Bengaluru: ಸಿನಿಮೀಯವಾಗಿ ಕಳ್ಳನ ಸೆರೆ ಹಿಡಿದ ಕಾನ್‌ ಸ್ಟೇಬಲ್!‌

ಕೊರಟಗೆರೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿ

Team Udayavani, Aug 9, 2024, 9:20 AM IST

3-bng

ಬೆಂಗಳೂರು: ವಂಚನೆ ಹಾಗೂ ಕಳ್ಳತನ ಸೇರಿ 40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ವಂಚಕನನ್ನು ಕಾನ್‌ ಸ್ಟೇಬಲ್ ವೊಬ್ಬರು ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ನಗರದ ಸಂಚಾರ ದಟ್ಟಣೆ ನಡುವೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೆಸರುಘಟ್ಟ ನಿವಾಸಿ ಮಂಜೇಶ್‌ ಅಲಿಯಾಸ್‌ ಹೊಟ್ಟೆ ಮಂಜ ಬಂಧಿತ. ಕೊರಟಗೆರೆ ಠಾಣೆಯ ಕಾನ್‌ ಸ್ಟೇಬಲ್‌ ದೊಡ್ಡಲಿಂಗಯ್ಯ ಬಂಧಿಸಿದವರು.

ಸದ್ಯ ಬಂಧಿತ ಆರೋಪಿಯಿಂದ 10 ಸಾವಿರ ರೂ. ನಗದು ಹಾಗೂ 6.75 ಲಕ್ಷ ಮೌಲ್ಯದ 135 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿ ಮಂಜೇಶ್‌ ವಿರುದ್ಧ ಕೊರಟಗೆರೆ ಠಾಣೆ ಸೇರಿ ದಕ್ಷಿಣ ಕರ್ನಾಟಕದ ಹತ್ತಾರು ಪೊಲೀಸ್‌ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಕಳ್ಳತನ ಹಾಗೂ ವಂಚನೆ ಪ್ರಕರಣಗಳು ದಾಖಲಾಗಿವೆ.

ಇತ್ತೀಚೆಗೆ ಕೊರಟಗೆರೆ ಠಾಣೆ ವ್ಯಾಪ್ತಿಯ ಬ್ಯಾಂಕ್‌ ವೊಂದರ ಹತ್ತಿರದ ಮನೆಯಲ್ಲಿ ಕಳ್ಳತನ ನಡೆದಿತ್ತು. ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಮಂಜೇಶ್‌ ಬಗ್ಗೆ ಮಾಹಿತಿ ಸಿಕ್ಕಿತ್ತು. ಆದರೆ, ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿದಾಗ, ಆತ ಮನೆಯಲ್ಲಿ ಇರುವುದಿಲ್ಲ. ಫೋನ್‌ ಬಳಸಲ್ಲ. ಹೋಟೆಲ್‌ಗ‌ಳಲ್ಲಿ ಊಟ ಮಾಡದೆ, ಪಾರ್ಸೆಲ್‌ ಕೊಂಡೊಯ್ಯುತ್ತಿದ್ದ. ಲಾಡ್ಜ್ಗಳಲ್ಲಿ ವಾಸವಾಗಿರುತ್ತಿದ್ದ. ಹೀಗಾಗಿ ಆತನ ಪತ್ತೆಗಾಗಿ ನೂರಾರು ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಬೆಂಗಳೂರಿಗೆ ಬಂದಿರುವುದು ಪತ್ತೆಯಾಗಿತ್ತು.

ಬಳಿಕ ಕಾನ್‌ ಸ್ಟೇಬಲ್ ದೊಡ್ಡ ಲಿಂಗಯ್ಯ ಮತ್ತು ಇತರೆ ಸಿಬ್ಬಂದಿ ಬೆಂಗಳೂರಿಗೆ ಬಂದು ನಗರ ಪೊಲೀಸರ ಸಹಾಯ ಪಡೆದು ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ, ಸದಾಶಿವನಗರ ವ್ಯಾಪ್ತಿಯಲ್ಲಿ ನಿತ್ಯ ಸಂಚಾರ ಮಾಡುತ್ತಿರುತ್ತಾನೆ ಎಂಬ ಮಾಹಿತಿ ಕಲೆಹಾಕಿದ್ದರು.

