Bengaluru: ಸಿನಿಮೀಯ ರೀತಿ ಕಳ್ಳನ ಸೆರೆ ಹಿಡಿದ ಕಾನ್‌ಸ್ಟೆಬಲ್!
ತುಮಕೂರು ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕಳ್ಳತನ ಮಾಡಿದ್ದ, 40ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆರೋಪಿ ಹೊಟ್ಟೆ ಮಂಜ
Team Udayavani, Aug 9, 2024, 12:39 AM IST
ಬೆಂಗಳೂರು: ವಂಚನೆ ಹಾಗೂ ಕಳ್ಳತನ ಸೇರಿ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ವಂಚಕನನ್ನು ಕಾನ್‌ಸ್ಟೆಬಲ್‌ವೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ನಗರದ ಸಂಚಾರ ದಟ್ಟಣೆ ನಡುವೆ ಬಂಧಿಸಿದ್ದಾರೆ.
ಹೆಸರುಘಟ್ಟ ನಿವಾಸಿ ಮಂಜೇಶ್ ಅಲಿಯಾಸ್ ಹೊಟ್ಟೆ ಮಂಜ ಬಂಧಿತ. ಕೊರಟಗೆರೆ ಠಾಣೆಯ ಕಾನ್‌ಸ್ಟೆಬಲ್ ದೊಡ್ಡಲಿಂಗಯ್ಯ ಬಂಧಿಸಿದವರು. ಬಂಧಿತನಿಂದ 10 ಸಾವಿರ ರೂ. ನಗದು ಹಾಗೂ 6.75 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಮಂಜೇಶ್ ವಿರುದ್ಧ ಕೊರಟಗೆರೆ ಠಾಣೆ ಸೇರಿ ದಕ್ಷಿಣ ಕರ್ನಾಟಕದ ಹತ್ತಾರು ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಕಳ್ಳತನ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಕೊರಟಗೆರೆಯ ಮನೆಯಲ್ಲಿ ಕಳ್ಳತನ ನಡೆದಿತ್ತು. ಸ್ಥಳದ ಸಿಸಿ ಕೆಮರಾ ಪರಿಶೀಲಿಸಿದಾಗ ಮಂಜೇಶ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಆತನ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತ ಮನೆಯಲ್ಲಿ ಇರುವುದಿಲ್ಲ. ಫೋನ್ ಬಳಸುವುದಿಲ್ಲ. ಹೊಟೇಲ್‌ಗಳಲ್ಲಿ ಊಟ ಮಾಡದೆ, ಪಾರ್ಸೆಲ್ ಕೊಂಡೊಯ್ಯುತ್ತಿದ್ದ. ಲಾಡ್ಜ್ಗಳಲ್ಲಿ ವಾಸವಾಗಿರುತ್ತಿದ್ದ ಎಂಬ ವಿಚಾರ ತಿಳಿದುಬಂದಿತ್ತು.
ಹೀಗಾಗಿ ಆತನ ಪತ್ತೆಗಾಗಿ ನೂರಾರು ಸಿಸಿ ಕೆಮರಾ ಪರಿಶೀಲಿಸಿದಾಗ ಆರೋಪಿ ಬೆಂಗಳೂರಿಗೆ ಬಂದಿರುವುದು ಪತ್ತೆಯಾಗಿತ್ತು. ಬಳಿಕ ಕಾನ್‌ಸ್ಟೆಬಲ್ ದೊಡ್ಡ ಲಿಂಗಯ್ಯ ಮತ್ತು ಇತರ ಸಿಬಂದಿ ಬೆಂಗಳೂರಿಗೆ ಬಂದು ನಗರ ಪೊಲೀಸರ ಸಹಾಯ ಪಡೆದು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ, ಸದಾಶಿವನಗರ ವ್ಯಾಪ್ತಿಯಲ್ಲಿ ನಿತ್ಯ ಸಂಚಾರ ಮಾಡುತ್ತಿರುತ್ತಾನೆ ಎಂಬ ಮಾಹಿತಿ ಕಲೆಹಾಕಿದ್ದರು.
