Paris ನಿಮ್ಮನ್ನೇ ನಂಬಿದ್ದೇವೆ ನೀರಜ್‌! ಟೋಕಿಯೊ ಗೋಲ್ಡನ್‌ ಹೀರೋ ನೀರಜ್‌ ಮೇಲೆ ಭಾರೀ ಭರವಸೆ

ಇಂದು ಮಧ್ಯರಾತ್ರಿ ಜಾವೆಲಿನ್‌ ಫೈನಲ್‌

Team Udayavani, Aug 8, 2024, 7:25 AM IST

Paris ನಿಮ್ಮನ್ನೇ ನಂಬಿದ್ದೇವೆ ನೀರಜ್‌! ಟೋಕಿಯೊ ಗೋಲ್ಡನ್‌ ಹೀರೋ ನೀರಜ್‌ ಮೇಲೆ ಭಾರೀ ಭರವಸೆ

ಪ್ಯಾರಿಸ್: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದರ ಮೇಲೊಂದರಂತೆ ಆಘಾತ, ಹಿನ್ನಡೆ ಆಗುತ್ತಲೇ ಇದೆ. ವಿನೇಶ್‌ ಫೋಗಾಟ್‌ ಅನರ್ಹತೆ, ಹಾಕಿ ವೈಫ‌ಲ್ಯ, ಪದಕದ ಸಮೀಪ ಬಂದು ಎಡವಿದ ನಾಲ್ಕಾರು ನಿದರ್ಶನಗಳು, 3 ಕಂಚಿನಾಚೆ ದಾಟದ ಪದಕಗಳ ಸಂಖ್ಯೆ, ಪದಕ ಪಟ್ಟಿಯಲ್ಲಿ 60ರ ಆಚೆಯ ಸ್ಥಾನ… ಇಂಥ ಸಂಕಟಕರ ಸನ್ನಿವೇಶದಲ್ಲಿ ನೀರಜ್‌ ಚೋಪ್ರಾ ಒಬ್ಬರೇ ದೇಶದ ಆಶಾಕಿರಣ ಹಾಗೂ ದೊಡ್ಡ ಪದಕದ ಭರವಸೆ ಆಗಿ ಉಳಿದಿದ್ದಾರೆ.

ಇವರನ್ನೊಳಗೊಂಡ ಜಾವೆಲಿನ್‌ ಫೈನಲ್‌ ಗುರುವಾರ ನಡುರಾತ್ರಿ ನಡೆಯಲಿದೆ. “ನಿಮ್ಮನ್ನೇ ನಂಬಿದ್ದೇವೆ ನೀರಜ್‌’ ಎಂಬುದು ಭಾರತದ ಕ್ರೀಡಾಪ್ರೇಮಿಗಳ ಪ್ರಾರ್ಥನೆ.

ನೀರಜ್‌ ಚೋಪ್ರಾ ಟೋಕಿಯೊದಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿ ಬುಧವಾರಕ್ಕೆ (ಆ. 7) ಭರ್ತಿ 3 ವರ್ಷ ತುಂಬಿತು. ಪ್ಯಾರಿಸ್‌ನಲ್ಲಿ ಆ. 8ರಂದು ಚಿನ್ನ ಕ್ಕಾಗಿ ಸ್ಪರ್ಧಿಸಲಿದ್ದಾರೆ. ಅವರ ಬಂಗಾರದ ನಂಟು ಮುಂದು ವರಿ ಯುವುದನ್ನು ಕಾಣಲು ದೇಶವೇ ತುದಿಗಾಲಲ್ಲಿ ನಿಂತಿದೆ.

ಮಂಗಳವಾರದ ಅರ್ಹತಾ ಸುತ್ತಿನಲ್ಲಿ ನೀರಜ್‌ ಚೋಪ್ರಾ ಸಾಧನೆ ಕಂಡಾಗ ಚಿನ್ನದ ಪದಕದ ಭರವಸೆ ಮೂಡಿದೆ. ಚಿನ್ನವಲ್ಲದೇ ಹೋದರೂ ಮೂರರಲ್ಲೊಂದು ಪದಕ ಗೆದ್ದೇ ಗೆಲ್ಲುತ್ತಾರೆಂಬ ನಂಬಿಕೆ ಎಲ್ಲರಲ್ಲೂ ಮನೆಮಾಡಿದೆ. ಆದರೆ ಇದು ಬಂಗಾರವೇ ಆಗಬೇಕೆಂಬುದು ದೇಶವಾಸಿಗಳ ಹಾರೈಕೆ.

