![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 8, 2024, 7:02 PM IST
ಬೈಲಹೊಂಗಲ: ತಾಲೂಕಿನ ಸಾಣಿಕೊಪ್ಪ ಗ್ರಾಮ ಹದ್ದಿಯಲ್ಲಿ ಟ್ರಾಕ್ಟರ್ ಟ್ರೇಲರನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಗುರುವಾರ (ಆ.6) ಪೊಲೀಸರು ಯಶಸ್ವಿಯಾಗಿದ್ದಾರೆ.
ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಅಡಿವೆಪ್ಪ ನಾಗಪ್ಪ ಕಳಸನ್ನವರ (34) ಎಂಬಾತ ಬಂಧಿತ ಆರೋಪಿ. ಈತನ ಕಡೆಯಿಂದ ಅಂದಾಜು 5 ಲಕ್ಷ ರೂ.ಮೌಲ್ಯದ ಮೂರು ಟ್ರ್ಯಾಕ್ಟರ್ ಟ್ರೇಲರ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಎಚ್‍ಎಂಟಿ ಟ್ರ್ಯಾಕ್ಟರನ್ನು ವಶಪಡಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸಾಣಿಕೊಪ್ಪ ಗ್ರಾಮ ಹದ್ದಿಯಲ್ಲಿ ಟ್ರಾಕ್ಟರ್ ಟ್ರೇಲರ್‌ಗಳು ಕಳ್ಳತನವಾದ ಬಗ್ಗೆ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಬೆಳಗಾವಿ ಎಸ್.ಪಿ. ಡಾ.ಭೀಮಾಶಂಕರ ಗುಳೇದ, ಹೆಚ್ಚುವರಿ ಎಸ್ಪಿಗಳಾದ ಶ್ರುತಿ ಕೆ., ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದಲ್ಲಿ ಪಿಎಸ್‍ಐ ಎಫ್.ವೈ.ಮಲ್ಲೂರ, ಎಎಸ್‍ಐಗಳಾದ ಆರ್.ಎಸ್.ಬಾಗನವರ, ಎಸ್.ಕೆ.ಇಂಗಳಗಾಂವ, ಸಿಬ್ಬಂದಿಗಳಾದ ಶಂಕರ ಮೆಣಸಿನಕಾಯಿ, ಮಂಜುನಾಥ ಕುಂಬಾರ, ಚೇತನ ಬುದ್ನಿ, ಎಂ.ಎಸ್.ದೇಶನೂರ, ಜೈನಾಲಿ ಮಳಗಲಿ, ಮಲ್ಲಿಕಾರ್ಜುನ ಮಾವೀನಕಟ್ಟಿ, ಟೆಕ್ನಿಕಲ್ ವಿಭಾಗದ ವಿನೋದ ಠಕ್ಕನ್ನವರ ಅವರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಎಸ್.ಪಿ.ಡಾ.ಭೀಮಾಶಂಕರ ಗುಳೇದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.