Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಮತಗಳಿಗೂ ಭೂಮಿಗೂ ಇರುವ ಸಂಪರ್ಕವೇನು?

Team Udayavani, Aug 10, 2024, 2:20 PM IST

Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಅಲ್ಲಾ ತುಮ್‌ಹೋ, ಈಶ್ವರ್‌ ತುಮ್‌ಹೋ, ತುಮ್‌ ಹೀ ಹೊ ರಾಮರಹೀಂ ……. ಹಾಡು ಪ್ರತಿಧ್ವನಿಸಿ ಮರಗಳ ಹಸುರಿನ ಹೊದ್ದಿಕೆಯ ತೂರಿ ತಲುಪಿತ್ತು ನೀಲಿ ಆಕಾಶವ ಕಮಾಲ್ಡೋಲಿ ಅನ್ನುವ ನಿಸರ್ಗ ಸ್ವರ್ಗದಲ್ಲಿ ಏರ್ಪಡಿಸಿದ್ದ ಅಂತರ್ಜಾತೀಯ ಸಮ್ಮೇಳನದಲ್ಲಿ. SAE ( segreteriato attivita’ ecumeniche) ಇದು ಒಂದು ಹಳೆಯ ಸಂಸ್ಥೆ. ಇದರ ಉದ್ದೇಶ ದೇವನೊಬ್ಬ ನಾಮಹಲವು, ಇದೇ ನಿಟ್ಟಿನಲ್ಲಿ ಎಲ್ಲ ಕ್ರೈಸ್ತ ಪಂಗಡಗಳ ಜತೆಗೆ ಬೇರೆ ಧರ್ಮಗಳಿಗೂ ಉತ್ತೇಜನ ನೀಡುತ್ತಾರೆ. ಇದರ ಅಂಗವಾಗಿ ಪ್ರತೀ ವರ್ಷ ಒಂದು ವಾರ ಸಮ್ಮೇಳನ ಏರ್ಪಡಿಸುತ್ತಾರೆ. ಇದರಲ್ಲಿ ಯುವ ಜನಾಂಗ ಕೂಡ ಭಾಗವಹಿಸಿ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

ಈ ವರ್ಷ 60ನೇ ಸಂವತ್ಸರದ ಸಮ್ಮೇಳನ, ಇಟಲಿಯ ಕಮಾಲ್ಡೋಲಿ ಅನ್ನುವ ಜಾಗದಲ್ಲಿ ನಡೆಯಿತು. “ದೇವ ಮಾನವನನ್ನಾರಿಸಿ ಎಡೆನ್‌ ತೋಟದಲ್ಲಿ ಬಿಟ್ಟು ಇದನ್ನು ಬೆಳೆಸಿ ಕಾಪಾಡು’ ಬೈಬಲ್‌ ಗ್ರಂಥದಿಂದ ಆರಿಸಿದ ಈ ಸಾಲುಗಳ ಆಧಾರಿತ “ಭೂಮಿ ವಾಸಿಸಲು ಹಾಗೂ ರಕ್ಷಿಸಲು ‘ ಇದೆ ಸಮ್ಮೇಳನದ ವಿಷಯವಾಗಿತ್ತು. ನಾನು ಮಾತಾಡುತ್ತ ಪಂಚಮಹಾಭೂತಗಳಲ್ಲಿ ಒಂದಾದ ಭೂಮಿ ನಮಗೆ ಭೂಮಾತಾ. ಹಾಗೆಯೆ ಪ್ರಕೃತಿ ದೇವರು, ಇದನ್ನು ಸಂತ ಫ್ರಾನ್ಸಿಸ್ಕೋ ತನ್ನ ಕಾಂತಿಕೆ ದೆಲ್ಲೆ ಕ್ರೆಯಾತುರೆ ಗ್ರಂಥದಲ್ಲಿ ಹೇಳಿದ್ದಾರೆ. ಈ ಗ್ರಂಥ ಪಂಚ ಮಹಾಭೂತಗಳ ವರ್ಣನೆ. ಇದರಲ್ಲಿ ಜಲ,ಅಗ್ನಿ, ಭೂಮಿ, ಆಕಾಶ, ವಾಯು ಎಲ್ಲ ದೇವರೆಂದಿದ್ದಾರೆ.

