Fashion: ಬಟ್ಟೆಗೂ ಬಂತು ಬಗೆ ಬಗೆಯ ಆಭರಣ


Team Udayavani, Aug 8, 2024, 3:46 PM IST

6-fashion

ಭಾರತೀಯ ನಾರಿಯರ ಆಭರಣಗಳ ಮೇಲಿನ ವ್ಯಾಮೋಹ ಯಾವ ಮಟ್ಟಕ್ಕೆ ಮುಟ್ಟಿದೆ ಎಂದರೆ ಈಗ ತಾವು ಉಡುವ ಸೀರೆ, ತೊಟ್ಟುಕೊಳ್ಳುವ ಬ್ಲೌಸ್‌ಗಳ ಮೇಲೆ ಕೂಡ ಆಭರಣಗಳ ಡಿಸೈನ್‌ ಮಾಡಿಸಿಕೊಳ್ಳುತ್ತಿದ್ದಾರೆ. ತಾವು ಹಾಕಿಕೊಳ್ಳುವ ಬ್ಲೌಸಗಳ ಮೇಲೆ ಬುಗುಡಿಗಳು, ಚಾಂದ್‌ಲಿ, ವಂಕಿಗಳು, ಹಿಂಭಾಗದಲ್ಲಿ ಹಾರಗಳು, ಇಳಿಬಿಟ್ಟ ಲೋಲಾಕುಗಳು ಮುಂತಾದ ಆನೇಕ ಡಿಸೈನ್‌ಗಳನ್ನು ಮಾಡಿಸಿಕೊಂಡು ತೊಡುತ್ತಿದ್ದಾಳೆ.

ಈ ಡಿಸೈನ್‌ಗಳಲ್ಲಿ ಬಂಗಾರದ ಬಣ್ಣದ, ಬೇರೆ ಬೇರೆ ಬಣ್ಣಗಳ ದಾರದ ಎಂಬ್ರಾಯಿಡರಿ, ಫ‌ಳಫ‌ಳ ಹೊಳೆಯುವ ಹಳ್ಳುಗಳು, ಕುಂದನ್‌ ಅಲಂಕಾರಗಳು, ರೆಡಿಮೇಡ್‌ ದಾರಗಳಲ್ಲಿ ಮಾಡಿಸಿಕೊಳ್ಳುತ್ತಿದ್ದಾರೆ. ಬ್ಲೌಸ್‌ನ ಹಿಂಭಾಗದಲ್ಲಂತೂ ಕಿವಿಯ ಝುಮಕಿ- ಲೋಲಾಕುಗಳಂತೆ ಉದ್ದನೆಯ ಲೋಲಾಕುಗಳು ತೂಗು ಬಿದ್ದಿರುತ್ತವೆ.

ಹಾರಗಳನ್ನು ಕುತ್ತಿಗೆಗಷ್ಟೇ ಅಲ್ಲ ಬ್ಲೌಸಿನ ಹಿಂಭಾಗ- ಮುಂಭಾಗಕ್ಕೂ ಹಾಕಿಕೊಳ್ಳುತ್ತಿದ್ದಾರೆ. ಕೈಗೆ ವಂಕಿಗಳನ್ನೇ ಹಾಕಿಕೊಂಡಿದ್ದಾರೇನೋ ಎಂಬಂತೆ ಆಭರಣಗಳಲ್ಲಿ ವಂಕಿಗಳನ್ನು ಮಾಡಿ ಅವುಗಳನ್ನು ಬ್ಲೌಸಿಗೆ ಹೊಲಿಸುತ್ತಿದ್ದಾರೆ. ಪ್ರತಿಯೊಂದು ಜಾಕೆಟ್‌ಗೂ ಒಂದು ಹೊಸ ವಂಕಿ, ಹೊಸ ಹಾರ, ಹಿಂಭಾಗದಲ್ಲಿ ನೇತಾಡುವ ಹೊಸ ಲೋಲಾಕುಗಳು, ಬುಗುಡಿಗಳು, ಜಾಕೆಟ್‌ನ್‌ ಕತ್ತಿನ ಭಾಗಕ್ಕೆ ನೆಕ್‌ಲೆಸ್‌ ಹಾಕಿಕೊಂಡಂತಹ ಡಿಸೈನ್‌ಗಳು.

ಇನ್ನು ಸೀರೆಯ ಸೆರಗು ಅಂಚುಗಳಿಗೆ ಮಾಡುವ ಅಲಂಕಾರಕ್ಕಂತೂ ಮಿತಿಯೇ ಇಲ್ಲ. ಫ‌ಳಫ‌ಳನೆ ಹೊಳೆಯುವ ಹಳ್ಳುಗಳು , ಮಣಿ – ಮುತ್ತುಗಳು, ಕುಂದನ್‌ ಅಲಂಕಾರ, ಎಂಬ್ರಾಯಿಡರಿ ಹೀಗೆ ನಾನಾ ರೀತಿಯ ಡಿಸೈನ್‌ಗಳು ಹೊಲಿದಿರುತ್ತಾರೆ. ಸೆರಗಿನ ಕೊನೆಗೆ ಜೋತಾಡುವ ಮುತ್ತುಗಳು, ಮಣಿಗಳ ಅಲಂಕಾರ ಒಂದೇ ಎರಡೇ.

ಹೀಗೆ ಸೀರೆಗೆ ತಕ್ಕಂತೆ ಬ್ಲೌಸ್‌, ತಲೆ, ಕತ್ತು, ಸೊಂಟ, ಕೈ ಬಳೆಗಳಿಗೆ ಒಂದೇ ರೀತಿಯ ಡಿಸೈನ್‌ಗಳ ಆಭರಣಗಳನ್ನು ಧರಿಸುವುದು ಫ್ಯಾಷನ್‌ ಆಗಿದೆ. ಈ ಫ್ಯಾಷನ್‌ಗಳಲ್ಲಿ ಒಂದನ್ನು ನೋಡಿದಂತೆ ಇನ್ನೊಂದಿಲ್ಲ. ರಾತ್ರಿಯ ವೇಳೆಯಂತೂ ಇವು ದೀಪದ ಬೆಳಕಿನ ಕಾಂತಿಗೆ ಹೊಳೆಯುತ್ತಾ ಹೆಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಮೆರುಗನ್ನು ಕೊಡುತ್ತವೆ. ನಿಜಕ್ಕೂ ಈ ಆಭರಣಗಳು ಕಣ್ಣಿಗೆ ಒಂದು ರೀತಿಯ ಹಬ್ಬವೆಂದೇ ಹೇಳಬಹುದು.

-ಸೌಮ್ಯಾ ಕಾಗಲ್‌

ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.