Mangaluru: ತೊಕ್ಕೊಟ್ಟಿನಲ್ಲಿ ಮತ್ತೆ ರೈಲು ನಿಲ್ಲಲಿ

ಆಸ್ಪತ್ರೆ, ಶಿಕ್ಷ ಣ ಸಂಸ್ಥೆಗಳ ಕೇಂದ್ರಸ್ಥಾನದ ರೈ ಲು ನಿಲ್ದಾಣ ಅಭಿವೃದ್ಧಿ ಬೇಡಿಕೆ

Team Udayavani, Aug 11, 2024, 2:45 PM IST

Mangaluru: ತೊಕ್ಕೊಟ್ಟಿನಲ್ಲಿ ಮತ್ತೆ ರೈಲು ನಿಲ್ಲಲಿ

ಮಹಾನಗರ: ಮಂಗಳೂರು ನಗರದಂತೆ ಅಭಿವೃದ್ಧಿ ಪಥದಲ್ಲಿದ್ದು, ಶಿಕ್ಷಣ, ಆರೋಗ್ಯ ಸಂಸ್ಥೆಗಳ ಕೇಂದ್ರಸ್ಥಾನದಂತೆ ಬೆಳೆಯುತ್ತಿರುವ ತೊಕ್ಕೊಟ್ಟಿನ ರೈಲ್ವೆ ನಿಲ್ದಾ ಣಕ್ಕೆ ಮರುಜೀವ ನೀಡಬೇಕು, ಇಲ್ಲಿ ಎಲ್ಲ ಪ್ರಮುಖ ರೈಲುಗಳಿಗೆ ನಿಲುಗಡೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ತೊಕ್ಕೊಟ್ಟು ಪೇಟೆಯಲ್ಲಿ ದಕ್ಷಿಣ ರೈಲ್ವೇಯ ಪಾಲ್ಘಾಟ್‌ ವಿಭಾಗಕ್ಕೆ ಸೇರಿದ ಸುಮಾರು 100 ವರ್ಷಗಳಷ್ಟು ಹಳೆಯದಾದ ರೈಲು ನಿಲ್ದಾಣವೊಂದಿತ್ತು. ಲೋಕಲ್‌ ರೈಲುಗಳಿಗೆ ನಿಲುಗಡೆ, ಕ್ರಾಸಿಂಗ್‌ ನಿಲುಗಡೆಗಳಿಗೆ ಇಲ್ಲಿ ಅವಕಾಶವಿತ್ತು. 5 ವರ್ಷಗಳ ಹಿಂದೆ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಯಿತು. ಇದೀಗ ಈ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತೆ ನಿಲುಗಡೆಯ ಬೇಡಿಕೆ ಬಲವಾಗಿದೆ.

ಪ್ರಸ್ತುತ ಸೋಮೇಶ್ವರದಲ್ಲಿರುವ ಉಳ್ಳಾಲ ರೈಲು ನಿಲ್ದಾಣದಲ್ಲಿ ವಿವಿಧ ರೈಲುಗಳು ನಿಲ್ಲುತ್ತವೆ. ಆದರೆ ಅದು ಕೇಂದ್ರ ಸ್ಥಾನವಾದ ತೊಕ್ಕೊಟ್ಟಿನಿಂದ ಕೆಲವು ಕಿ.ಮೀ.ಗಳಷ್ಟು ದೂರದಲ್ಲಿದೆ. ಇಲ್ಲಿ ರೈಲಿನಿಂದ ಇಳಿದ ಪ್ರಯಾಣಿಕರು, ತೊಕ್ಕೊಟ್ಟು ವರೆಗೆ ರಿಕ್ಷಾ ಅಥವಾ ಟ್ಯಾಕ್ಸಿ ಬಾಡಿಗೆ ಪಡೆದು ಬರಬೇಕಾದ ಪರಿಸ್ಥಿತಿ ಇದೆ. ಸದ್ಯ ಸೋಮೇಶ್ವರ ಬಿಟ್ಟರೆ ಅನಂತರ ಮಂಗಳೂರು ಸೆಂಟ್ರಲ್‌ ಅಥವಾ ಜಂಕ್ಷನ್‌. ಆದ್ದರಿಂದ ತೊಕ್ಕೊಟ್ಟಿನಲ್ಲಿ ನಿಲ್ದಾಣದ ಅಗತ್ಯವಿದೆ ಎನ್ನುವುದು ಸ್ಥಳೀಯರ ಮಾತು.