ಟೋಕಿಯೊಗಿಂತ ಕಠಿನ
ಟೋಕಿಯೊ ಒಲಿಂಪಿಕ್ಸ್‌ಗೆ ಹೋಲಿಸಿದರೆ ಈ ಬಾರಿಯ ಜಾವೆಲಿನ್‌ ಸ್ಪರ್ಧೆ ಹೆಚ್ಚು ಕಠಿನ. ಇಲ್ಲಿ 9 ಮಂದಿ 84 ಮೀ. ಗಡಿ ದಾಟಿ ನೇರವಾಗಿ ಫೈನಲ್‌ಗೆ ಆಯ್ಕೆಯಾಗಿರುವುದೇ ಇದಕ್ಕೆ ಕಾರಣ. ಇಲ್ಲಿನ 9 ಎಸೆತಗಾರರಲ್ಲಿ ಐವರು ಮೊದಲ ಪ್ರಯತ್ನದಲ್ಲೇ ಫೈನಲ್‌ ಅರ್ಹತೆ ಸಂಪಾದಿಸಿದ್ದಾರೆ. ನೀರಜ್‌ ಕೂಡ ಇವರಲ್ಲೊಬ್ಬರು. ಟೋಕಿಯೊದಲ್ಲಿ ನೇರ ಫೈನಲ್‌ ಅರ್ಹತೆ ಸಂಪಾದಿಸಿದವರ ಸಂಖ್ಯೆ 6ಕ್ಕೆ ಸೀಮಿತಗೊಂಡಿತ್ತು.

ಕಳೆದ 8 ವರ್ಷಗಳಿಂದಲೂ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಅಮೋಘ ಸಾಧನೆ ದಾಖಲಿಸುತ್ತಲೇ ಬಂದಿರುವ ನೀರಜ್‌ ಚೋಪ್ರಾಗೆ ಈ ಕಠಿನ ಸವಾಲಿನ ಅರಿವಿಲ್ಲದೇ ಇಲ್ಲ. “ಫೈನಲ್‌ನಲ್ಲಿ ಎಲ್ಲರೂ ವಿಭಿನ್ನ ಸನ್ನಿವೇಶ ಎದುರಿಸುವ ಜತೆಗೆ ವಿಭಿನ್ನ ಮನಸ್ಥಿತಿ ಹೊಂದಿರುತ್ತಾರೆ. ಇಲ್ಲಿ ಉತ್ತಮ ಪೈಪೋಟಿ ಕಂಡುಬರಲಿದೆ. ನೇರ ಅರ್ಹತೆ ಸಂಪಾದಿಸಿದವರ ತಯಾರಿ ಅತ್ಯುತ್ತಮವಾಗಿರುತ್ತದೆ’ ಎಂಬುದಾಗಿ ನೀರಜ್‌ ಅರ್ಹತಾ ಸುತ್ತಿನ ಬಳಿಕ ಹೇಳಿದ್ದರು.

ನೀರಜ್‌ ಚೋಪ್ರಾ ಚಿನ್ನ ಉಳಿಸಿಕೊಂಡರೆ ಒಲಿಂಪಿಕ್ಸ್‌ನಲ್ಲಿ ನೂತನ ಇತಿಹಾಸ ಬರೆದ ಭಾರತೀಯ ಕ್ರೀಡಾಪಟುವಾಗಿ ಮೂಡಿಬರಲಿದ್ದಾರೆ. ಎರಡು ಚಿನ್ನ ಗೆದ್ದ ದೇಶದ ಏಕೈಕ ಆ್ಯತ್ಲೀಟ್‌ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ. ಈವರೆಗೆ ಪಿ.ವಿ. ಸಿಂಧು (1 ಬೆಳ್ಳಿ, 1 ಕಂಚು), ಕುಸ್ತಿಪಟು ಸುಶೀಲ್‌ ಕುಮಾರ್‌ (1 ಬೆಳ್ಳಿ, 1 ಕಂಚು) ಮತ್ತು ಮನು ಭಾಕರ್‌ (2 ಕಂಚು) ಮಾತ್ರ ಅವಳಿ ಪದಕ ಜಯಿಸಿದ್ದಾರೆ.