1 ತಿಂಗಳಿನಿಂದ ಕಾರ್ಯಾಚರಣೆ
ಆರೋಪಿಗಾಗಿ 1 ತಿಂಗಳ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಕಳೆದ 1 ವಾರದಲ್ಲಿ ಆತನ ಚಲನವಲನಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆ. 6ರಂದು ಬೆಳಗ್ಗೆ 10 ಗಂಟೆಗೆ ಸದಾಶಿವನಗರದ ಟ್ರಾಫಿಕ್ ಸಿಗ್ನಲ್ ಬಳಿ ಮಫ್ತಿಯಲ್ಲಿ ದೊಡ್ಡಲಿಂಗಯ್ಯ ಕಾಯುತ್ತಿದ್ದರು. ಮಂಜ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಂತೆ ಆತನನ್ನು ವಾಹನ ಸಮೇತ ತಡೆಯಲು ಮುಂದಾದರು.
ಆರೋಪಿ ಸ್ಕೂಟರ್ ಸಮೇತ ತಪ್ಪಿಸಿಕೊಳ್ಳಲು ಮುಂದಾದನು. ಆದರೂ ಬಿಡದ ಕಾನ್‌ಸ್ಟೆಬಲ್ ಸ್ಕೂಟರನ್ನು ಹಿಡಿದುಕೊಂಡಾಗ ಅವರನ್ನೇ ಆರೋಪಿ ಸುಮಾರು 50 ಮೀಟರ್ ದೂರ ಎಳೆದೊಯ್ದನು. ಅಷ್ಟರಲ್ಲಿ ಕಾನ್‌ಸ್ಟೆಬಲ್ ಆರೋಪಿಯ ಕಾಲನ್ನು ಬಿಗಿಯಾಗಿ ಹಿಡಿದುಕೊಂಡರು. ಅನಂತರ ಅಲ್ಲೇ ಇದ್ದ ಟ್ರಾಫಿಕ್ ಮಹಿಳಾ ಎಎಸ್‌ಐ, ಹೋಮ್‌ಗಾರ್ಡ್ ಹಾಗೂ ಸ್ಥಳೀಯರು ದೊಡ್ಡಲಿಂಗಯ್ಯಗೆ ಸಹಾಯ ಮಾಡಿದರು. ಸಾರ್ವಜನಿಕರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ದೊಡ್ಡಲಿಂಗಯ್ಯ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
1 ತಿಂಗಳಿನಿಂದ ಕಾಯುತ್ತಿದ್ದೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್‌ಸ್ಟೆಬಲ್ ದೊಡ್ಡಲಿಂಗಯ್ಯ, ಈ ಅವಕಾಶವನ್ನು ನಾನು ಬಿಟ್ಟಿದ್ದರೆ ಮತ್ತೆ ಯಾವುತ್ತು ಆತನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. 1 ತಿಂಗಳಿಂದ ಮನೆ ಬಿಟ್ಟು ಬಂದು ಆತನಿಗಾಗಿ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದೇವೆ. ಆತ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿ ಓಡಾಡುತ್ತಿದ್ದ. ಪತ್ತೆ ಕಾರ್ಯ ಕಷ್ಟವಾಗಿತ್ತು. ಆದರೂ ಬಂಧಿಸಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Drink & Drive Case: ಕುಡಿದು ವಾಹನ ಚಾಲನೆ; ʼಮಂಜುಮ್ಮೆಲ್ ಬಾಯ್ಸ್ʼ ನಟ ಬಂಧನ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Arrested: ಹೊಯ್ಸಳ ಪೊಲೀಸ್ ಮೇಲೆ ಹಲ್ಲೆ; ಬಂಧನ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.