TungaBhadra Dam: ಹೊಸ ಗೇಟ್‌ ಅಳವಡಿಕೆಗೆ 6 ದಿನ ಕಾಯಬೇಕು!

ಪ್ರತಿ ದಿನ 10 ಟಿಎಂಸಿ ನೀರು ಹೊರಗೆ ಹೋದರೆ ಆರು ದಿನಕ್ಕೆ 60 ಟಿಎಂಸಿ ನೀರು ಡ್ಯಾಂನಿಂದ ಹೊರಗೆ

Team Udayavani, Aug 12, 2024, 7:15 AM IST

Shivakuamr

ಕೊಪ್ಪಳ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ನ ಚೈನ್‌ ತುಂಡಾಗಿ ಗೇಟ್‌ ಮುರಿದು ಬಿದ್ದು ಭಾರೀ ಅನಾಹುತ ಸಂಭವಿಸಿದೆ. ತುಂಬಿ ತುಳುಕುತ್ತಿರುವ ಡ್ಯಾಂನಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗುತ್ತಿದ್ದು ಅಪಾಯ ಪರಿಸ್ಥಿತಿ ಎದುರಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಅಧಿಕಾರಿಗಳು, ತಜ್ಞರು ಮುಂದಾಗಿರುವ ಬೆನ್ನಲ್ಲೇ, ಹೊಸ ಗೇಟ್‌ ಅಳವಡಿಕೆಗೆ ಕನಿಷ್ಠ ಇನ್ನೂ ಆರು ದಿನ ಕಾಯುವ ಪರಿಸ್ಥಿತಿ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಡ್ಯಾಂನಲ್ಲಿ 100 ಟಿಎಂಸಿ ನೀರು ಸಂಗ್ರಹವಿದೆ. ಆದರೆ 19ನೇ ಗೇಟ್‌ಗೆ ಹೊಸ ಗೇಟ್‌ ಅಳವಡಿಕೆ ಮಾಡಬೇಕೆಂದರೆ ಕನಿಷ್ಠ 20 ಅಡಿಯಷ್ಟು ನೀರಿನ ಮಟ್ಟವನ್ನು ಕೆಳಗೆ ಇಳಿಸಬೇಕಾಗಿದೆ. ಅಂದರೆ ಡ್ಯಾಂನಲ್ಲಿ 60 ಟಿಎಂಸಿ ನೀರನ್ನು ನದಿಪಾತ್ರಕ್ಕೆ ಹೊರ ಬಿಡಬೇಕಿದೆ. ಪ್ರತಿ ದಿನವು 10 ಟಿಎಂಸಿ ನೀರು ನದಿಪಾತ್ರದಿಂದ ಹೊರಗೆ ಹೋದರೆ ಆರು ದಿನಕ್ಕೆ 60 ಟಿಎಂಸಿ ನೀರು ಡ್ಯಾಂನಿಂದ ಹೊರಗೆ ನೀರು ಹರಿಯಲಿದೆ. ಆರನೇ ದಿನದ ಬಳಿಕ ಹೊಸ ಗೇಟ್‌ ಅಳವಡಿಕೆಯ ಸ್ಥಿತಿಗತಿ ಏನಾಗಿದೆ ಎಂದು ನೋಡಲು ಸಾಧ್ಯವಾಗಲಿದೆ. ಅಂದರೆ ಹೊಸ ಗೇಟ್‌ ಅಳವಡಿಕೆಗೆ ಕನಿಷ್ಠ ಇನ್ನೂ ಆರು ದಿನ ಕಾಯುವ ಪರಿಸ್ಥಿತಿ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೊಸ ಗೇಟ್‌ ಅಳವಡಿಕೆ
ಹೊಸ ಗೇಟ್‌ ಅಳವಡಿಕೆಗೆ ಈಗಾ ಗಲೇ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತುಂಗಭದ್ರಾ ಮಂಡಳಿಗೆ ಸೂಚನೆ ನೀಡಿದ್ದು, ಬೋರ್ಡ್‌ ಸಹ ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್‌ ಕಂಪೆನಿಗೆ ನಿರ್ಮಾಣದ ಹೊಣೆ ನೀಡಿದೆ. ಒಂದು ಗೇಟ್‌ 24 ಅಡಿ ಅಗಲ, 21 ಅಡಿ ಎತ್ತರ ಹಾಗೂ 48 ಟನ್‌ ತೂಕ ಹೊಂದಿದೆ.

