Bangladesh: ಹಸೀನಾ ಪರಾರಿಯಾದ್ರೂ ನಿಲ್ಲದ ಹಿಂಸಾಚಾರ!; ಮುಂದುವರಿದ ಪ್ರತಿಭಟನೆ


Team Udayavani, Aug 7, 2024, 6:41 AM IST

Continued protest in Bangladesh

ಢಾಕಾ: ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ಪರಾರಿಯಾಗಿದ್ದರೂ ಢಾಕಾದಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿಯೇ ಇದೆ. ದುಷ್ಕರ್ಮಿಗಳ ಅಟ್ಟಹಾಸ ಮಂಗಳವಾರವೂ ಮುಂದುವರಿ ದಿದ್ದು, ಹಸೀನಾ ರಾಜೀನಾಮೆ ಬಳಿಕ ನಡೆದ ಹಿಂಸಾಚಾರದಲ್ಲೇ 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಆಘಾತಕಾರಿ ಘಟನೆ ಎಂಬಂತೆ, ಅವಾಮಿ ಲೀಗ್‌(ಹಸೀನಾರ ಪಕ್ಷ)ನ ನಾಯಕರೊಬ್ಬರಿಗೆ ಸೇರಿದ ಹೊಟೇಲ್‌ಗೆ ಪ್ರತಿಭಟನಾಕಾರರ ಗುಂಪೊಂದು ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದು, ಹೊಟೇಲ್‌ನೊಳಗಿದ್ದ 25 ಮಂದಿ ಸಜೀವ ದಹನವಾಗಿದ್ದಾರೆ!

ಢಾಕಾದಲ್ಲಿರುವ ಝಬೀರ್‌ ಇಂಟರ್‌ನ್ಯಾಶನಲ್‌ ಹೊಟೇಲ್‌ನಲ್ಲಿ ಈ ಕೃತ್ಯ ನಡೆದಿದೆ. ಏಕಾಏಕಿ ನುಗ್ಗಿದ ಗುಂಪು ಹೊಟೇಲ್‌ನ ನೆಲಮಹಡಿಗೆ ಬೆಂಕಿ ಹಚ್ಚಿದ್ದು, ಕ್ಷಣ ಮಾತ್ರದಲ್ಲಿ ಅದು ಇಡೀ ಕಟ್ಟಡಕ್ಕೆ ವ್ಯಾಪಿಸಿದೆ. ಪರಿಣಾಮ ಇಂಡೋನೇಷ್ಯಾ ಪ್ರಜೆ ಸೇರಿದಂತೆ ಅಲ್ಲಿದ್ದ ಸುಮಾರು 24 ಮಂದಿ ಅತಿಥಿಗಳು, ಸಿಬ್ಬಂದಿ ಸುಟ್ಟು ಕರಕಲಾಗಿದ್ದಾರೆ. ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ ಎಂದೂ ಹೇಳಲಾಗಿದೆ.

ಪೊಲೀಸರಿಂದಲೇ ಮುಷ್ಕರ!: ಈಗ ಬಾಂಗ್ಲಾದಲ್ಲಿ ಪೊಲೀಸರೇ ಮುಷ್ಕರ ಆರಂಭಿಸಿದ್ದಾರೆ. “ಪ್ರತಿ ಪೊಲೀಸ್‌ ಸಿಬ್ಬಂದಿಗೂ ರಕ್ಷಣೆ ನೀಡುವುದಾಗಿ ಭರವಸೆ ಕೊಡುವವರೆಗೂ ಮುಷ್ಕರ ಮುಂದುವರಿಸುತ್ತೇವೆ’ ಎಂದು ಪೊಲೀಸರು ಹೇಳಿದ್ದಾರೆ.

ಪರಾರಿಯಾಗುತ್ತಿದ್ದ ಸಚಿವರಿಬ್ಬರ ಸೆರೆ!

ಭಾರತಕ್ಕೆ ಪರಾರಿಯಾಗಲು ಯತ್ನಿಸಿದ ಬಾಂಗ್ಲಾದ ಇಬ್ಬರು ಸಚಿವರನ್ನು ಮಂಗಳವಾರ ಬಾಂಗ್ಲಾ ಸೇನೆ ಬಂಧಿಸಿದೆ. ಹಸೀನಾ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಹಸನ್‌ ಮಹೂ¾ದ್‌, ಐಟಿ ಸಚಿವರಾಗಿದ್ದ ಜುನೈದ್‌ ಅಹ್ಮದ್‌ ಪಲಕ್‌ ಅವರು ದಿಲ್ಲಿಗೆ ಪರಾರಿಯಾಗಲೆಂದು ಢಾಕಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲೇ ಅವರನ್ನು ಬಂಧಿಸಲಾಗಿದೆ.

ದಂಗೆ ಮಧ್ಯೆ 500 ಕೈದಿಗಳು ಪರಾರಿ

ದೇಶದಲ್ಲಿ ಸೃಷ್ಟಿಯಾಗಿರುವ ಅರಾಜ ಕತೆಯ ಲಾಭವನ್ನು ಬಾಂಗ್ಲಾದ ಕೈದಿಗಳೂ ಪಡೆದಿದ್ದಾರೆ. ಸೋಮ ವಾರ ಗುಂಪೊಂದು ಶೇರ್‌ಪುರ ಜಿಲ್ಲಾ ಕಾರಾಗೃಹದ ಗೇಟು ಮುರಿದು ಒಳನುಗ್ಗಿದ್ದಲ್ಲದೆ, ಕಟ್ಟಡಕ್ಕೆ ಬೆಂಕಿಯನ್ನೂ ಹಚ್ಚಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಸುಮಾರು 500 ಕೈದಿಗಳು ಜೈಲಿಂದ ಪರಾರಿಯಾಗಿದ್ದಾರೆ.

