Hockey: ಕೊನೆಯಲ್ಲೊಂದೇ ಕಂಚಿನ ಕನಸು; ಇಂದು ಸ್ಪೇನ್ ವಿರುದ್ಧ ಭಾರತ ಸ್ಪರ್ಧೆ
Team Udayavani, Aug 8, 2024, 7:15 AM IST
ಪ್ಯಾರಿಸ್: ಕಳೆದ 44 ವರ್ಷಗಳಿಂದ ಒಲಿಂಪಿಕ್ಸ್ ಫೈನಲ್ ಕಾಣುವ ಹಾಗೂ ಚಿನ್ನದ ಪದಕವೊಂದನ್ನು ಗೆಲ್ಲುವ ಭಾರತೀಯ ಹಾಕಿಯ ಮಹಾಕನಸೊಂದು ಮಂಗಳವಾರ ರಾತ್ರಿ ಜರ್ಮನಿಯ ಕೈಯಲ್ಲಿ ಛಿದ್ರಗೊಂಡಿದೆ.
ಕೊನೆಯಲ್ಲಿ ಉಳಿ ದಿರುವುದು ಕಂಚಿನ ನಿರೀಕ್ಷೆ ಮಾತ್ರ. ಇದಕ್ಕಾಗಿ ಹರ್ಮನ್‌ಪ್ರೀತ್ ಪಡೆ ಗುರುವಾರ ಸ್ಪೇನ್ ವಿರುದ್ಧ ಸೆಣಸಲಿದೆ.
1980ರ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ ಭಾರತ ತನ್ನ 8ನೇ ಹಾಗೂ ಕೊನೆಯ ಚಿನ್ನದ ಪದಕವನ್ನು ಜಯಿಸಿತ್ತು. ಅಲ್ಲಿಂದ ಮೊದಲ್ಗೊಂಡ ಪದಕ ಬರಗಾಲ ನೀಗಿದ್ದು ಕಳೆದ ಟೋಕಿಯೊ ಗೇಮ್ಸ್‌ನಲ್ಲಿ. ಅಲ್ಲಿ ಜರ್ಮನಿಯನ್ನೇ 5-4 ಗೋಲುಗಳಿಂದ ಮಣಿಸಿದ ಭಾರತ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು. ಅದೇ ಜರ್ಮನಿ ಪ್ಯಾರಿಸ್ ಸೆಮಿಫೈನಲ್‌ನಲ್ಲಿ ಭಾರತವನ್ನು 3-2ರಿಂದ ಮಣಿಸಿ ಸಂಭ್ರಮಿಸಿತು!
ಈ ಸೋಲಿನಿಂದ ಬೆಳ್ಳಿ ಪದಕ ಕೂಡ ಭಾರತದ ಕೈಯಿಂದ ಜಾರಿದೆ. ಕೊನೆಯ ಸಲ 1960ರ ಒಲಿಂಪಿಕ್ಸ್‌ನಲ್ಲಿ ಭಾರತ ರಜತ ಪದಕ ಜಯಿಸಿತ್ತು.
ಸ್ಪೇನ್ ವಿರುದ್ಧ ಉತ್ತಮ ದಾಖಲೆ
ದಿನದ ಮೊದಲ ಸೆಮಿಫೈನಲ್‌ನಲ್ಲಿ ಸ್ಪೇನ್ ತಂಡ ನೆದರ್ಲೆಂಡ್ಸ್ ಕೈಯಲ್ಲಿ 0-4 ಗೋಲು ಗಳ ಆಘಾತಕಾರಿ ಸೋಲಿಗೆ ತುತ್ತಾ ಗಿತ್ತು. ಹೀಗಾಗಿ ಭಾರತಕ್ಕಿಂತ ಹೆಚ್ಚು ಒತ್ತಡ ಸ್ಪೇನ್ ಮೇಲಿದೆ ಎನ್ನಲಡ್ಡಿಯಿಲ್ಲ.