ಇಂದು ಡ್ಯಾಂಗೆ ಸಿಎಂ ಭೇಟಿ
ಕ್ರಸ್ಟ್‌ಗೇಟ್‌ ತುಂಡಾದ ಘಟನೆ ಕುರಿತಂತೆ ಜಲ ಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ತುಂಗಭದ್ರಾ ಸ್ಟೀಲ್ಸ್‌ಗೆ ಹೊಸ ಗೇಟ್‌ ತಯಾರಿ ಉಸ್ತುವಾರಿ
ತುಂಗಭದ್ರಾ ಜಲಾಶಯವನ್ನು 1945ರ ಕಾಲಘಟ್ಟದಲ್ಲಿ ನಿರ್ಮಾಣ ಮಾಡುವ ವೇಳೆ ತುಂಗಭದ್ರಾ ಸ್ಟೀಲ್‌ ಕಂಪೆನಿಯೇ ಎಲ್ಲ ಉತ್ಪಾದಕಗಳನ್ನು ಪೂರೈಕೆ ಮಾಡಿದ್ದು, ಡ್ಯಾಂನ ಸಂಪೂರ್ಣ ನಿರ್ಮಾಣ ಜವಾಬ್ದಾರಿ ಇವರಿಗೆ ಹಿಂದೆ ವಹಿಸಿತ್ತು. ಈಗಲೂ ಸಹಿತ ಡ್ಯಾಂ ಗೇಟ್‌ ಮುರಿದಿದ್ದು, ಅವರ ಉಸ್ತುವಾರಿಯಲ್ಲಿ ಹೊಸ ಗೇಟ್‌ ನಿರ್ಮಾಣಕ್ಕೆ ಅಣಿ ಮಾಡಲಾಗಿದೆ.

ಮುಂಬಯಿ, ಹೈದರಾಬಾದ್‌ ತಜ್ಞರ ಜತೆ ಚರ್ಚೆ
ತುಂಗಭದ್ರಾ ಡ್ಯಾಂ ಗೇಟ್‌ ಮುರಿದ ಬೆನ್ನಲ್ಲೇ ನೀರಾವರಿ ವಿಭಾಗದಲ್ಲಿ ಅತ್ಯಂತ ನುರಿತ ನೀರಾವರಿ ತಜ್ಞರೊಂದಿಗೆ ಟಿಬಿ ಬೋರ್ಡ್‌ ಅಧಿಕಾರಿಗಳು ಚರ್ಚೆ ನಡೆಸಿದ್ದು, ಹೈದರಾಬಾದ್‌ ಹಾಗೂ ಮುಂಬಯಿ ತಜ್ಞರು ಕೆಲವೊಂದು ಸಲಹೆಗಳನ್ನು ನೀಡಿರುವ ಮಾಹಿತಿ ಲಭ್ಯವಾಗಿದೆ. ಇದಲ್ಲದೇ ಕೆಲವು ಪರಿಣತರನ್ನು ಡ್ಯಾಂನ ಸ್ಥಳಕ್ಕೆ ಕರೆಯಿಸಲಾಗಿದೆ.

3.5 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಏನೆಲ್ಲ ಅಪಾಯ?
ತುಂಗಭದ್ರಾ ಜಲಾಶಯದಿಂದ ನದಿಪಾತ್ರಕ್ಕೆ 3.5 ಲಕ್ಷ ಕ್ಯೂಸೆಕ್‌ ನೀರು ಬಿಟ್ಟರೆ ಹಂಪಿಯ ಕೆಲವು ಸ್ಮಾರಕಗಳು ಮುಳುಗಡೆಯಾಗಿ, ಗದ್ದೆಗಳಿಗೆ ಹಾಗೂ ಕೆಲವು ಹಳ್ಳಿಗಳಿಗೆ ನೀರು ನುಗ್ಗಿ ತೊಂದರೆ ಎದುರಾಗಲಿದೆ. ಪ್ರಸ್ತುತ 1 ಲಕ್ಷ ಕ್ಯೂಸೆಕ್‌ ನೀರು ಹರಿಯ ಬಿಡಲಾಗಿದೆ. 2.25 ಲಕ್ಷ ಕ್ಯೂಸೆಕ್‌ ನೀರು ನದಿಗೆ ಹರಿಬಿಟ್ಟರೆ ನದಿಯ ಕೆಳ ಭಾಗದ ಕಾರಟಗಿ ತಾಲೂಕಿನ ಉಳೆಬೆನ್ನೂರು ಸೇರಿ ಇತರ ಗ್ರಾಮಗಳ ಗದ್ದೆಗೆ ನೀರು ನುಗ್ಗಲಿದೆ.