ಒಟ್ಟಾರೆ ಸಾವಿನ ಸಂಖ್ಯೆ 440ಕ್ಕೇರಿಕೆ

ಶೇಖ್‌ ಹಸೀನಾ ಪರಾರಿಯಾದ ಬಳಿಕ ನಡೆದ ದೊಂಬಿಯಲ್ಲಿ 100 ಮಂದಿ ಮೃತಪಟ್ಟಿದ್ದು, ಈ ಮೂಲಕ ಬಾಂಗ್ಲಾದಲ್ಲಿ ಮೀಸಲು ವಿರೋಧಿ ಹಿಂಸಾಚಾರಕ್ಕೆ ಜುಲೈ ಯಿಂದ ಈವರೆಗೆ ಬಲಿಯಾದವರ ಸಂಖ್ಯೆ 440ಕ್ಕೇರಿದೆ. ಗಲಭೆ ಪೀಡಿತ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ದುಷ್ಕರ್ಮಿಗಳು ಸಿಕ್ಕ ಸಿಕ್ಕ ಮನೆಗಳು, ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿದ್ದಾರೆ, ಸರಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಬಾಂಗ್ಲಾ ಸೇನೆ ಹರಸಾಹಸ ಪಡುತ್ತಿದೆ. ಮಂಗಳವಾರ ಕೆಲವು ಪ್ರದೇಶಗಳಲ್ಲಿ ಮಾತ್ರ ಪರಿಸ್ಥಿತಿ ಸಹಜತೆಗೆ ಮರಳಿದೆ ಎಂದು ವರದಿಗಳು ಹೇಳಿವೆ.

ರಾಜೀನಾಮೆ ನೀಡಲು  ಕೊನೆ ಕ್ಷಣದಲ್ಲಿ ಹಸೀನಾ ಮನವೊಲಿಸಿದ್ದ ಕುಟುಂಬ

ರಾಜೀನಾಮೆ ನೀಡಲು ನಿರಾಕರಿಸಿದ್ದ ಪ್ರಧಾನಿ ಹಸೀನಾ, ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಸೇನೆ ತನ್ನ ಶಕ್ತಿಯನ್ನು ಬಳಸಿ ಹತ್ತಿಕ್ಕಬೇಕು ಎಂದು ಸೂಚಿಸಿದ್ದರು ಎಂದು ವರದಿಗಳು ತಿಳಿಸಿವೆ. ಸೋಮವಾರ ಹಸೀನಾ ಅವರು ಸೇನೆಯ ಅಧಿಕಾರಿಗಳ ಜತೆ ನಿರಂತರ ಸಭೆ ನಡೆಸಿದ್ದರು. ರಾಜೀನಾಮೆ ನೀಡಿ, ಅಧಿಕಾರವನ್ನು ಸೇನೆಗೆ ಹಸ್ತಾಂತರಿಸಲು ನಿರಾಕರಿಸಿದ್ದರು ಎಂದು ಬಾಂಗ್ಲಾ ಪತ್ರಿಕೆ “ಪ್ರೋಟಮ್‌ ಆಲೋ’ ಮೂಲಗಳನ್ನುಲ್ಲೇಖೀಸಿ ವರದಿ ಮಾಡಿದೆ. ಹಸೀನಾ ಅವರು ರಾಜೀನಾಮೆ ನೀಡಲು ಅವರ ಪುತ್ರ ಶಜೀಬ್‌ ಸಾಕಷ್ಟು ಬಾರಿ ಮನವೊಲಿಸಲು ಪ್ರಯತ್ನಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮನೆಗೆ ನುಗ್ಗ ಲಿದ್ದಾರೆ ಎಂದು ಗುಪ್ತಚರ ಮಾಹಿತಿ ಸಿಕ್ಕ ಬೆನ್ನಲ್ಲೇ ಹಸೀನಾ ಅವರು ದೇಶ ತೊರೆಯುವ ನಿರ್ಧಾರ ಕೈಗೊಂಡರು ಎಂದು ವರದಿಗಳು ತಿಳಿಸಿವೆ.

ಟಾಪ್ ನ್ಯೂಸ್

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pannu Singh

Khalistani; ಭಾರತದ ವಿರುದ್ಧ ಅಮೆರಿಕ ಕೋರ್ಟ್‌ಗೆ ಪನ್ನು ದೂರು

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Explod

Explode in Lebanon: ಪೇಜರ್‌ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು

ಹೆಜ್ಬುಲ್ಲಾ ಬಳಸಿದ್ದ ಸಾವಿವಾರು ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

Israel: ಹೆಜ್ಬುಲ್ಲಾ ಬಳಸಿದ್ದ ಪೇಜರ್ಸ್‌ ಒಳಗೆ ಸ್ಫೋಟಕ ಅಳವಡಿಸಿದ್ದ ಇಸ್ರೇಲ್‌ ನ ಮೊಸ್ಸಾದ್!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.