Belman: ಈ ಮನೆಗೆ ಸೂರೇ ಇಲ್ಲ, ಟಾರ್ಪಾಲೇ ಹೊದಿಕೆ!

ನಂದಳಿಕೆ ಅಬ್ಬನಡ್ಕದ ಪರಿಶಿಷ್ಟ ಪಂಗಡದ ಕುಟುಂಬ ಜೋಪಡಿಯೇ ನೆಲೆ; ಗೈರಾದ ವಿದ್ಯಾರ್ಥಿನಿಯ ಕರೆತರಲು ಹೋದ ಶಿಕ್ಷಕರಿಗೆ ಕಂಡ ಸಂಕಷ್ಟ

Team Udayavani, Aug 6, 2024, 4:44 PM IST

Screenshot (116)

ಬೆಳ್ಮಣ್‌: ನಂದಳಿಕೆ ಅಬ್ಬನಡ್ಕದಲ್ಲಿನ ಪರಿಶಿಷ್ಟ ಪಂಗಡದ ಕುಟುಂಬವೊಂದು ಸರಿಯಾದ ಸೂರಿಲ್ಲದೆ ಆಗಲೋ ಈಗಲೋ ಎನ್ನುವಂತಿರುವ ಟಾರ್ಪಾಲು ಹೊದಿಕೆಯ ಜೋಪಡಿಯಲ್ಲಿ ವಾಸವಾಗಿದೆ. ಸುಗುಣ ಎಂಬವರ ಮನೆಗೆ ಸಂಪೂರ್ಣ ಟಾರ್ಪಾಲು ಹೊದಿಸಲಾಗಿದೆ. ಬೆಳ್ಮಣ್‌ ಸರಕಾರಿ ಪ್ರೌಢಶಾಲೆಯ ಅಧ್ಯಾಪಕರ ತಂಡ ಈ ಗಂಭೀರ ವಿದ್ಯಮಾನವನ್ನು ಪತ್ತೆ ಹಚ್ಚಿದೆ.

ಬೆಳಕಿಗೆ ಬಂದ ಬಗೆ

ದಿ| ಗೋಪಾಲ ಹಾಗೂ ಸುಗುಣ ಇವರ ಪುತ್ರಿ ಶೋಭಾ ತರಗತಿಗೆ ಗೈರಾಗುತ್ತಿದ್ದಳು. ವಿಶೇಷ ದಾಖಲಾತಿ ಆಂದೋಲನದಡಿ ಶಾಲೆಯ ತಂಡ ಬೆಳ್ಮಣ್‌ ರೋಟರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ಜತೆ ಆಕೆಯ ಮನೆಗೆ ಭೇಟಿ ನೀಡಿದಾಗ ವಾಸ್ತವ ಬಯಲಾಯಿತು. ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಮನೆಯಲ್ಲಿ ತಾಯಿ ಮತ್ತು ಮಗಳು ವಾಸವಾಗಿದ್ದಾರೆ. ಶೋಭಾಳಿಗೆ ಓದಲು ಬಿಡಿ ಮಲಗಲೂ ಒಂದಿಂಚು ಜಾಗವಿಲ್ಲದ ಸ್ಥಿತಿ ಇಲ್ಲಿದೆ. ಮನೆಯಲ್ಲಿ ತಾಯಿ ಮಾತ್ರ ಇರುವುದರಿಂದ ಶೋಭಾಳಿಗೆ ವಿದ್ಯಾರ್ಥಿ ನಿಲಯ ಸೇರುವಂತೆಯೂ ಇಲ್ಲ.

ನೆರವಿಗೆ ಮನವಿ

ಸೂರಿಲ್ಲದ ಈ ಕುಟುಂಬಕ್ಕೆ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು ಸೇರಿ ಸೂರು ಕಲ್ಪಿಸಬೇಕಾಗಿದೆ ಎಂದು ಶಾಲೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ

ನಿವೇಶನಕ್ಕೆ ಅರ್ಜಿ ಹಾಕಿದ್ದರೂ ಫಲವಿಲ್ಲ

ಈ ಕುಟುಂಬ ಈಗಾಗಲೇ ಸಂತ ನಿವೇಶನಕ್ಕೆ ಅರ್ಜಿ ಹಾಕಿದ್ದರೂ ಪ್ರಯೋಜನವಾಗಿಲ್ಲ. ಚುನಾವಣೆಯ ಸಂದರ್ಭ ಮಾತ್ರ ಜನಪ್ರತಿನಿಧಿಗಳಿಗೆ, ರಾಜಕೀಯ ವ್ಯಕ್ತಿಗಳಿಗೆ ಇವರು ಕಾಣುತ್ತಾರೆ. ಬಳಿಕ ಮರೆತು ಬಿಡುತ್ತಾರೆ. ಇಂಥ ಸ್ಥಿತಿಯಲ್ಲಿ ಶೋಭಾ ನಿರಂತರವಾಗಿ ಶಾಲೆಗೆ ಬರಲು ಸಾಧ್ಯವೇ ಎಂದು ಶಿಕ್ಷಕರೇ ಪ್ರಶ್ನಿಸಿಕೊಳ್ಳುತ್ತಾರೆ.

ನೆರವಿಗೆ ನಿಲ್ಲುತ್ತೇವೆ

ಈ ಕುಟುಂಬ, ವಿದ್ಯಾರ್ಥಿನಿಯ ಮನೆ ಪರಿಸ್ಥಿತಿ ನೋಡಿದರೆ ಮನ ಮಿಡಿಯುತ್ತಿದೆ. ರೋಟರಿ ಅವರ ನೆರವಿಗೆ ನಿಲ್ಲಲಿದೆ.

– ಮುರಳೀಧರ ಜೋಗಿ, ಬೆಳ್ಮಣ್‌ ರೋಟರಿ ಅಧ್ಯಕ್ಷ

ಸೇವಾ ಸಂಸ್ಥೆಗಳು ಸಹಕರಿಸಬೇಕು

ಈ ಕಾಲದಲ್ಲಿಯೂ ಇಂತಹ ಕುಟುಂಬಗಳಿವೆ ಎಂದಾಗ ನೋವಾಗುತ್ತದೆ. ಸೇವಾ ಸಂಸ್ಥೆಗಳು ಮುಂದೆ ಬಂದು ಸಹಕರಿಸಬೇಕಾಗಿದೆ.

– ಜಯಂತಿ ಶೆಟ್ಟಿ, ಅಧ್ಯಾಪಕಿ, ಬೆಳ್ಮಣ್‌ ಪ್ರೌಢಶಾಲೆ.

– ಶರತ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

ಸಿಎಸ್‌ ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್‌ ವಿರುದ್ದ ಫಿಕ್ಸಿಂಗ್‌ ಆರೋಪ ಮಾಡಿದ ಲಲಿತ್ ಮೋದಿ

Ranchi

Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!

ICC Champions Trophy to be completely moved from Pakistan?: Decision will be taken at ICC meeting

ICC ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್‌ ಅಮಾನತು

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ

1

Udupi: ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ನ. 29 ರಿಂದ ಡಿ. 1 ಎಂಜಿಎಂ ಕಾಲೇಜಿಗೆ ಅಮೃತ ಮಹೋತ್ಸವ ಸಂಭ್ರಮ

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

Udupi: ಗೀತಾರ್ಥ ಚಿಂತನೆ-107: ಮರಣವೂ- ನಾಟಕದ ಅಲಂಕಾರವೂ…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

5-koratagere

ಇಸ್ಪೀಟ್ ಅಡ್ಡೆಯ ಮೇಲೆ ಡಿವೈಎಸ್ಪಿ ದಾಳಿ; ಮಾಜಿ ಅಧ್ಯಕ್ಷ-ಹಾಲಿ ಉಪಾಧ್ಯಕ್ಷ ಸೇರಿ 8 ಜನರ ಬಂಧನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Anthyarambha: ನ.28ರಂದು ಕೊಂಕಣಿ ಚಲನಚಿತ್ರ “ಅಂತ್ಯಾರಂಭ’ ಪ್ರದರ್ಶನ

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Kiccha Sudeep’s max movie releasing on Dec 25th

Kiccha Sudeepa: ಕ್ರಿಸ್ಮಸ್‌ ಗೆ ಬರುತ್ತಿದೆ ʼಮ್ಯಾಕ್ಸ್‌ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.