Gruha Jyothi: ಬಾಡಿಗೆದಾರರಿಗೆ ಶುಭ ಸುದ್ದಿ- ಗೃಹಜ್ಯೋತಿಗೆ ಡಿ-ಲಿಂಕ್
ಹಿಂದಿನ ಸರಾಸರಿಯಷ್ಟೇ ವಿದ್ಯುತ್ ಬಳಸಲು ಗ್ರಾಹಕರಿಗೆ ಅನುಕೂಲ ಆಗಲಿದೆ.
Team Udayavani, Aug 7, 2024, 2:53 PM IST
ಉದಯವಾಣಿ ಸಮಾಚಾರ
ಬೆಂಗಳೂರು: ಬಾಡಿಗೆದಾರರಿಗೊಂದು ಸಿಹಿ ಸುದ್ದಿ. ತನ್ನ ಮಹತ್ವಾಕಾಂಕ್ಷಿ “ಗೃಹಜ್ಯೋತಿ’ ಯೋಜನೆಗೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಡಿ-ಲಿಂಕ್‌ಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅದರಂತೆ ಬಾಡಿಗೆದಾರರು ಮನೆ ಬದಲಾಯಿಸಿದಾಗೆಲ್ಲ ಹಳೇ ಮನೆಯ ಆರ್.ಆರ್. ನಂಬರ್‌ನೊಂದಿಗೆ ಆಧಾರ್ ಸಂಖ್ಯೆ ಕಡಿತಗೊಳಿಸಿ, ಹೊಸದಾಗಿ ಲಿಂಕ್
ಮಾಡಿಕೊಳ್ಳಬಹುದು. ಆಗ, ಹೊಸ ಬಾಡಿಗೆ ಮನೆಗೆ ಹೋದ ನಂತರವೂ ತಮ್ಮ ಈ ಹಿಂದಿನ ಸರಾಸರಿಯಷ್ಟೇ ವಿದ್ಯುತ್ ಬಳಸಲು ಗ್ರಾಹಕರಿಗೆ ಅನುಕೂಲ ಆಗಲಿದೆ.
ಪ್ರಸ್ತುತ ಡಿ-ಲಿಂಕ್‌ಗೆ ಅವಕಾಶ ಇರಲಿಲ್ಲ. ಹಾಗಾಗಿ, ಯಾವುದೇ ಬಾಡಿಗೆದಾರರು ಮನೆ ಬದಲಾಯಿಸಿದರೆ ಅಲ್ಲಿದ್ದ ಈ ಹಿಂದಿನ
ಸರಾಸರಿ ವಿದ್ಯುತ್ ಬಳಕೆಗೆ “ಅಡೆjಸ್ಟ್’ ಆಗಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ಕೆಲವರು ತಮ್ಮ ಕುಟುಂಬದ ಬೇರೆ ಸದಸ್ಯರ
ಆಧಾರ್ ಲಿಂಕ್ ಮಾಡುತ್ತಿದ್ದಾರೆ. ಈ ಕಿರಿಕಿರಿ ತಪ್ಪಿಸಲು ಇಂಧನ ಇಲಾಖೆ ಈಗ ಡಿ-ಲಿಂಕ್‌ಗೆ ಅವಕಾಶ ಮಾಡಿಕೊಟ್ಟಿದೆ.
ಡಿ-ಲಿಂಕ್ ಮಾಡುವುದು ಹೇಗೆ?:
ಡಿ-ಲಿಂಕ್ ಅನ್ನು ಈಗಾಗಲೇ ಗೃಹಜ್ಯೋತಿ ಸೌಲಭ್ಯ ಪಡೆಯಲು ವಿವಿಧ ವಿದ್ಯುತ್ ಸರಬರಾಜು ಕಂಪನಿ (ಎಸ್ಕಾಂ)ಗಳ ಉಪಕೇಂ
ದ್ರಗಳಲ್ಲಿ “ಆಧಾರ್’ ಲಿಂಕ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲಿಯೇ ಈ ಡಿ-ಲಿಂಕ್ ಕೂಡ ಮಾಡಬಹುದು. ಅಥವಾ
ನೇರವಾಗಿ https://sevasindhu.karnataka.gov.in/ GruhaJyothi‰Delink/GetAadhaarData.aspx ಲಿಂಕ್ ಮೂಲಕವೂ ಗ್ರಾಹಕರು ನೋಂದಾಯಿಸಿಕೊಳ್ಳಬಹುದು. ಗೃಹಜ್ಯೋತಿ ಪೋರ್ಟಲ್ ಓಪನ್ ಆಗದೆ ಇದ್ದರೆ, Cache Memory Clear ಮಾಡಿ
ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದು. ಹೊಸ ಲಿಂಕ್ ಪಡೆಯುವ ಮುನ್ನ ಡಿ-ಲಿಂಕ್
ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಗೃಹ ಜ್ಯೋತಿ ಬಳಕೆ ವಿವರ
*1.67 ಕೋಟಿ 2024ರ ಜೂನ್ ವರೆಗೆ ಗೃಹಜ್ಯೋತಿ ಅಡಿ ನೋಂದಣಿಯಾದವರು
*1.56 ಕೋಟಿ ಒಟ್ಟಾರೆ ಯೋಜನೆ ಫಲಾನುಭವಿಗಳು
*8,239 ಕೋಟಿ ರೂ. 2023ರ ಆಗಸ್ಟ್‌ನಿಂದ 2024ರ ಜೂನ್ ವರೆಗೆ ಬಿಡುಗಡೆ ಮಾಡಿರುವ ಸಬ್ಸಿಡಿ ಮೊತ್ತ
ರಾಜ್ಯದ 1.56 ಕೋಟಿ ಜನರು ಗೃಹಜ್ಯೋತಿ ಯೋಜನೆ ಲಾಭ ಪಡೆದಿದ್ದಾರೆ. ವಿಶೇಷವಾಗಿ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಬಿಲ್‌ನ ಹಣವನ್ನು ಮಕ್ಕಳ ಟ್ಯೂಷನ್ ಫೀ, ಹಿರಿಯರ ಔಷಧೋಪಚಾರಕ್ಕೆ ಬಳಸಿರುವುದಾಗಿ ಹೇಳಿಕೊಂಡಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂಬ ಸಾರ್ಥಕ ಭಾವ ನಮ್ಮಲ್ಲಿದೆ. ಜತೆಗೆ, ಡಿ-ಲಿಂಕ್ ಸೌಲಭ್ಯ ಬೇಕೆಂದು ಜನ ಕೋರಿದ್ದರು. ಈಗ ಈ ಸೌಲಭ್ಯವನ್ನು ಒದಗಿಸಲಾಗಿದೆ.
●ಕೆ.ಜೆ. ಜಾರ್ಜ್, ಇಂಧನ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.