಕಾರಿ ಬೆಳೆಯ ಲೆಕ್ಕಾಚಾರಗಳಿಗೆ ಸ್ವಲ್ಪಮಟ್ಟಿಗೆ ತೊಂದರೆಕೊಟ್ಟಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ತರಕಾರಿ ಬೆಳೆಯ ಕಾರ್ಯ ಆರಂಭಿಸಿ, ಬೀಜ ಬಿತ್ತನೆ ಮಾಡಲಾಗಿತ್ತು. ಇನ್ನೂ ಕೆಲವರು ತಡವಾಗಿ ಬೀಜ ಬಿತ್ತನೆ ಮಾಡಿದ್ದಾರೆ.
ಬಜಪೆ ಊರಿನ ತರಕಾರಿಗೆ ಪ್ರಸಿದ್ದಿ ಪಡೆದಿದ್ದು, ಅದ ರಲ್ಲೂ ಬಜಪೆ ಬೆಂಡೆ ಹೆಚ್ಚು ಪ್ರಸಿದ್ದಿ ಪಡೆದಿದೆ. ಇಲ್ಲಿನ ಪರಿಸರದಲ್ಲಿ ಎಕರೆಗಟ್ಟೆಲೆ ಬೆಂಡೆಕಾಯಿ ಬೆಳೆ ಯುವ ಕೃಷಿಕರೇ ಹೆಚ್ಚು. ಇದಕ್ಕೆ ಬೆಲೆಯೂ ಉತ್ತ ಮ ವಾಗಿ ಸಿಗುವ ಕಾರಣ ಊರಿನ ಬೆಂಡೆಯನ್ನು ಹೆಚ್ಚಿನ ಎಲ್ಲಕೃಷಿಕರು ಬೆಳೆಸುತ್ತಿದ್ದಾರೆ. ಈ ಬಾರಿಯೂ ಮಳೆ ತಡವಾಗಿ ಬಂದರೂ ಊರಿನ ಬೆಂಡೆ ಬೀಜದ ಬಿತ್ತನೆಯೂ ಜೂನ್ ಮೊದಲವಾರದಲ್ಲಿ ನಡೆದಿದೆ.
ಬಿತ್ತನೆ ಮಾಡಿ 60 ದಿನವಾದರೂ ಬೆಂಡೆ ಇಲ್ಲ
ಬೆಂಡೆ ಬೀಜ ಬಿತ್ತನೆ ಮಾಡಿ 45 ದಿನಗಳಲ್ಲಿ ಬೆಂಡೆ ಸಿಗುವುದು ಮಾಮೂಲು. ಆದರೆ ಈಗ 60 ದಿನಗಳಾದರೂ ಬೆಂಡೆಕಾಯಿ ಆಗಲಿಲ್ಲ. ಕೇವಲ ಹೂಗಳು ಬಿಟ್ಟಿವೆ. ಅಧಿ ಕ ಮಳೆ ಇದಕ್ಕೆ ಕಾರಣ.
ಹೆಚ್ಚಾಗಿ ನಾಗರ ಪಂಚಮಿ, ಅಷ್ಟಮಿ, ಚೌತಿ ಹಾಗೂ ತೆನೆಹಬ್ಬವನ್ನು ಗಮನದಲ್ಲಿಟ್ಟುಕೊಂಡು ಬೆಂಡೆಯನ್ನು ಜೂನ್ ಮೊದಲ ವಾರದಲ್ಲಿ ಬಿತ್ತನೆಮಾಡಲಾಗುತ್ತದೆ. ನಾಗರ ಪಂಚಮಿಗೆ ಮುನ್ನ ತರಕಾರಿಯನ್ನು ಮಾರುಕಟ್ಟೆಗೆ ತರಲು ಕ್ಲಪ್ತಸಮಯದಲ್ಲಿ ಸಿಗುತ್ತದೆ. ಬಳಿಕ ಅಷ್ಟಮಿಗೆ, ಚೌತಿಗೆ ಹಾಗೂ ತೆನೆ ಹಬ್ಬಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬೆಂಡೆ ಸಿಗುತ್ತದೆ. ಇದ್ದರಿಂದ ಇಲ್ಲಿನ ಕೃಷಿಕರಿಗೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಕೆಲವೆಡೆ ಬೆಂಡೆ ಗಿಡಗಳಲ್ಲಿ ಹಳದಿ ರೋಗ ಕಂಡು ಬಂದಿದೆ. ಇದು ಇಳುವರಿಗೆ ದೊಡ್ಡ ಹೊಡೆತವಾಗಿದೆ.
ಗಿಡ ಬೆಳವಣಿಗೆ ಕುಂಠಿತ
ಮಳೆ ಜಾಸ್ತಿಯಾದ ಕಾರಣ ಬೆಂಡೆ ಗಿಡಗಳ ಬೆಳವಣಿಗೆ ಕುಂಠಿತಗೊಂಡಿದೆ. ಬಿಟ್ಟ ಹೂಗಳು ಕೊಳೆತು ಹೋಗಿವೆ.ಇದರಿಂದ ಈ ಬಾರಿ ಈಗ ನಾಗರಪಂಚಮಿಗೆ ಹೆಚ್ಚು ಬೆಂಡೆ ಸಿಗದು, ಇನ್ನೂ ಬಿಸಿಲು ಇದ್ದರೆ ಗಿಡಗಳ ಬೆಳವಣಿಗೆ ಸಾಧ್ಯ. ಅಷ್ಟಮಿ ಹಬ್ಬಕ್ಕಾದರೂ ಬೆಂಡೆ ಸಿಗಬಹುದು ಎಂಬುವುದು ಅಡ್ಕಬಾರೆಯ ಕೃಷಿಕ ರಿಚಾರ್ಡ್ ಡಿ’ಸೋಜಾ ಅವರ ನಂಬಿಕೆ.
ಹರಿವೆ ಗಿಡಬೆಳವಣಿಗೆಯೂ ಕುಂಠಿತ ವಾಗಿದೆ. ಊರಿನ ಬೆಂಡೆ ಕೆ.ಜಿ.ಗೆ 200 ರೂ.ಯಲ್ಲಿ ಮಾರಾಟವಾಗುತ್ತಿದೆ. ಆದರೆ ಕೃಷಿಕರಿಗೆ 80 ರೂ.ಸಿಗುತ್ತಿದೆ. ಇತರ ಜಿಲ್ಲೆಯ ಬೆಂಡೆ ಕೆ.ಜಿಗೆ 80 ರೂ. ಯಲ್ಲಿ ಮಾರಾಟ ವಾಗುತ್ತಿದೆ. ಊರಿನ ಪೀರೆಗೆ ಕೆ.ಜಿಗೆ 80 ರೂ. ಮಾರಾಟವಾಗುತ್ತಿದ್ದರೆ. ಕೃಷಿಕರಿಗೆ 50 ರೂ. ಸಿಗುತ್ತಿದೆ. ಊರಿನ ಮುಳ್ಳು ಸೌತೆ ಕೆ.ಜಿಗೆ 120 ರೂ.ಮಾರಾಟವಾಗುತ್ತಿದೆ. ಕೃಷಿಕರಿಗೆ 60 ರೂ.ಸಿಗುತ್ತಿದೆ. ಬಜಪೆಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ, ಕರಂಬಾರು, ಪಡುಪೆರಾರ ಪಡೀಲ್ ಪ್ರದೇಶಗಳು ತರಕಾರಿ ಬೆಳೆಗೆ ಪ್ರಸಿದ್ಧಿ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.