Nita Ambani: ಪದಕ ವಿಜೇತರಿಗೆ “ಇಂಡಿಯಾ ಹೌಸ್”ನಲ್ಲಿ ಗೌರವಿಸಿದ ನೀತಾ ಅಂಬಾನಿ
Team Udayavani, Aug 10, 2024, 10:38 PM IST
ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ, ಕಂಚು ಗೆದ್ದ ಅಮಾನ್ ಸೆಹ್ರಾವತ್ ಹಾಗೂ ಹಾಕಿ ತಂಡದ ಕ್ರೀಡಾಪಟುಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ನೀತಾ ಅಂಬಾನಿ ಶನಿವಾರ(ಆಗಸ್ಟ್ 10) ಇಂಡಿಯಾ ಹೌಸ್‌ನಲ್ಲಿ ಸನ್ಮಾನಿಸಿದ್ದಾರೆ.
ಕ್ರೀಡಾಗ್ರಾಮದಲ್ಲಿರುವ ಇಂಡಿಯಾ ಹೌಸ್‌ನಲ್ಲಿ ನಡೆದ ಈ ಸಂಭ್ರಮಾಚರಣೆ ವೇಳೆ ಭಾರತೀಯ ಒಲಿಂಪಿಕ್ ಸಂಘದ ಅಧ್ಯಕ್ಷೆ ಪಿ.ಟಿ.ಉಷಾ ಸಹ ಉಪಸ್ಥಿತರಿದ್ದರು. ಪಿ.ಆರ್.ಶ್ರೀಜೇಶ್, ಅಭಿಶೇಕ್ ನೈನ್, ಅಮಿತ್ ರೋಹಿದಾಸ್ ಹಾಗೂ ಸಂಜಯ್ ಹಾಕಿ ತಂಡದ ಪರವಾಗಿ ಭಾಗಿಯಾಗಿದ್ದರು. ಮತ್ತುಳಿದ ಆಟಗಾರರು ಭಾರತಕ್ಕೆ ಬಂದ ಕ್ರೀಡಾಪಟುಗಳ ಮೊದಲ ಬ್ಯಾಚ್‌ನಲ್ಲಿದ್ದರು.
ಅಮಾನ್ ಸೆಹ್ರಾವತ್‌ರನ್ನು ಶ್ಲಾಘಿಸಿದ ನೀತಾ, ‘ಚೊಚ್ಚಲ ಪಂದ್ಯದಲ್ಲೇ ಅಮಾನ್ ನಮ್ಮೆಲ್ಲರಿಗೂ ಹೆಮ್ಮೆ ತಂದಿದ್ದಾರೆ. ಅಡೆತಡೆಗಳ ನಡುವೆಯೇ ಭಾರತದ ಅತ್ಯಂತ ಕಿರಿಯ ಒಲಿಂಪಿಕ್ ಪದಕ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.
ಪ್ಯಾರಿಸ್ ಒಲಿಂಪಿಕ್ಸ್ 2024ರ ಕ್ರೀಡಾಕೂಟದ ಸಂದರ್ಭದಲ್ಲಿ ಐಒಸಿ ಸದಸ್ಯೆ- ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಇಂಡಿಯಾ ಹೌಸ್‌ನಲ್ಲಿ ಭಾರತೀಯ ಒಲಿಂಪಿಕ್ ಶೂಟಿಂಗ್ ತಂಡದೊಂದಿಗೆ ಸಂತೋಷವಾಗಿ ಕಾಣಿಸಿಕೊಂಡಿದ್ದು ಹೀಗೆ. ಈಗಾಗಲೇ ಎರಡು ಪದಕಗಳೊಂದಿಗೆ ಭಾರತದ ಶೂಟರ್‌ಗಳು ಪ್ಯಾರಿಸ್‌ನಲ್ಲಿ ಹೆಮ್ಮೆಯಿಂದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಇನ್ನೂ ಆಕಾಶದೆತ್ತರದ ಸಾಧನೆಗೆ ಗುರಿ ಇರಿಸಿ, ಯಶಸ್ಸು ಪಡೆಯುವಂತಾಗಲಿ ಎಂದು ನೀತಾ ಅಂಬಾನಿ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
ICC World Rankings: ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್ ಬುಮ್ರಾ ಮರಳಿ ನಂ.1
Brand Value: ಬಾಲಿವುಡ್ ತಾರೆಯರನ್ನು ಮೀರಿಸಿದ ಕ್ರಿಕೆಟಿಗರ ಬ್ರ್ಯಾಂಡ್ ಮೌಲ್ಯ!
IPL Auction: 27 ಕೋ. ರೂ. ಒಡೆಯ ರಿಷಭ್ ಪಂತ್‌ಗೆ ಸಿಗುವುದು 18.90 ಕೋಟಿ ಮಾತ್ರ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.