1 ತಿಂಗಳಿನಿಂದ ಕಾರ್ಯಾಚರಣೆ:

ಆರೋಪಿಗಾಗಿ ಸುಮಾರು 1 ತಿಂಗಳ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ, ಕಳೆದ 1 ವಾರದಲ್ಲಿ ಆತನ ಚಲನವಲನಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆ.6ರಂದು ಬೆಳಗ್ಗೆ 10 ಗಂಟೆಗೆ ಸದಾಶಿವನಗರದ ಟ್ರಾಫಿಕ್‌ ಸಿಗ್ನಲ್‌ ಬಳಿ ಮಫ್ತಿಯಲ್ಲಿ ದೊಡ್ಡಲಿಂಗಯ್ಯ ಕಾಯುತ್ತಿದ್ದರು. ಆರೋಪಿ ಮಂಜ, ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಂತೆ ಆತನನ್ನು ವಾಹನ ಸಮೇತ ತಡೆದು, ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆಗ ಆರೋಪಿ ಸ್ಕೂಟರ್‌ ಸಮೇತ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.

ಆದರೂ ಬಿಡದ ಕಾನ್‌ ಸ್ಟೇಬಲ್ ದೊಡ್ಡಲಿಂಗಯ್ಯ ಸ್ಕೂಟರ್‌ ಹಿಡಿದುಕೊಂಡಾಗ, ಅವರನ್ನೇ ಆರೋಪಿ ಸುಮಾರು 50 ಮೀಟರ್‌ ದೂರ ಎಳೆದೊಯ್ದಿದ್ದಾನೆ. ಬಳಿಕ ಆರೋಪಿಯ ಕಾಲು ಬಿಗಿಯಾಗಿ ಹಿಡಿದು ಕೊಂಡಿದ್ದಾರೆ. ನಂತರ ಅಲ್ಲೇ ಇದ್ದ ಟ್ರಾಫಿಕ್‌ ಮಹಿಳಾ ಎಎಸ್‌ಐ, ಹೋಮ್‌ಗಾರ್ಡ್‌ ಹಾಗೂ ಸ್ಥಳೀಯರು ದೊಡ್ಡಲಿಂಗಯ್ಯಗೆ ಸಹಾಯ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಈ ವೇಳೆ ಕೆಲ ಸಾರ್ವಜನಿಕರು ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್‌ ಅಧಿಕಾರಿಗಳು ದೊಡ್ಡಲಿಂಗಯ್ಯ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಆರೋಪಿ ಕಳ್ಳತನದ ಜತೆಗೆ ವೃದ್ಧಾಪ್ಯ ವೇತನ, ವಿಧವ ವೇತನ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಿಂಚಣಿ ಯೋಜನೆಗಳ ಕೊಡಿಸುವುದಾಗಿ ಹೇಳಿ ಆಧಾರ್‌ ಕಾರ್ಡ್‌, ಪಡಿತರ ಚೀಟು ಮಾಡಿಸು ವುದಾಗಿ ತನ್ನದೇ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ. ಬ್ಯಾಂಕ್‌ ಅಥವಾ ಸರ್ಕಾರಿ ಕಚೇರಿ ಬಳಿ, ಫ‌ಲಾನುಭವಿಗಳನ್ನು ಇಳಿಸಿ ಮೈಮೇಲಿದ್ದ ಚಿನ್ನಾಭರಣ ನೋಡಿದರೆ ಸೌಲಭ್ಯ ಕೊಡುವುದಿಲ್ಲ ಎಂದು ಹೇಳಿ ನಂಬಿಸಿ, ತಾನು ಪಡೆದುಕೊಳ್ಳುತ್ತಿದ್ದ. ಬಳಿಕ ಇಲ್ಲದ ಸಬೂಬುಗಳನ್ನು ಹೇಳಿ ಪರಾರಿ ಆಗುತ್ತಿದ್ದ. ಈ ಚಿನ್ನಾಭರಣ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಗೋವಾಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಸೆರೆ ಹಿಡಿದಿದ್ದು ಹೇಗೆ?