“ಮತಗಳಿಗೂ ಭೂಮಿಗೂ ಇರುವ ಸಂಪರ್ಕವೇನು? ಭೂರಕ್ಷಣೆ ಏಕೆ ಬೇಕು?’ ಈ ವಿಷಯದ ಬಗ್ಗೆ ಸಮ್ಮೇಳನ ಒಂದು ವಾರ ನಡೆಯಿತು. ಮುಗಿಲೆತ್ತರದ ಹಚ್ಚ ಹಸುರಿನ ಬೆಟ್ಟಗಳು, ಫಲವತ್ತಾದ ಬೆಟ್ಟಗಳು, ಕಣ್ಣು ಹಾಯಿಸಿದಷ್ಟು ಮರಗಳು. ಸೂರ್ಯನ ಕಿರಣ ನೆಲ ತಾಕಲು ಸಾಧ್ಯವಿಲ್ಲದಷ್ಟು ಮರಗಳು, ಎಲೆಗಳು, ಕೊಂಬೆಗಳು. ಇಂತಹ ನಿಸರ್ಗದ ನಡುವೆ ಒಂದು ಕ್ರೈಸ್ತ ಸನ್ಯಾಸಿಗಳ ಆಶ್ರಮ. ಒಳಗೆ ಗ್ರಂಥಾಲಯ, ಎಲ್ಲ ಮತಗಳ ಗ್ರಂಥಗಳು, ವೇದಗಳು , ಉಪನಿಷತ್ತುಗಳು ಇವುಗಳು ಓದಿಗೆ ಲಭ್ಯವಿತ್ತು. ಸಾಯಿ ವಿದ್ಯಾ ಅನುವಾದದ ನಮ್ಮ ಸಂಘ ಮಾಡಿದ ಯೋಗ ವಸಿಷ್ಠ ಈ ಗ್ರಂಥಾಲಯಕ್ಕೆ ಕೊಡುವ ಭಾಗ್ಯ ನನ್ನದಾಯಿತು.

ಇಲ್ಲಿಂದ ಎಂಟು ಕಿಲೋ ಮೀಟರ್‌ದೂರದಲ್ಲಿ ಒಂದು ಹಳೆಯ ಕಾಲದ ದೊಡ್ಡ ತೊಟ್ಟಿಮನೆ. ನಾಲ್ಕು ಅಂತಸ್ತು ಕೋಣೆಗಳು ಪ್ರವಾಸಿಗರಿಗೆ, ಅಲ್ಲಿ SAE(segreteiato attivita ecumenica) ಸಮ್ಮೇಳನ ಒಂದುವಾರ ನಡೆದಿತ್ತು. ಈ ಸಂದರ್ಭದಲ್ಲಿ ಒಂದು ಬೆಳಗ್ಗೆ ಮೂರು ಗಂಟೆ ಇಸ್ಲಾಂ, ಬೌದ್ಧ, ಕ್ರಿಶ್ಚಿಯನ್‌, ಹಿಂದೂ ಮತಗಳಿಗೆ ಮೀಸಲಾಗಿಟ್ಟು ಹಿಂದೂ ಮತದ ಬಗ್ಗೆ ಮಾತಾಡಲು ನನ್ನನ್ನು ಆಹ್ವಾನಿಸಿದ್ದರು.

