ಕಾನೂನು ನೈತಿಕತೆಯನ್ನು ಅವಲಂಬಿಸಿದಾಗ ನ್ಯಾಯ ಲಭ್ಯ : ನ್ಯಾ.ಅಬ್ದುಲ್ ನಝೀರ್
ಶಿರ್ತಾಡಿಯಲ್ಲಿ ಭುವನಜ್ಯೋತಿ ಟ್ರಸ್ಟ್‌ನ ಕಾನೂನು ಕಾಲೇಜು ಉದ್ಘಾಟನೆ
Team Udayavani, Aug 11, 2024, 6:17 AM IST
ಮೂಡುಬಿದಿರೆ: ನೈತಿಕತೆ ಎಂಬುದು ಕಾನೂನಿಗಿಂತ ಮಿಗಿಲಾದುದು. ಕಾನೂನು ನೈತಿಕತೆಯನ್ನು ಅವಲಂಬಿಸಿದ್ದಾಗ ಮಾತ್ರ ನ್ಯಾಯಾಕಾಂಕ್ಷಿಗೆ ನಿಜವಾದ ನ್ಯಾಯ ಲಭಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಆಂಧ್ರ ಪ್ರದೇಶದ ರಾಜ್ಯಪಾಲ ಎಸ್.ಅಬ್ದುಲ್ ನಝೀರ್ ಹೇಳಿದರು.
ಶಿರ್ತಾಡಿಯಲ್ಲಿ ಭುವನಜ್ಯೋತಿ ಟ್ರಸ್ಟ್‌ನ ಕಾನೂನು ಕಾಲೇಜಿನ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಕೋರ್ಟ್ ಕೇಸುಗಳೆಂದರೆ ಕ್ಯಾನ್ಸರ್ ಇದ್ದಂತೆ. ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣಗಳು ಕೊಳೆಯುತ್ತಿವೆ ಎಂದರೆ ಕನಿಷ್ಠ 20 -25 ಕೋಟಿ ಮಂದಿ ಈ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ ಎಂದೇ ಪರಿಭಾವಿಸಬೇಕಾಗಿದೆ. ಕಾನೂನು ಪ್ರಕ್ರಿಯೆಯ ಜಟಿಲ ಅಂಶಗಳೇ ಈ ವಿಳಂಬಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಕಾನೂನು ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಬೇಕಾಗಿದೆ ಎಂದರು.
ಕಾನೂನು ಪರಿಪಾಲನೆ ಬರೇ ಕೋರ್ಟಿನ ವಿಷಯವಾಗುವುದಲ್ಲ, ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು. ವಕೀಲರು ಉನ್ನತ ಮಟ್ಟದ ನ್ಯಾಯಸಮ್ಮತ ಸಂಸ್ಕೃತಿಯನ್ನು ರೂಢಿಸಿಕೊಂಡಿರಬೇಕಾಗಿದೆ. ವೃತ್ತಿ ರಹಸ್ಯದೊಂದಿಗೆ ತನ್ನ ಗ್ರಾಹಕರಿಗೆ ವಿಧೇಯನಾಗಿರುವುದೂ ಬಹಳ ಮುಖ್ಯ. ಒಂದುಕಾಲದಲ್ಲಿ ಯಾವುದಕ್ಕೂ ಸಲ್ಲದವನು ಕಾನೂನು ಕಾಲೇಜು ಸೇರುತ್ತಿದ್ದರು. ಅಲ್ಲೂ ಸಲ್ಲದವನು ಎಲ್ಲೂ ಸಲ್ಲನು ಎಂಬ ಮಾತಿತ್ತು. ಈಗ ಇದೊಂದು ಉದಾತ್ತ ಶಿಕ್ಷಣ ಶಾಖೆ ಎಂದು ಪರಿಗಣಿತವಾಗಿದೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಜ| ಕೃಷ್ಣ ಎಸ್.ದೀಕ್ಷಿತ್ ಮಾತನಾಡಿ, “ಭಾರತ ಎಂದರೆ ಜ್ಞಾನ ಅರಸುವವರ ನಾಡು. ಇಲ್ಲಿ ತಕ್ಷಶಿಲಾ, ನಳಂದಾ ಮೊದಲಾದ 24 ವಿಶ್ವವಿಖ್ಯಾತ ವಿವಿಗಳಿದ್ದವು. ಅನ್ಯದೇಶಗಳಿಂದಲೂ ಇಲ್ಲಿಗೆ ಜನ ಜ್ಞಾನಾರ್ಜನೆಗಾಗಿ ಬರುತ್ತಿದ್ದರು. ಪ್ರವಾದಿ ಮೊಹಮ್ಮದರು ತನ್ನ ನಾಡಿನಿಂದ ಮೊದಲು ಬಂದದ್ದೇ ಭಾರತಕ್ಕೆ ಎಂಬುದು ಈ ನಾಡು ಜ್ಞಾನಕಾಶಿ ಎಂಬುದಕ್ಕೆ ಸಾಕ್ಷಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.