ತೊಕ್ಕೊ ಟ್ಟು ನಿಲ್ದಾಣದ ಬಳಿ ಎಲ್ಲ ವ್ಯವಸ್ಥೆ ಇತ್ತು

ತೊಕ್ಕೊಟ್ಟಿನಲ್ಲಿ ಹಿಂದೆರೈಲು ನಿಲ್ದಾಣ ಇದ್ದಾಗ ಐದಾರು ಲೋಕಲ್‌ ರೈಲುಗಳು ನಿಲ್ಲುತ್ತಿದ್ದವು. ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗಕ್ಕೆ ಇದರಿಂದ ಅನುಕೂಲವಾಗಿತ್ತು. ನಿಲ್ದಾಣದ ಪಕ್ಕದಲ್ಲಿಯೇ ರಿಕ್ಷಾ ಸ್ಟ್ಯಾಂಡ್ ಕೂಡಾ ಇತ್ತು, ಆಂಬುಲೆನ್ಸ್‌ಗಳೂ ನಿಲ್ಲುತ್ತಿದ್ದವು. ಇದರಿಂದ ರೈಲಿನಲ್ಲಿ ಬರುವ ರೋಗಿಗಳಿಗೂ ಅನುಕೂಲವಾಗುತಿತ್ತು. ತೊಕ್ಕೊಟ್ಟು ರೈಲ್ವೇ ನಿಲ್ದಾಣಕ್ಕೆ ಉತ್ತಮ ರಸ್ತೆಯೂ ಇದೆ.

ನಿಲ್ದಾಣ ಆರಂಭ ತುರ್ತು ಅಗತ್ಯ

ತೊಕ್ಕೊಟ್ಟು ಪೇಟೆಗೆ ಹೊಂದಿಕೊಂಡಂತೆ ಇದ್ದ ರೈಲು ನಿಲ್ದಾಣ ರದ್ದಾಗಿ ಹಲವು ವರ್ಷಗಳೇ ಕಳೆದಿವೆ. ಸಂಸದರು, ಜನಪ್ರತಿನಿಧಿಗಳು ಈ ಬಗ್ಗೆ ಗಮನಿಸಿ, ರೈಲು ನಿಲ್ದಾಣವನ್ನು ಅಭಿವೃದ್ಧಿ ಪಡಿಸಿದರೆ ಭವಿಷ್ಯದಲ್ಲಿ ಹೆಚ್ಚಿನ ಅನುಕೂಲವಾಗಬಹುದು. ಆದ್ದರಿಂದ ಶೈಕ್ಷಣಿಕ, ವೈದ್ಯಕೀಯ, ವಾಣಿಜ್ಯ, ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿರುವ ತೊಕ್ಕೊಟ್ಟಿನಲ್ಲಿ ರೈಲು ನಿಲ್ದಾಣ ಆರಂಭಿಸುವ ತುರ್ತು ಅಗತ್ಯವಿದೆ.

-ಜಗನ್ನಾಥ್‌ ಪೆರ್ಮನ್ನೂರು ಸ್ಥಳೀಯರು

ಈಗ ಹೇಗಿದೆ ತೊಕ್ಕೊ ಟ್ಟು ಸ್ಟೇಶನ್‌?

ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಪೊದೆಗಳಿಂದ ಆವೃತವಾಗಿದೆ. ಹಿಂದೆ ಫ್ಲಾಟ್‌ಫಾರಂ, ಛಾವಣಿ ಸಹಿತ ಸ್ಟೇಶನ್‌ ಇತ್ತು. ಸ್ಟೇಶನ್‌ ಮಾಸ್ಟರ್‌ ಟಿಕೆಟ್‌ ನೀಡುತ್ತಿದ್ದರು. ನಿಲ್ದಾಣ ರದ್ದು ಮಾಡಿದ ಬಳಿಕ ಇವುಗಳನ್ನು ತೆರವುಗೊಳಿಸಲಾಗಿದ್ದು, ಕಟ್ಟಡ ಪಾಳು ಬಿದ್ದಿದೆ.