Desi Swara: ದೇವನೊಬ್ಬ ನಾಮ ಹಲವು-ನಿಸರ್ಗ ಸ್ವರ್ಗದಲ್ಲಿಅಂತರ್ಜಾತೀಯ ಸಮ್ಮೇಳನ

ಸಮ್ಮೇಳನದ ವಿಷಯ “ಮತಗಳು ಮತ್ತು ಭೂಮಿ’ ಎರಡಕ್ಕೂ ಇರುವ ಸಂಪರ್ಕ. ಪಂಚೇದ್ರಿಯಗಳಲ್ಲಿ ಒಂದಾದ ಭೂಮಿ ಭೂಮಾತಾ ಇದನ್ನು ಹೇಗೆ ಕಾಪಾಡುವುದು? ಇದರ ಬಗ್ಗೆ ಚರ್ಚೆ ನಡೆದಿತ್ತು. “ಈ ಭೂಮಿ ಬಣ್ಣದ ಬುಗುರಿ’ ಜಿಯನ್ನ ಅವರ ಗಾಯನದ ಮೂಲಕ ನನ್ನ ಭಾಷಣ ಆರಂಭಿಸಿ, ಈ ಹಾಡಿನ ಅರ್ಥ ಎಷ್ಟು ಚೆನ್ನಾಗಿ ಭೂಮಿಯನ್ನು ಒಂದು ಬಣ್ಣದ ಬುಗುರಿಗೆ ಹೋಲಿಸಿ ಮಾನವನ ಕರ್ತವ್ಯಗಳನ್ನು ವಿವರಿಸಿದ್ದಾರೆ ಎಂದು ಹೇಳಿ ನಾವು ಭೂಮಿಯಲ್ಲಿ ಹುಟ್ಟಿ ಅದರಲ್ಲಿ ಒಂದಾಗುತ್ತೇವೆ ಎಂದು ಸಮರ್ಥಿಸಿದೆ.

ಭೂಮಿ ನಮಗೆ ಭೂಮಾತಾ ಎಲ್ಲವು ಭೂಗರ್ಭದಲ್ಲಿ ಅಡಗಿದೆ, ವಿಷ್ಣು ವರಾಹಾವತಾರ ತಾಳಿ ರಕ್ಕಸ ಕಡಲಲ್ಲಿ ಮುಳುಗಿಸಿದ್ದ ಭೂಮಿಯನ್ನು ರಕ್ಷಿಸಿದನು. ಕೃಷ್ಣ ಭೂಮಂಡಲವನ್ನು ತನ್ನ ಬಾಯಲ್ಲಿ ಯಶೋದೆಗೆ ತೋರಿದನು. ಸೃಷ್ಟಿಕರ್ತ ಬ್ರಹ್ಮನು ವಿಷ್ಣುವಿನ ಹೊಕ್ಕಳಿಂದ ಹೊರಟ ಕಮಲದಲ್ಲಿ ಕುಳಿತು ಓಂಕಾರದೊಂದಿಗೆ, ವೇದಘೋಷಣೆಯೊಂದಿಗೆ, ಭೂಮಿಯನ್ನು ಸೃಷ್ಟಿ ಮಾಡಿದ ಬ್ರಹ್ಮ ಮತ್ತೆ ಎಲ್ಲ ಸುಖ ಸಂಪತ್ತುಗಳನ್ನು ಮಾನವನಿಗಿಟ್ಟ. “ಕೈಮುಗಿದು ಒಳಗೆ ಬಾ ಇದು ಸಸ್ಯಕಾಶಿ’ ಸಸ್ಯ ಸಂಪತ್ತು ಪವಿತ್ರ ಕಾಶಿಯಷ್ಟೇ ಪವಿತ್ರ. ದೇವರು ಸಸ್ಯ ಕಾಶಿ ಸೃಷ್ಟಿಸಿ ಪವಿತ್ರ ಮರಗಳನ್ನು ನೀಡಿ ಬಿಲ್ಪತ್ರೆಯ ಒಂದು ಎಲೆ ಶಿವನಿಗರ್ಪಿಸಿದರೆ ಮೋಕ್ಷ ಸಾಧ್ಯ ಎಂದೆ.

ಜೀವನದ ಮೋಕ್ಷ ಹಾಗೂ ಸಂಸಾರದ ಬಗ್ಗೆ, ದಶಾವತಾರಾ, ರಾಮಾಯಣದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡೆ. ನಮ್ಮ ದಿನಚರಿಯಲ್ಲಿ ಭೂಮಿಯ ಪಾತ್ರ ಹೇಳುವಾಗ ತುಳಸಿಯ ಪ್ರಾಮುಖ್ಯ, ಬಾಳೆ ಎಲೆಯ ಶ್ರೇಷ್ಠತೆ, ಬಿಲ್ಪತ್ರೆಯ ಮಹತ್ವ, ವೀಲೆÂàದೆಲೆ ಗುಣಗಳು ಮತ್ತೆ ಭೂದಾನದ ಫಲ, ನೆಲಕ್ಕೆ ಏಕೆ ನಮಸ್ಕರಿಸುತ್ತೇವೆ, ಭೂಮಿ ಪೂಜೆ ಭೂದಾನಗಳ ವಿಷಯ ಹೇಳಿದೆ.