ಅರ್ಹತಾ ಸುತ್ತಿನ ಹೀರೋ
ಅರ್ಹತಾ ಸುತ್ತಿನಲ್ಲಿ ನೀರಜ್‌ ಚೋಪ್ರಾ ಅವರದು ಅಮೋಘ ಪರಾಕ್ರಮ. ಒಂದೇ ಎಸೆತಕ್ಕೆ 89.34 ಮೀ. ಸಾಧನೆಗೈದು ಮೊದಲ ಸ್ಥಾನದೊಂದಿಗೆ “ಮಿಲಿಯನ್ಸ್‌ ಹೋಪ್ಸ್‌’ ಮೂಡಿಸಿದ ಹೆಗ್ಗಳಿಕೆ ಇವರದು. ಇದು ಅವರ ಜಾವೆಲಿನ್‌ ಬಾಳ್ವೆಯ 2ನೇ ಶ್ರೇಷ್ಠ ನಿರ್ವಹಣೆಯಷ್ಟೇ ಅಲ್ಲ, ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲೇ 2ನೇ ಅತ್ಯುತ್ತಮ ಸಾಧನೆಯಾಗಿದೆ. 2000ದ ಸಿಡ್ನಿ ಒಲಿಂಪಿಕ್ಸ್‌ ಅರ್ಹತಾ ಸುತ್ತಿನಲ್ಲಿ ಜಾನ್‌ ಝೆಲೆಜ್ನಿ 89.39 ಮೀ. ಎಸೆದದ್ದು ದಾಖಲೆ. ಫೈನಲ್‌ನಲ್ಲಿ ಚೋಪ್ರಾ 90 ಮೀ. ಗಡಿ ತಲುಪಿಯಾರೇ ಎಂಬುದೊಂದು ಕುತೂಹಲ.

ಗ್ರೆನೆಡಾದ 2 ಬಾರಿಯ ವಿಶ್ವ ಚಾಂಪಿಯನ್‌ ಆ್ಯಂಡರ್ಸನ್‌ ಪೀಟರ್ (ಗರಿಷ್ಠ: 93.07 ಮೀ.), ಜರ್ಮನಿಯ ಜೂಲಿಯನ್‌ ವೆಬರ್‌, ಪಾಕಿಸ್ಥಾನದ ಅರ್ಷದ್‌ ನದೀಮ್‌, ಜೆಕ್‌ ಗಣರಾಜ್ಯದ ಜಾಕುಬ್‌ ವಾದೆÉಶ್‌ ಅವರೆಲ್ಲ ಫೈನಲ್‌ನಲ್ಲಿ ಜಬರ್ದಸ್ತ್ ಪ್ರದರ್ಶನ ನೀಡುವ ಎಲ್ಲ ಸಾಧ್ಯತೆ ಇದೆ.

ಟಾಪ್ ನ್ಯೂಸ್

Kadaba: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

Kadaba: ಬಿಳಿನೆಲೆ ಸಂದೀಪ್‌ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

US-Krishna

Mangaluru: ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಡೀನ್‌ ಡಾ.ಯು.ಎಸ್.ಕೃಷ್ಣ ನಾಯಕ್‌ ನಿಧನ

Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು

Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಡಿ. 4ರಂದು ಉಡುಪಿಯಲ್ಲಿ ಪ್ರತಿಭಟನೆ

Girish-Dhw

Dharawada: ಮನೆ ಎದುರೇ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೈದ ದುಷ್ಕರ್ಮಿಗಳು!

Thiruvannamali

Cyclone Fengal: ತಿರುವಣ್ಣಾಮಲೈಯಲ್ಲಿ ಭೂ ಕುಸಿತ: 7 ಮಂದಿ ಪೈಕಿ ನಾಲ್ವರ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC situation changed; India’s entry into the final became easier; here is the calculation

WTC ಸನ್ನಿವೇಶ ಬದಲು; ಭಾರತಕ್ಕೆ ಸುಲಭವಾಯ್ತು ಫೈನಲ್‌ ಪ್ರವೇಶ; ಇಲ್ಲಿದೆ ಲೆಕ್ಕಾಚಾರ

PV Sindhu to tie the knot with businessman who worked with IPL team

PV Sindhu: ಐಪಿಎಲ್‌ ತಂಡದ ಜತೆ ಕೆಲಸ ಮಾಡಿದ ಉದ್ಯಮಿಯ ಕೈಹಿಡಿಯಲಿದ್ದಾರೆ ಪಿ.ವಿ.ಸಿಂಧು

KKR-Cap

Indian Premier league: ನಾಯಕರ ಹುಡುಕಾಟದಲ್ಲಿ 5 ಐಪಿಎಲ್‌ ತಂಡ

Don-bradman-Cap

Cap Auction: ಬೇಕೇ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಕ್ಯಾಪ್‌?

Head-Bumrah

India-Australia Test: ಬುಮ್ರಾ ಶ್ರೇಷ್ಠ ಪೇಸ್‌ ಬೌಲರ್‌: ಟ್ರ್ಯಾವಿಸ್‌ ಹೆಡ್‌ ಪ್ರಶಂಸೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

Kadaba: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

Kadaba: ಬಿಳಿನೆಲೆ ಸಂದೀಪ್‌ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

US-Krishna

Mangaluru: ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಡೀನ್‌ ಡಾ.ಯು.ಎಸ್.ಕೃಷ್ಣ ನಾಯಕ್‌ ನಿಧನ

Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ

Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ

Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು

Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.