ಸ್ಪೇನ್ ವಿರುದ್ಧ ಭಾರತದ ದಾಖಲೆ ಕೂಡ ಉತ್ತಮವಾಗಿದೆ. ಒಲಿಂಪಿಕ್ಸ್ ನಲ್ಲಿ ಇತ್ತಂಡಗಳು 10 ಸಲ ಮುಖಾಮುಖೀ ಯಾಗಿವೆ. ಭಾರತ ಏಳನ್ನು ಗೆದ್ದರೆ, ಸ್ಪೇನ್‌ಗೆ ಒಲಿದದ್ದು ಒಂದು ಜಯ ಮಾತ್ರ. ಉಳಿ ದೆರಡು ಪಂದ್ಯ ಗಳು ಡ್ರಾಗೊಂಡಿವೆ.
ಸ್ಪೇನ್ ವಿರುದ್ಧ ಭಾರತದ “ಮೋಸ್ಟ್ ಫೇಮಸ್ ವಿನ್’ ದಾಖಲಾದದ್ದು 1980ರ ಫೈನಲ್‌ನಲ್ಲಿ. ಇಲ್ಲಿ 4-3 ಗೋಲುಗಳಿಂದ ಗೆದ್ದ ವಾಸುದೇವನ್ ಭಾಸ್ಕರನ್ ಪಡೆ ಭಾರತಕ್ಕೆ ಕೊನೆಯ ಸಲ ಒಲಿಂಪಿಕ್ಸ್ ಚಿನ್ನವನ್ನು ಕೊಡಿಸಿತ್ತು. ಇದನ್ನು ಪುನರಾವರ್ತಿಸುವ ಹಾದಿಯಲ್ಲಿದ್ದ ಹರ್ಮನ್‌ಪ್ರೀತ್ ಪಡೆಗೆ ಜರ್ಮನಿ ಜಬರ್ದಸ್ತ್ ಆಘಾತವಿಕ್ಕಿದೆ.
ಜರ್ಮನಿ ವಿರುದ್ಧ ಭಾರತದ ಆಟ ಉತ್ತಮ ಮಟ್ಟದಲ್ಲೇ ಇತ್ತು. ಆರಂಭ ದಿಂದಲೇ ಎದುರಾಳಿ ರಕ್ಷಣಾ ವ್ಯೂಹವನ್ನು ಛೇದಿಸಿ ಒತ್ತಡ ಹೇರಿತು. ಆದರೆ ನಿರ್ಣಾ ಯಕ ಹಂತ ದಲ್ಲಿ ಮಾಡಿದ ಕೆಲವು ಎಡ ವಟ್ಟು ಗಳು ಮುಳು ವಾದವು. ಮುಖ್ಯ ವಾಗಿ ಡಿಫೆನ್ಸ್ ವಿಭಾಗ ದಲ್ಲಿ ಇದು ಕಂಡುಬಂತು. ಇಲ್ಲಿ ಜರ್ಮನ್‌ಪ್ರೀತ್ ಸಿಂಗ್ ವಿಫಲರಾದರು. ಹಾಗೆಯೇ ಭಾರತ ಅನೇಕ ಸ್ಕೋರಿಂಗ್ ಅವಕಾಶಗಳನ್ನೂ ಕೈಚೆಲ್ಲಿತು. 10 ಪೆನಾಲ್ಟಿ ಕಾರ್ನರ್‌ಗಳಲ್ಲಿ ಎಂಟನ್ನು ವ್ಯರ್ಥಗೊಳಿತು.
ಅಮಿತ್ ರೋಹಿದಾಸ್ ಅವರ ಪುನರಾಗ ಮನ ಭಾರತಕ್ಕೆ ಸ್ಫೂರ್ತಿ ತುಂಬು ವುದರಲ್ಲಿ ಅನುಮಾನವಿಲ್ಲ. ಟೋಕಿಯೊದಲ್ಲಿ ಗೆದ್ದ ಕಂಚನ್ನು ಉಳಿಸಿ ಕೊಳ್ಳಲಿ ಎಂಬುದು ಕ್ರೀಡಾಭಿಮಾನಿಗಳ ಹಾರೈಕೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.