Manichitrathazhu: ರೀ- ರಿಲೀಸ್ ಆಗಲಿದೆ ʼನಾಗವಲ್ಲಿʼ ಕಥೆಯ ʼಮಣಿಚಿತ್ರತಾಳ್ʼ; ಯಾವಾಗ?
Team Udayavani, Aug 11, 2024, 6:21 PM IST
ಕೊಚ್ಚಿ: ರೀ- ರಿಲೀಸ್ ಚಿತ್ರಗಳ ಟ್ರೆಂಡ್ ಸಾಲಿಗೆ ಮಾಲಿವುಡ್ ನ ಸೂಪರ್ ಚಿತ್ರವೊಂದು ಸೇರಿದೆ. 1993ರಲ್ಲಿ ಬಂದ ಮೋಹನ್ ಲಾಲ್, ಸುರೇಶ್ ಗೋಪಿ ಅಭಿನಯದ ಸಿನಿಮಾ ಮತ್ತೆ ಬಿಗ್ ಸ್ಕ್ರೀನ್ ನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
1993 ರಲ್ಲಿ ಮಾಲಿವುಡ್ ನಲ್ಲಿ ಬಂದ ಸೈಕಲಾಜಿಕಲ್ ಹಾರಾರ್ ಥ್ರಿಲ್ಲರ್ ʼ ಮಣಿಚಿತ್ರತಾಳ್ʼ (Manichitrathazhu) ಬಾಕ್ಸ್ ಆಫೀಸ್‌ನಲ್ಲಿ ಅಂದು ಮೋಡಿ ಮಾಡಿತ್ತು. ಇದೀಗ 31 ವರ್ಷದ ಬಳಿಕ ಸಿನಿಮಾ ರೀ- ರಿಲೀಸ್ ಆಗಲಿದೆ.
ಫಾಸಿಲ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಮಾಲಿವುಡ್‌ನಲ್ಲಿ ದೊಡ್ಡ ಹಿಟ್ ಆಗುವುದರ ಜೊತೆಗೆ ಇತರೆ ಭಾಷೆಗೆ ರಿಮೇಕ್ ಆಗಿತ್ತು. ಮೋಹನ್ ಲಾಲ್ (Mohanlal), ಶೋಭನಾ(Shobana), ಸುರೇಶ್ ಗೋಪಿ (Suresh Gopi) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು.
ಶೋಭನಾ ʼಗಂಗಾʼ ಪಾತ್ರದಲ್ಲಿ ʼನಾಗವಲ್ಲಿʼಯಾಗಿ ಕಾಣಿಸಿಕೊಂಡಿದ್ದರು. ಮೋಹನ್ ಲಾಲ್ ಡಾ.ಸನ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
31 ವರ್ಷದ ಬಳಿಕ ʼಮಣಿಚಿತ್ರತಾಳ್ʼ 4K ಡಾಲ್ಬಿ ಅಟ್ಮಾಸ್ ಫಾರ್ಮ್ಯಾಟ್ ನಲ್ಲಿ ರೀ – ರಿಲೀಸ್ ಆಗಲಿದೆ. ಇದೇ ಆಗಸ್ಟ್ 17 ರಂದು ʼಮಣಿಚಿತ್ರತಾಳ್ʼ ತೆರೆ ಕಾಣಲಿದೆ.
ಸಿನಿಮಾದ ರೀ – ರಿಲೀಸ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಚಿತ್ರತಂಡ ಸಿನಿಮಾದ ಸಿಬ್ಬಂದಿಗಾಗಿ ವಿಶೇಷ ಶೋವನ್ನು ಆಯೋಜಿಸಿತು. ಈ ಪ್ರಿಮಿಯರ್ ಶೋಗೆ ಅಮೋಘ ರೆಸ್ಪಾನ್ಸ್ ಸಿಕ್ಕಿದೆ.
4 ಭಾಷೆಗೆ ರಿಮೇಕ್ ಆಗಿತ್ತು ʼʼಮಣಿಚಿತ್ರತಾಳ್ʼ:
2005ರಲ್ಲಿ ಪಿ.ವಾಸು(P.Vasu) ಇದನ್ನು ತಮಿಳಿಗೆ ರಿಮೇಕ್ ಮಾಡಿದ್ದರು. ʼಚಂದ್ರಮುಖಿʼ (Chandramukhi) ಎನ್ನುವ ಟೈಟಲ್ ನಲ್ಲಿ ಈ ಸಿನಿಮಾ ಬಂದಿತ್ತು. ಕನ್ನಡದಲ್ಲಿ ಪಿ.ವಾಸು ಅವರೇ ʼಆಪ್ತಮಿತ್ರʼ ಎನ್ನುವ ಟೈಟಲ್ ನಲ್ಲಿ ಬಂದಿತ್ತು. ವಿಷ್ಣುವರ್ಧನ್, ಸೌಂದರ್ಯ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಬೆಂಗಾಳಿ ಭಾಷೆಯಲ್ಲಿ ʼರಾಜ್‌ಮೊಹೋಲ್ʼ, ಹಿಂದಿ ಭಾಷೆಯಲ್ಲಿ ʼಭೂಲ್ ಭುಲೈಯಾʼ (Bhool Bhulaiyaa) ಟೈಟಲ್ ನಲ್ಲಿ ಬಂದಿತ್ತು. ಅಕ್ಷಯ್ ಕುಮಾರ್ (Akshay Kumar) ವಿದ್ಯಾ ಬಾಲನ್ (Vidya Balan) ಹಿಂದಿಯಲ್ಲಿ ಲೀಡ್ ರೋಲ್ ನಲ್ಲಿ ನಟಿಸಿದ್ದರು. ಈ ಸಿನಿಮಾಗಳ ಸೀಕ್ವೆಲ್ ಕೂಡ ರಿಲೀಸ್ ಆಗಿ ಸದ್ದು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
Malayalam Actor: ಶ್ವಾಸಕೋಶದ ಕಾಯಿಲೆ; ಖ್ಯಾತ ನಟ ಮೇಘನಾಥನ್ ನಿಧನ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.