ಆನೆಗೊಂದಿಯ ಸಾಲು ಮಂಟಪ, ಕಂಪ್ಲಿ ಸಂಪೂರ್ಣ ಸೇತುವೆ ಮುಳುಗಡೆಯಾಗಲಿದೆ. ಇನ್ನು 3.50 ಲಕ್ಷ ಕ್ಯೂಸೆಕ್‌ ನೀರು ನದಿಪಾತ್ರಕ್ಕೆ ಹರಿಬಿಟ್ಟರೆ ಹಂಪಿಯ ಸ್ಮಾರಕಗಳು ಮುಳುಗಡೆಯಾಗಲಿವೆ. ನದಿಪಾತ್ರದ ಋಷಿಮುಖ ಪರ್ವತ, ನವವೃಂದಾವನ ಸೇರಿದಂತೆ ಇತರೆ ಸ್ಮಾರಕಗಳು ಸಂಪೂರ್ಣ ಮುಳುಗಡೆಯಾಗಿ, ಕೆಲವು ಹಳ್ಳಿಗಳಿಗೆ ಅಪಾಯ ಎದುರಾಗಲಿದೆ.

“ರಾಜ್ಯದಲ್ಲಿರುವ ಕಾಂಗ್ರೆಸ್‌ ಸರಕಾರದ ನಿರ್ಲಕ್ಷ್ಯ ದಿಂದ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್‌ ಚೈನ್‌ ಲಿಂಕ್‌ ಮುರಿದು ಬಿದ್ದಿದೆ. ಡ್ಯಾಂನ ಹೊರಹರಿವು ಏರಿಕೆಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದರಿಂದ ನದಿ ಪಾತ್ರದ ರೈತರನ್ನು ಚಿಂತೆಗೀಡು ಮಾಡಿದೆ.” -ಆರ್‌.ಅಶೋಕ್‌ , ವಿಧಾನಸಭೆ ವಿಪಕ್ಷ ನಾಯಕ

“ಡ್ಯಾಂನಲ್ಲಿ ಅವಘಡವಾದ್ದರಿಂದ ಈ ಬಾರಿ ರೈತರಿಗೆ ತೊಂದರೆ ಎದುರಾಗಿದೆ. 60 ಟಿಎಂಸಿ ನೀರು ಹೊರ ಹೋದರೆ 40 ಟಿಎಂಸಿ ನೀರು ಉಳಿಯಲಿದೆ. ಇನ್ನೂ ಒಳ ಹರಿವಿನ ಪ್ರಮಾಣವಿದ್ದು, ಅಷ್ಟರೊಳಗೆ ಹೊಸ ಗೇಟ್‌ ಅಳವಡಿಕೆ ಮಾಡಿದರೆ ಮೊದಲ ಬೆಳೆಗೆ ನೀರು ಲಭಿಸುವ ವಿಶ್ವಾಸವಿದೆ.”  -ಶಿವರಾಜ ತಂಗಡಗಿ, ಸಚಿವ

“ಈಗಾಗಲೇ ಹೊಸ ಗೇಟ್‌ ಸಿದ್ಧತೆಗೆ ಸರಕಾರದಿಂದ ಆದೇಶ ಮಾಡಲಾಗಿದೆ. ಗೇಟ್‌ ನಿರ್ಮಾಣಕ್ಕೆ ಸಮಯ ಬೇಕು ಜತೆಗೆ ಡ್ಯಾಂನಲ್ಲಿ 60 ಟಿಎಂಸಿ ನೀರು ಖಾಲಿಯಾಗಬೇಕು. ಆಗ ಮಾತ್ರ ಹೊಸ ಗೇಟ್‌ ಅಳವಡಿಕೆ ಮಾಡಲು ಸಾಧ್ಯವಿದೆ.”  – ಹಸನ್‌ ಸಾಬ ದೋಟಿಹಾಳ , ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

CM-Siddu-High-Court

MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ

Bidar-Solha-kamb

Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.