Paris Olympic: ರೋಮನ್ ಕುಸ್ತಿಪಟು ಕ್ಯಾಟೆಲಿನಾ ಕುತ್ತಿಗೆಗೆ ಗಾಯ; ವಿಡಿಯೋ ವೈರಲ್
Team Udayavani, Aug 10, 2024, 9:33 PM IST
ಪ್ಯಾರಿಸ್: ಒಲಿಂಪಿಕ್ಸ್ ಮಹಿಳಾ ಕುಸ್ತಿ ಪ್ರೀಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ರೋಮನ್ ಕುಸ್ತಿಪಟು ಕ್ಯಾಟಲಿನಾ ಆಕ್ಸೆಂಟೆಗೆ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಅಮೆರಿಕದ ಕೆನೆಡಿ ಬ್ಲೇಡ್ಸ್ ಅವರು ಫಾಲ್ಗೆ (ಎದುರಾಳಿಯನ್ನು ಮೇಲಿಂದ ಎತ್ತಿ ನೆಲಕ್ಕೆ ಬಡಿಯುವ ಒಂದು ಕೌಶಲ್ಯ) ಯತ್ನಿಸುವಾಗ ಈ ಅವಘಡ ಸಂಭವಿಸಿದೆ. ಬಳಿಕ ಕ್ಯಾಟಲಿನಾ ಅವರನ್ನು ಸ್ಟ್ರೆಚರ್ ಮೂಲಕ ಅಂಕಣದಿಂದ ಹೊರಗೆ ಕೊಂಡೊಯ್ಯಲಾಯಿತು. ಇದರ ಚಿತ್ರ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶನಿವಾರ ನಡೆದ ಮಹಿಳೆಯರ 76 ಕೇಜಿ ಪ್ರೀಕ್ವಾರ್ಟರ್ ಫೈನಲ್ನಲ್ಲಿ ಸ್ಪರ್ಧಿಸಿದ್ದ ಕ್ಯಾಟಲಿನಾ ಆಕ್ಸೆಂಟೆ, ಕೆನೆಡಿ ಬ್ಲೇಡ್ಸ್ ವಿರುದ್ಧ 11-0ಯ ಹಿನ್ನಡೆಯಲ್ಲಿದ್ದರು. ಇದೇ ವೇಳೆ ಕೆನೆಡಿ, ಆಕ್ಸೆಂಟೆ ವಿರುದ್ಧ ಜರ್ಮನ್ ಸುಪ್ಲೆಸ್ ಪಟ್ಟು ಹಾಕಿ ನೆಲಕ್ಕೆ ಕೆಡವಿದರು. ಈ ವೇಳೆ ಆಕ್ಸೆಂಟೆ ಕುತ್ತಿಗೆಗೆ ಗಾಯವಾಗಿ ಅವರನ್ನು ವೈದ್ಯಕೀಯ ಉಪಚಾರಕ್ಕೆ ಕರೆದೊಯ್ಯಲಾಯಿತು. ಆ ಬಳಿಕ ಕ್ವಾರ್ಟರ್ಗೆàರಿದ್ದ ಕೆನೆಡಿ ಅಲ್ಲೂ ಗೆದ್ದು ಸೆಮಿಫೈನಲ್ಗೆ ಪ್ರವೇಶ ಗಿಟ್ಟಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.