Bus Ticket ವಿಚಾರದಲ್ಲಿ ತಗಾದೆ: ಬಸ್ ನಿರ್ವಾಹಕನಿಗೆ ಪರಚಿ ಹಲ್ಲೆ ನಡೆಸಿದ ಪ್ರಯಾಣಿಕ
Team Udayavani, Aug 8, 2024, 12:40 AM IST
ಕಡಬ: ಟಿಕೆಟ್ ವಿಚಾರದಲ್ಲಿ ತಗಾದೆ ತೆಗೆದ ಪ್ರಯಾಣಿಕನೋರ್ವ ಕರ್ತವ್ಯನಿರತ ಬಸ್ ನಿರ್ವಾಹಕನಿಗೆ ಹೊಡೆದು ಬಸ್ಸಿನಲ್ಲಿ ರಂಪಾಟ ನಡೆಸಿದ ಘಟನೆ ಮಂಗಳವಾರ ಸಂಜೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಸಂಭವಿಸಿದೆ.
ಶಾಲಾ ಮಕ್ಕಳು ಸೇರಿದಂತೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ ಉಪ್ಪಿನಂಗಡಿಯಿಂದ ಹೊರಟು ಕೆಮ್ಮಾರ ತಲುಪುತ್ತಿದ್ದಂತೆಯೇ ಪ್ರಯಾ ಣಿಕನೋರ್ವ ಚಿಲ್ಲರೆ ವಿಚಾರದಲ್ಲಿ ನಿರ್ವಾಹಕನಲ್ಲಿ ತಗಾದೆ ತೆಗೆದಿದ್ದಾನೆ.
ಪ್ರಯಾಣಿಕ ರಂಪಾಟ ನಡೆಸಿ ಬಸ್ ಕಿಟಕಿಯನ್ನು ಹಾನಿಗೈದಿದ್ದಲ್ಲದೆ ನಿರ್ವಾಹಕ ರಫೀಕ್ ಅವರ ಕುತ್ತಿಗೆ ಭಾಗ ಹಾಗೂ ಕೈಗೆ ಪರಚಿ ಗಾಯಗೊಳಿಸಿದ್ದಾನೆ. ಆ ಬಗ್ಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಸ್ ಸಹಿತ ರಂಪಾಟ ನಡೆಸಿದ ಪ್ರಯಾಣಿಕನನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಮದ್ಯದ ನಶೆಯಲ್ಲಿದ್ದ
ರಂಪಾಟ ಮಾಡಿದ ಪ್ರಯಾಣಿಕ ಮದ್ಯದ ನಶೆಯಲ್ಲಿದ್ದ ಎನ್ನಲಾಗಿದ್ದು, ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆಗೊಳಿಸಿದ್ದಾರೆ. ಪಾನಮತ್ತ ಪ್ರಯಾಣಿಕನ ಅವಾಂತರದಿಂದಾಗಿ ಸಂಜೆಯ ವೇಳೆ ಸಕಾಲಕ್ಕೆ ಮನೆ ತಲುಪುವ ಆತುರದಲ್ಲಿದ್ದ ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ಶಾಲಾ ಮಕ್ಕಳಿಗೆ ತೊಂದರೆ ಉಂಟಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.