PM Modi; ಇಂದು 109 ಅಧಿಕ ಇಳುವರಿ ತಳಿ ಬಿಡುಗಡೆ ; ಏನಿದು ಯೋಜನೆ?
ಹೊಳ ತಳಿಗಳಿಂದ ರೈತರಿಗೆ ಹೆಚ್ಚು ಲಾಭ... ವಿಜ್ಞಾನಿಗಳ ರೈತರ ಜತೆ ಪ್ರಧಾನಿ ಮೋದಿ ಸಂವಾದ
Team Udayavani, Aug 11, 2024, 6:45 AM IST
ಹೊಸದಿಲ್ಲಿ: ಪ್ರಧಾನಿ ಮೋದಿ ಅವರು ರವಿವಾರ ಅಧಿಕ ಇಳುವರಿ, ಹವಾಮಾನಕ್ಕೆ ಹೊಂದಿಕೊಳ್ಳುವ ಮತ್ತು ಜೈವಿಕ ಬಲವರ್ಧಿತ ಬೆಳೆಗಳ 109 ತಳಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ದಿಲ್ಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆಯಲ್ಲಿ ಬೆಳೆಗಳ ತಳಿಗಳನ್ನು ಬಿಡುಗಡೆ ಮಾಡುವುದರ ಜತೆಗೆ ಮೋದಿ ಅವರು, ರೈತರು ಮತ್ತು ವಿಜ್ಞಾನಿಗಳ ಜತೆ ಸಂವಾದ ಕೂಡ ನಡೆಸಲಿದ್ದಾರೆ. 27 ತೋಟಗಾರಿಕಾ ಬೆಳೆಗಳು, 34 ಕ್ಷೇತ್ರ ಬೆಳೆಗಳು ಮತ್ತು 61 ಬೆಳೆಗಳು ಸೇರಿ ಒಟ್ಟು 109 ತಳಿಗಳ ಬಿಡುಗಡೆ ನಡೆಯಲಿದೆ.
ಕ್ಷೇತ್ರ ಬೆಳೆಗಳು ಯಾವವು?: ಸಿರಿಧಾನ್ಯ ಸೇರಿ ವಿವಿಧ ನಮೂನೆಯ ಧಾನ್ಯಗಳು, ಮೇವು ಬೆಳೆ, ಎಣ್ಣೆ ಬೀಜ ಗಳು, ದ್ವಿದಳ ಧಾನ್ಯ, ಗೋಧಿ, ಭತ್ತ, ಕಬ್ಬು, ಹತ್ತಿ ಮತ್ತು ಇತರ ಬೆಳೆಗಳ ತಳಿಗಳು ಸೇರಿವೆ. ಈ ಬೆಳೆಗಳು ಆಹಾರ ಪೂರೈಕೆ, ಪಶು ಆಹಾರ ಹಾಗೂ ಕಚ್ಚಾ ವಸ್ತುಗಳ ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಈ ಬೆಳೆಗಳನ್ನು ಭಾರೀ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.
ತೋಟಗಾರಿಕಾ ಬೆಳೆಗಳು ಯಾವುವು?: ವಿವಿಧ ನಮೂನೆಯ ಹಣ್ಣುಗಳು, ತರಕಾರಿ, ಗೆಡ್ಡೆ, ಮಸಾಲೆ ಬೆಳೆಗಳು, ಹೂ ಮತ್ತು ಗಿಡಮೂಲಿಕೆಗಳು ತಳಿಗಳು ಇದರಲ್ಲಿ ಸೇರಿವೆ. ತೋಟಗಾರಿಕಾ ಬೆಳೆಗಳು ವಿಶೇಷ ವಾಗಿ ಪೌಷ್ಟಿಕಾಂಶ, ಸೌಂದರ್ಯ ವರ್ಧಕ, ಔಷಧ ಕಂಪೆನಿಗಳಿಗೆ ಹೆಚ್ಚು ಮಹತ್ವದ್ದಾಗಿರುತ್ತವೆ.
ಜೈವಿಕ ಬಲವರ್ಧಿತ ತಳಿಗಳು: ಜೈವಿಕ ಬಲವರ್ಧಿತ ಬೆಳೆಗಳಲ್ಲಿನ ಪೋಷಂಕಾಶಗಳನ್ನು ಹೆಚ್ಚಿಸಲಾಗಿರುತ್ತದೆ. ಅಪೌಷ್ಟಿಕಾಂಶ ಕೊರತೆ ನೀಗಿಸುವ ನಿಟ್ಟಿನಲ್ಲಿ ಈ ಬೆಳೆಗಳು ಹೆಚ್ಚು ಪ್ರಾಮುಖ್ಯ ವಹಿಸಲಿವೆ. ಸರಕಾರಿ ಪ್ರಾಯೋಜಿತ ಬಿಸಿಯೂಟ, ಅಂಗನವಾಡಿ ಯೋಜನೆಗಳಿಗೆ ನೆರವು ನೀಡಲಿವೆ ಎಂಬುದು ಪ್ರಧಾನಿ ಅವರ ಆಶಯ.
ಏನಿದು ಯೋಜನೆ?
ಪ್ರಧಾನಿ ಸದಾ ಸುಸ್ಥಿರ ಕೃಷಿ ಹೆಚ್ಚು ಒತ್ತು ನೀಡು ತ್ತಾರೆ. ಈ ತಳಿಗಳು ರೈತರಿಗೆ ಹೆಚ್ಚು ಆದಾಯದ ಜತೆಗೆ ಔದ್ಯೋಗಿಕ ಅವಕಾಶಗಳಿಗೆ ಬಾಗಿಲು ತೆರೆಯಲಿದೆ. ಅದರ ಭಾಗವಾಗಿಯೇ ಅಧಿಕ ಇಳುವರಿ ತಳಿ ಬಿಡುಗಡೆ ಮಾಡಲಾಗುತ್ತಿದೆ.
ಕರ್ನಾಟಕದ ತಳಿಗಳು
ಪುತ್ತೂರಿನಲ್ಲಿರುವ ಗೇರು ಸಂಶೋಧನ ಕೇಂದ್ರ ಅಭಿವೃದ್ಧಿಪಡಿಸಿದ 2 ಗೇರು ತಳಿಗಳು, ಕಾಸರಗೋಡು ಸಿಪಿಸಿಆರ್‌ಐ ಅಭಿವೃದ್ಧಿಪಡಿಸಿದ ತಲಾ ಎರಡು ತೆಂಗು ಮತ್ತು ಕೊಕೊ ತಳಿಗಳು ರವಿವಾರ ಬಿಡುಗಡೆಯಾಗಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.