Paris ಟಿಟಿ: ವನಿತಾ ತಂಡದ ಆಟ ಅಂತ್ಯ; ಗೆದ್ದದ್ದು ಅರ್ಚನಾ ಕಾಮತ್‌ ಮಾತ್ರ

 ಜರ್ಮನಿ ವಿರುದ್ಧ 1-3 ಸೋಲು

Team Udayavani, Aug 8, 2024, 1:37 AM IST

Paris ಟಿಟಿ: ವನಿತಾ ತಂಡದ ಆಟ ಅಂತ್ಯ; ಗೆದ್ದದ್ದು ಅರ್ಚನಾ ಕಾಮತ್‌ ಮಾತ್ರ

ಪ್ಯಾರಿಸ್‌: ವನಿತಾ ಟೇಬಲ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತದ ಆಟ ಕ್ವಾರ್ಟರ್‌ ಫೈನಲ್‌ನಲ್ಲಿ ಕೊನೆಗೊಂಡಿದೆ. ಬುಧವಾರದ ಮುಖಾಮುಖೀಯಲ್ಲಿ ಜರ್ಮನಿ 3-1 ಅಂತರದಿಂದ ಭಾರತವನ್ನು ಪರಾಭವಗೊಳಿಸಿತು. ಭಾರತಕ್ಕೆ ಏಕೈಕ ಗೆಲುವು ತಂದಿತ್ತವರು ಕರಾವಳಿ ಮೂಲದ ಕನ್ನಡತಿ ಅರ್ಚನಾ ಕಾಮತ್‌ ಎಂಬುದಷ್ಟೇ ಸಮಾಧಾನದ ಸಂಗತಿ.

ಆರಂಭದ ಡಬಲ್ಸ್‌ನಲ್ಲಿ ಶ್ರೀಜಾ ಅಕುಲಾ-ಅರ್ಚನಾ ಕಾಮತ್‌ ಅವರನ್ನು ತುವಾನ್‌ ವಾನ್‌-ಕ್ಸಿಯೋನಾ ಶಾನ್‌ 11-5, 8-11, 12-10, 11-6ರಿಂದ ಪರಾಭವಗೊಳಿಸಿದರು. ಮೊದಲ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ್ತಿ ಮಣಿಕಾ ಬಾತ್ರಾ ಯಶಸ್ಸು ಕಾಣಲಿಲ್ಲ. ಅವರು ಆ್ಯನೆಟ್‌ ಕೌಫ್ಮ್ಯಾನ್‌ ವಿರುದ್ಧ 11-8, 5-11, 7-11, 5-11ರಿಂದ ಸೋಲನು ಭವಿಸಿದರು. ಜರ್ಮನಿ 2-0 ಮುನ್ನಡೆ ಸಾಧಿಸಿತು.

ಅರ್ಚನಾ ಕಾಮತ್‌ ಜಯ
ಭಾರತ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಹಂತದಲ್ಲಿ ಅರ್ಚನಾ ಕಾಮತ್‌ ಭರವಸೆ ಮೂಡಿಸಿದರು. ಅವರು ಕ್ಸಿಯೋನಾ ಶಾನ್‌ಗೆ 11-6, 11-7, 11-7ರಿಂದ ಆಘಾತವಿಕ್ಕಿ ಭಾರತದ ಖಾತೆ ತೆರೆದರು.

ಆದರೆ ಮುಂದಿನ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ ಎಡವಿದರು. ಆ್ಯನೆಟ್‌ ಕೌಫ್ಮ್ಯಾನ್‌ 11-6, 11-7, 11-7ರಿಂದ ಶ್ರೀಜಾಗೆ ಸೋಲುಣಿಸಿದರು. ಅಲ್ಲಿಗೆ ಭಾರತ ಒಲಿಂಪಿಕ್ಸ್‌ ಟಿಟಿ ಆಟ ಅಂತ್ಯಗೊಂಡಿತು.ಸೋಮವಾರ ವನಿತಾ ತಂಡ ತನಗಿಂತ ಉನ್ನತ ರ್‍ಯಾಂಕ್‌ನ ರೊಮೇನಿಯಾವನ್ನು 3-2ರಿಂದ ಹಿಮ್ಮೆಟ್ಟಿಸಿ ಕ್ವಾರ್ಟರ್‌ ಫೈನಲ್‌ಗೆ ಏರಿತ್ತು.

ಮಂಗಳೂರು ಮೂಲ
ಇಂದು ಜಯ ಸಾಧಿಸಿದ ಅರ್ಚನಾ ಕಾಮತ್‌ ಅವರು ಮಂಗಳೂರು ಕೊಂಚಾಡಿ ನಿವಾಸಿ ಡಾ| ಗಿರೀಶ್‌ ಕಾಮತ್‌ ಹಾಗೂ ಡಾ| ಅನುರಾಧ ಕಾಮತ್‌ ದಂಪತಿಯ ಪುತ್ರಿ.

ಮುಂದೆ ದೇಶಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಲೇ ಬೇಕು ಎನ್ನುವ ಛಲವಿದೆ. ಇದಕ್ಕಾಗಿ ಸತತ ಅಭ್ಯಾಸ ಮಾಡುತ್ತೇನೆ, ಇನ್ನಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ.
-ಅರ್ಚನಾ ಕಾಮತ್‌

ಚಿಕ್ಕ ವಯಸ್ಸಿಂದಲೂ ಒಲಿಂಪಿಕ್ಸ್‌ ಪದಕ ಗೆಲ್ಲುವ ಆಸೆ ಇತ್ತು. ಪಾಲ್ಗೊಳ್ಳುವ ಕನಸು ಈ ಬಾರಿ ನನಸಾಗಿದೆ. ಆ ಕ್ಷೇತ್ರದ ದಿಗ್ಗಜರೊಂದಿಗೆ ಆಟವಾಡಿದ ಅನುಭವ ಪಡೆದಿದ್ದಾಳೆ. ಮುಂದೆ ದೇಶಕ್ಕಾಗಿ ಪದಕ ಗೆಲ್ಲುವ ನಿರೀಕ್ಷೆ ಇದೆ, ಈಗಿನ ಸಾಧನೆ ಬಗ್ಗೆ ಹೆಮ್ಮೆಯಿದೆ.
-ಡಾ| ಗಿರೀಶ್‌ ಕಾಮತ್‌, ತಂದೆ

ಟಾಪ್ ನ್ಯೂಸ್

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

DKShi

Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

IPL Mega Auction: Huge demand for spinner Chahal; Miller to Lucknow

IPL Mega Auction: ಸ್ಪಿನ್ನರ್‌ ಚಾಹಲ್‌ ಗೆ ಭಾರೀ ಬೇಡಿಕೆ; ಮಿಲ್ಲರ್‌ ಲಕ್ನೋಗೆ

rishabh-pant

IPL Mega Auction: ಭರ್ಜರಿ ಬಿಡ್‌ ಗಳಿಸಿ ಅಯ್ಯರ್‌ ದಾಖಲೆ ಮುರಿದ ರಿಷಭ್‌ ಪಂತ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ‌ ಒಂದು ವರ್ಷದ ಮರಿ ಚಿರತೆ ರಕ್ಷಣೆ

kangana-2

Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

IPL 2025 Auction:‌ ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..

kl-rahul

IPL Auction: ‌ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್‌ ರಾಹುಲ್;‌ ಖರೀದಿ ಆರಂಭಿಸಿದ ಆರ್‌ ಸಿಬಿ

sanjay-raut

Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.