Kundapura: 2021ರಲ್ಲಿ ನಡೆದ ಅಪಘಾತ ಪ್ರಕರಣ… ಚಾಲಕ ಖುಲಾಸೆ
Team Udayavani, Aug 9, 2024, 8:00 PM IST
ಕುಂದಾಪುರ: ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿ 2021ರ ಅ.10ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನೆಂದು ಕೇಸಿಗೆ ಒಳಗಾಗಿದ್ದ ಆರೋಪಿ ಚಾಲಕನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಬಲ್ನಾಡಿನ ಉಳ್ಳಾಳ್ತಿ ಕಾಂಪ್ಲೆಕ್ಸ್ ಬಳಿ ಗೋಲ್ಡನ್ ಬೇಕರಿಯ ಮಾಲಕ ಬಲ್ನಾಡು ಪಳ್ಳಿಕೆರೆ ನಿವಾಸಿ ಅಬ್ದುಲ್ ಅಝೀಜ್ ಅವರ ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಬ್ರಹ್ಮಾವರ ತಾಲೂಕು ವಡ್ಡರ್ಸೆ ಗ್ರಾಮದ ಯಾಳಹಕ್ಲು ನಿವಾಸಿ ಸುಧಾಕರ ಶೆಟ್ಟಿ ಅವರನ್ನು ಪುತ್ತೂರು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶಿಸಿದೆ.
ಉದಯವಾಣಿ ವರದಿ ಸಾಕ್ಷಿ: ಪರಿಗಣಿಸಿದ ನ್ಯಾಯಾಲಯ
ಅಪಘಾತಗೊಂಡ ರಸ್ತೆಯಲ್ಲಿ ಅಪಘಾತದ ಎರಡು ದಿನ ಮೊದಲು ಜೀಪೊಂದು ಕೆಟ್ಟು ನಿಂತ ಪರಿಣಾಮ ರಸ್ತೆಯ ಮೇಲೆ ಆಯಿಲ್ ಚೆಲ್ಲಿ ಹಲವು ವಾಹನಗಳು ಸ್ಕಿಡ್ ಆಗಿ ಅಪಘಾತ ಸಂಬಂಧಿಸಿದ ಬಗ್ಗೆ 2021ಅ. 11ರಂದು ಉದಯವಾಣಿ ವರದಿ ಮಾಡಿತ್ತು. ಈ ವರದಿಯ ಪ್ರತಿಯನ್ನು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿ ಅಪಘಾತದಲ್ಲಿ ಆರೋಪಿಯ ಯಾವುದೇ ತಪ್ಪು ಇಲ್ಲ ಎಂದು ವಾದಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಆರೋಪಿಯನ್ನು ದೋಷ ಮುಕ್ತಗೊಳಿಸಿದೆ. ಆರೋಪಿ ಪರ ಕುಂದಾಪುರದ ವಕೀಲ ಶ್ಯಾಮಸುಂದರ ನಾೖರಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.