ನಿಲ್ದಾಣ ಆರಂಭದಿಂದ ಸಾಕಷ್ಟು ಅನುಕೂಲ ಮಂಗಳೂರು ವಿವಿ, ಯೇನೆಪೊಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನಿಟ್ಟೆ ವೈದ್ಯಕೀಯ ಕಾಲೇಜು, ಫಾದರ್‌ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆ, ಕಣಚೂರು ವೈದ್ಯಕೀಯ ಕಾಲೇಜು, ಅಲೋಶಿಯಸ್‌ ಸಮೂಹ ವಿದ್ಯಾಸಂಸ್ಥೆಗಳು, ಮುಡಿಪುವಿನ ಇನ್ಫೋಸಿಸ್‌ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ, ವಾಣಿಜ್ಯ ಸಂಸ್ಥೆಗಳು, ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಈ ಭಾಗದಲ್ಲಿವೆ. ಕೇರಳ ಸೇರಿ ವಿವಿಧ ಹೊರ ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳು, ಉದ್ಯೋಗಿಗಳು, ರೋಗಿಗಳು, ಪ್ರವಾಸಿಗರಿಗೂ ಇದರಿಂದ ಅನುಕೂಲವಾಗಲಿದೆ ಎನ್ನುವುದು ರೈಲು ನಿಲ್ದಾಣ ಬೇಡಿಕೆದಾರರ ಮಾತು.

– ಭರತ್‌ ಶೆಟ್ಟಿಗಾರ್‌

ಟಾಪ್ ನ್ಯೂಸ್

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

1-delay

Hoax calls; ವಿಮಾನ ಬಳಿಕ, ತಿರುಪತಿ ಹೊಟೇಲ್‌ಗ‌ಳಿಗೆ ಹುಸಿ ಬಾಂಬ್‌ ಬೆದರಿಕೆ!

1-a-kho-kho

Kho Kho; ಹೊಸದಿಲ್ಲಿಯಲ್ಲಿ ಚೊಚ್ಚಲ ಖೋ ಖೋ ವಿಶ್ವಕಪ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Mangaluru: ಜೈನಮಂದಿರದ ಮೂರ್ತಿಗಳ ಚಿನ್ನದ ಸರ ಕಳವು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Surathkal:ಯುವಕನಿಂದ ಬೆದರಿಕೆ,ಆಶ್ಲೀಲ ಮೆಸೇಜ್‌:ಯುವತಿ ಆತ್ಮಹ*ತ್ಯೆಗೆ ಯತ್ನ;ಅಪಾಯದಿಂದ ಪಾರು

Mangaluru: ಅತ್ಯಾ*ಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Mangaluru: ಅತ್ಯಾ*ಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

Mangaluru: ಸೈಟ್‌ ತೋರಿಸುವ ನೆಪದಲ್ಲಿ ಲೈಂಗಿಕ ಕಿರುಕುಳ: ಬಿಲ್ಡರ್‌ ವಿರುದ್ಧ ಮಹಿಳೆ ದೂರು

17(1)

Mangaluru: ವಿಶೇಷ ಮಕ್ಕಳ ಕಂಗಳಲ್ಲಿ ಬಣ್ಣದ ಹಣತೆಗಳ ಕಾಂತಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1-horoscope

Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Hassan: ಮುಂದಿನ ವರ್ಷ 3ನೇ ವಿಶ್ವಯುದ್ಧ ! ಬ್ರಹ್ಮಾಂಡ ಗುರೂಜಿ ಭವಿಷ್ಯ

Ratan TATA (2)

Ratan Tata; ಅಡುಗೆಯವರು, ನಾಯಿಗೂ ವಿಲ್‌ ಬರೆದಿರುವ ಟಾಟಾ!

1-odisha

Cyclone Dana; ಚಂಡಮಾರುತ ಗೆದ್ದ ಒಡಿಶಾ, ಬಂಗಾಲ

1-qwqewew

T20; ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕರ್ನಾಟಕದ ವೈಶಾಖ್‌ ವಿಜಯ್‌ಕುಮಾರ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.