Kasaragod: ವೈದ್ಯರ ಹನಿಟ್ರ್ಯಾಪ್ ನಡೆಸಿ ಲಕ್ಷಾಂತರ ರೂ. ಲಪಟಾವಣೆ: ಮಹಿಳೆಯ ಸೆರೆ
Team Udayavani, Aug 11, 2024, 7:57 PM IST
ಕಾಸರಗೋಡು: ವಿವಾಹ ಭರವಸೆ ನೀಡಿ ಡಾಕ್ಟರೋರ್ವರನ್ನು ಹನಿ ಟ್ರಾಫಿಕ್ ನಲ್ಲಿ ಸಿಲುಕಿಸಿ ಲಕ್ಷಾಂತರ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯಾದ ಕಾಸರಗೋಡು ನೀಲೇಶ್ವರದ ನಿವಾಸಿ ಇರ್ಷಾನಾ(34) ಳನ್ನು ಕಲ್ಲಿಕೋಟೆ ನಡಕಾವು ಪೊಲೀಸರು ಬಂಧಿಸಿದ್ದಾರೆ.
ವಿವಾಹವಾಗುವುದಾಗಿ ಭರವಸೆ ನೀಡಿ ಸರಕಾರಿ ಸರ್ವೀಸ್ನಿಂದ ನಿವೃತ್ತರಾದ ತಿರುವನಂತಪುರದ ಡಾಕ್ಟರೋರ್ವರು ನೀಡಿದ ದೂರಿನಂತೆ ಆಕೆಯನ್ನು ಬಂಧಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇರ್ಷಾನಾಳ ತಂಡದ ಇತರರ ಬಗ್ಗೆ ಮಾಹಿತಿ ಲಭಿಸಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿ ಇರ್ಷಾನಾಳಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.
ವಿವಾಹ ಭರವಸೆ ನೀಡಿ 5,60,000 ರೂ. ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಸೇವೆಯಿಂದ ನಿವೃತ್ತರಾದ ಡಾಕ್ಟರ್ ವಿವಾಹವಾಗುವುದಾಗಿ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದ್ದರು. ಜಾಹೀರಾತು ದುರ್ಬಳಕೆ ಮಾಡಿ ಈ ತಂಡ ವಂಚಿಸಿದೆ. ಈ ತಂಡದಲ್ಲಿ ಕಾಂಞಂಗಾಡ್ ನಿವಾಸಿಗಳಾದ ರಾಫಿ, ಮಜೀದ್, ಸತ್ತಾರ್ ಒಳಗೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.