ಭೂಮಿಯ ರಕ್ಷಣೆ ಏಕೆ ಬೇಕು ? ಇದನ್ನು ಹೇಗೆ ಮಾಡಬೇಕು ?
ನಾವು ನಮ್ಮ ಮನೆಗಳನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆಯೇ ನಮ್ಮ ಭೂಮಿಯನ್ನು ಕಾಪಾಡಬೇಕು. ಭೂಮಿಯ ಆರೋಗ್ಯವೇ ಶಾಂತಿ! ಶಾಂತಿ ಸ್ಥಾಪನೆಗೆ ಉತ್ತಮ ಮಾಧ್ಯಮ ಧರ್ಮ ಎಂದು ಹೇಳಿ ಮನುಸ್ಮತಿಯನ್ನು ಸಂಕ್ಷಿಪ್ತವಾಗಿ ವಿವರಿಸಿ ಧರ್ಮವಷ್ಟೇ ಮುಖ್ಯ ಸತ್ಕರ್ಮ, ಕರ್ಮ ಮತ್ತು ಧರ್ಮ ಮಾರ್ಗದಿಂದ ವಸುಧೈವ ಕುಟುಂಬಕಂ ನಡೆದರೆ ಈ ಭೂಮಿ ಶಾಂತಿಧಾಮ ಆಗುವುದರಲ್ಲಿ ಸಂದೇಹವಿಲ್ಲ.

ಭೂರಕ್ಷಣೆಯಲ್ಲಿ ಧರ್ಮದ ಪಾತ್ರ
ಹಿಂದೂಮತದ ದೃಷ್ಟಿಕೋನದಲ್ಲಿ ಭೂಮಿ, ಧರ್ಮೋ ರಕ್ಷತಿ ರಕ್ಷಿತಃ ಅನ್ನುವಂತೆ ಧರ್ಮ ಒಂದು ಉತ್ತಮ ಮಾಧ್ಯಮ ಎರಡನೇ ಶತಮಾನದಲ್ಲಿ ಬರೆದ ಮನು ಚಕ್ರವರ್ತಿಯ ಮನು ಧರ್ಮ ಶಾಸ್ತ್ರ ದ ಬಗ್ಗೆ ವಿವರಿಸಿ ಇಂದಿಗೂ ಧರ್ಮಶಾಸ್ತ್ರದ ಅನೇಕ ನೀತಿಗಳು ಶಾಸ್ತ್ರಗಳು ನಮ್ಮ ದಿನಚರಿ ಯಲ್ಲಿದೆ. ಈ ಶಾಸ್ತ್ರಗಳಿಗೆ ವಿರುದ್ಧ ನಡೆದು ಅಧರ್ಮ ತಲೆ ಎತ್ತಿದರೆ ಜನರಿಗೆ ತೊಂದರೆ ಉಂಟಾಗಿ ಶಾಂತಿ ಸ್ಥಾಪನೆಗೆ ಕುಂದು ಬರಬಹುದು. ಧರ್ಮದ ಜತೆ ಸತ್ಕರ್ಮಗಳನ್ನು ಮಾಡಬೇಕು. ಶಾಂತಿ ಸ್ಥಾಪನೆಗೆ ಎಂದು ಹೇಳಿದಾಗ ನೂರಾರು ಜನ ಮೆಚ್ಚಿ ತಲೆ ತೂಗಿದಾಗ ಆತ್ಮತೃಪ್ತಿ ಆಯಿತು.”ವೈಷ್ಣವ ಜನತೋ’ ಹಾಡಿಗೆ ಆತ್ಮಾನಂದ ಅವರ ನೃತ್ಯ ಎಲ್ಲರನ್ನು ಸಂತಸಗೊಳಿಸಿತ್ತು. ನಿಸರ್ಗದಲ್ಲಿ ಮಾಡಿದ ನೃತ್ಯ ಭೂಮಾತೆಗೆ ನಮಿಸಿತ್ತು.

*ಜಯಮೂರ್ತಿ, ಇಟಲಿ

 

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.