![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 7, 2024, 4:31 PM IST
ಮಹಾರಾಷ್ಟ್ರ: ಜನನಿಬಿಢ ರಸ್ತೆಯಲ್ಲಿ ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ ಮೂರು ವರ್ಷದ ಮಗುವಿನ ಮೈಮೇಲೆ ಐದನೇ ಮಹಡಿಯಿಂದ ನಾಯಿಯೊಂದು ಬಿದ್ದ ಪರಿಣಾಮ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ಮುಂಬೈನ ಥಾಣೆಯ ಮುಂಬ್ರಾದಲ್ಲಿ ಮಂಗಳವಾರ (ಆಗಸ್ಟ್ 06) ನಡೆದಿದೆ.
ನಿನ್ನೆ ಮಧ್ಯಾಹ್ನ ಅಮೃತ್ ನಗರದಲ್ಲಿ ಈ ದುರಂತ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗೋಲ್ಡನ್ ರಿಟ್ರೈವರ್ (Golden Retriever) ತಳಿಯ ನಾಯಿ ತಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 3 ವರ್ಷದ ಬಾಲಕಿ ಮೈಮೇಲೆ ಬಿದ್ದಿರುವ ದೃಶ್ಯ ಸೆರೆಯಾಗಿದೆ. ನಾಯಿ ಬೊಬ್ಬೆ ಹೊಡೆಯುತ್ತಾ ಕುಂಟುತ್ತಾ ಸಾಗುತ್ತಿರುವುದು ವಿಡಿಯೋದಲ್ಲಿದೆ.
ವರದಿಯ ಪ್ರಕಾರ, ನಾಯಿ ಐದನೇ ಮಹಡಿಯಿಂದ ಬಿದ್ದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿತ್ತು. ಕೂಡಲೇ ಸುತ್ತಮುತ್ತಲಿನವರು ತಾಯಿಯ ಸಹಾಯಕ್ಕೆ ಆಗಮಿಸಿದ್ದು, ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಗು ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದ್ದರು.
MUMBRA | A tragic incident occurred in Mumbra, where a dog fell on a three-year-old child, resulting in her death. The child was walking with her mother when the dog, which was on the fifth floor of a building, jumped off and landed on the child. The incident took place in the… pic.twitter.com/lBQHjLnXDz
— ℝ𝕒𝕛 𝕄𝕒𝕛𝕚 (@Rajmajiofficial) August 7, 2024
ಇದೊಂದು ಆಕಸ್ಮಿಕ ಸಾವು ಎಂದು ಮುಂಬ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಮೃತ ಮಗುವಿನ ತಾಯಿಯ ಹೇಳಿಕೆ ಪಡೆಯಬೇಕಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:Duniya Vijay: ಓಟಿಟಿಗಳು ಕನ್ನಡಿಗರು, ಕನ್ನಡ ಸಿನಿಮಾಗಳಿಗೆ ಅವಮಾನ ಮಾಡುತ್ತಿದೆ – ವಿಜಯ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.