 ಸದಾಶಿವನಗರದ ಟ್ರಾಫಿಕ್‌ ಸಿಗ್ನಲ್‌ ಬಳಿ ಸ್ಕೂಟರ್‌ನಲ್ಲಿ ಬಂದಿದ್ದ ಕಳ್ಳ

 ವಾಹನ ತಡೆದು ವಶಕ್ಕೆ ಪಡೆಯಲು ಮುಂದಾದ ಕಾನ್‌ ಸ್ಟೇಬಲ್

 ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಹೊಟ್ಟೆ ಮಂಜ

 ಬಳಿಕ ಸ್ಕೂಟರ್‌ ಅನ್ನು ಬಿಗಿಯಾಗಿ ಹಿಡಿದುಕೊಂಡ ಕಾನ್‌ ಸ್ಟೇಬಲ್

 ವಾಹನದಲ್ಲೇ ಕಾನ್‌ಸ್ಟೆàಬಲ್‌ ಅವರನ್ನು 50 ಮೀ. ದೂರಕ್ಕೆ ಎಳೆದೊಯ್ದ ಕಳ್ಳ

 ಬಳಿಕ ಅಲ್ಲೇ ಇದ್ದ ಮಹಿಳಾ ಎಎಸ್‌ಐ, ಹೋಮ್‌ಗಾರ್ಡ್‌ ನೆರವಿನೊಂದಿಗೆ ಕಳ್ಳನ ಸೆರೆ

 ಇದೇ ವೇಳೆ ಸಾರ್ವಜನಿಕರಿಂದ ಆರೋಪಿ ಹೊಟ್ಟೆ ಮಂಜನಿಗೆ ಹಿಗ್ಗಾಮುಗ್ಗಾ ಥಳಿತ

ಈ ಅವಕಾಶ ಬಿಟ್ಟಿದ್ದರೆ ಮತ್ತೆ ಆತ ಸಿಗುತ್ತಿರಲಿಲ್ಲ: ಪೊಲೀಸ್‌ ದೊಡಲಿಂಗಯ್ಯ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನ್‌ ಸ್ಟೇಬಲ್ ದೊಡ್ಡಲಿಂಗಯ್ಯ, ಈ ಅವಕಾಶವನ್ನು ನಾನು ಬಿಟ್ಟಿದ್ದರೆ, ಮತ್ತೆ ಯಾವುತ್ತು ಆತನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲ. 1 ತಿಂಗಳಿಂದ ಮನೆ ಬಿಟ್ಟು ಬಂದು ಆತನಿಗಾಗಿ ಬೆಂಗಳೂರಿನಲ್ಲಿ ಶೋಧ ನಡೆಸುತ್ತಿದ್ದೇವೆ. ಆತ ಮುಖಕ್ಕೆ ಮಾಸ್ಕ್ ಹಾಗೂ ಹೆಲ್ಮೆಟ್‌ ಹಾಕಿಕೊಂಡು ಓಡಾಡುತ್ತಿದ್ದ. ಅದರಿಂದ ಆತನ ಪತ್ತೆ ಕಾರ್ಯ ಕಷ್ಟವಾಗಿತ್ತು. ಆದರೆ, ಕೆಲ ಮಾಹಿತಿ ದೊರೆತ ಆಧಾರದ ಮೇಲೆ ನಿರ್ದಿಷ್ಟ ಸಿಗ್ನಲ್‌ ಬಳಿ ಕಾಯ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಟಾಪ್ ನ್ಯೂಸ್

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.