Paris Olympics: ಸೋತವರನ್ನೂ ಗೌರವಿಸಿ, ಹುರಿದುಂಬಿಸಿ: ತಜ್ಞ ಕೋಚ್‌ ಸಲಹೆ

ಪದಕ ಗೆಲುವಷ್ಟೇ ಅಲ್ಲ, 4ನೇ ಸ್ಥಾನ ಪಡೆಯುವುದೂ ಸಾಧನೆಯೇ: ಸಾಯ್‌ ಮಾಜಿ ಮುಖ್ಯ ಕೋಚ್‌ ಡಾ.ಲಕ್ಷ್ಮೀಶ

Team Udayavani, Aug 12, 2024, 6:34 AM IST

Paris

ಬೆಂಗಳೂರು: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಯ ಬಗ್ಗೆ ಭಾರತ ಕ್ರೀಡಾ ಪ್ರಾಧಿಕಾರದ ಮಾಜಿ ಮುಖ್ಯ ಕೋಚ್‌ ಡಾ| ಲಕ್ಷ್ಮೀಶ.ವೈ.ಎಸ್‌. ಅವರು ಮೆಚ್ಚುಗೆ ವ್ಯಕ್ತಪಡಿಸಿ ದ್ದಾರೆ. ಕಳೆದ ಬಾರಿಗಿಂತ ಪದಕಗಳ ಸಂಖ್ಯೆ ಕಡಿಮೆ ಯಾದರೂ ಸಹ ಭಾರತದ ಸ್ಪರ್ಧಿಗಳು ವಿಶ್ವದ ಗಮನ ಸೆಳೆದಿದ್ದಾರೆ ಎಂದು ಅವರು ಹೇಳಿದ್ದಾರೆ.

ಪ್ಯಾರಿಸ್‌ ಭೇಟಿ ಬಳಿಕ “ಉದಯವಾಣಿ’ಯ ಜೊತೆ ಮಾತನಾಡಿದ ಅವರು, ಕ್ರೀಡೆಯ ಪ್ರಮುಖ ಉದ್ದೇಶವೇ ಆರೋಗ್ಯ ಎಂಬುದಾಗಿದೆ. ಒಲಿಂಪಿಕ್ಸ್‌ ನ ಧ್ಯೇಯವಾಕ್ಯ ಸಹ ಇದೇ ಆಗಿದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಿದ್ದರೆ, ಕ್ರೀಡೆ ಗಳಲ್ಲಿ ಭಾಗಿಯಾಗಬೇಕು. ಇವರೆಡೂ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಇವುಗಳನ್ನು ಸಾಧಿ ಸಲು ಎಲ್ಲರಿಗೂ ಅನುಕೂಲವಾಗುವಂತೆ ವ್ಯವಸ್ಥೆ ನಿರ್ಮಾಣವಾಗಬೇಕು ಎಂದು ಅವರು ಅಭಿ ಪ್ರಾಯ ವ್ಯಕ್ತಪಡಿಸಿದರು.

ಪದಕವಷ್ಟೇ ಗೆಲುವಲ್ಲ:
ಒಲಿಂಪಿಕ್ಸ್‌ ಕ್ರೀಡಾಕೂಟ ಗಳಲ್ಲಿ ಪದಕ ಗೆಲ್ಲುವುದು ವಿಶ್ವದ 2 ಕೋಟಿ ಕ್ರೀಡಾ ಪಟುಗಳದ್ದೂ ಗುರಿಯಾಗಿರುತ್ತದೆ. ಹೀಗಾಗಿ ಪದಕ ಗೆದ್ದವರನ್ನಷ್ಟೇ ಸಂಭ್ರಮಿಸಿದರೆ, ಉಳಿದವರಿಗೆ ಆತ್ಮ ವಿಶ್ವಾಸವನ್ನು ಕುಂದಿಸಿದಂತಾ­ಗುತ್ತದೆ. ಕ್ರೀಡೆಯಲ್ಲಿ ಪ್ರಮುಖವಾಗಿರುವುದು ಭಾಗವಹಿಸುವಿಕೆ; ಭಾಗಿ ಯಾದವರೆಲ್ಲರಿಗೂ ಗೌರವ ಸಿಗಬೇಕು ಎಂದರು.

ಹೆಚ್ಚೆಚ್ಚು ಭಾಗಿ ಆಗಲಿ:
ಭಾರತದಲ್ಲಿ ಪ್ರತಿಭೆ ಇರುವವರಿಗೇನೂ ಕಡಿಮೆ ಇಲ್ಲ. ಆದರೆ ಇವರನ್ನು ಗುರುತಿಸುವ ಸರಿಯಾದ ವ್ಯವಸ್ಥೆ ರೂಪುಗೊಳ್ಳ ಬೇಕು. ಇವರಿಗೆ ಮುಖ್ಯವಾಗಿ ಗಟ್ಟಿಯಾದ ತಳ ಪಾಯವನ್ನು ರೂಪಿಸಿಕೊಡಬೇಕು. ಪದಕ ಕಡಿಮೆ ಯಾದ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಆದರೆ ಭಾರತ 16 ಕ್ರೀಡೆಗಳಲ್ಲಿ ಮಾತ್ರ ಈ ಬಾರಿ ಭಾಗಿ ಯಾಗಿದೆ. ಎಷ್ಟೋ ಕ್ರೀಡೆಗಳಲ್ಲಿ ಭಾರತಕ್ಕೆ ಅರ್ಹತೆ ಸಿಕ್ಕಿಲ್ಲ. ಇಂತಹ ಸಮಸ್ಯೆಗಳನ್ನು ತೊಡೆಯುವತ್ತ ಗಮನ ಹರಿಸಬೇಕು. ಭಾಗವಹಿ ಸುವವರ ಸಂಖ್ಯೆ ಹೆಚ್ಚಾದರೆ ಪದಕದ ಸಂಖ್ಯೆ ಹೆಚ್ಚಾಗಲಿದೆ ಎಂದರು.

ಕ್ರೀಡಾ ಜಾಗೃತಿ ಅಗತ್ಯ:
ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಬೇಕು, ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂಬ ಅರಿವನ್ನು ಸಮಾಜದಲ್ಲಿ ಮೂಡಿಸುವಲ್ಲಿ ವ್ಯವಸ್ಥೆ ವಿಫ‌ಲವಾಗಿದೆ. ಮಕ್ಕಳು ಹೆಚ್ಚು ಅಂಕ ಗಳಿಸಿ, ಸಾಫ್ಟ್ ವೇರ್‌ ಹುದ್ದೆ ಸೇರಲಿ ಎಂದೇ ಬಹುತೇಕರು ಬಯಸುತ್ತಾರೆ. ಈ ಬಗ್ಗೆ ಅರಿವನ್ನು ಹೆಚ್ಚು ಮಾಡಿದರೆ ಕ್ರೀಡಾಳುಗಳ ಸಂಖ್ಯೆಯೂ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಪ್ಪು ಕಲ್ಪನೆ ದೂರವಾಗಬೇಕು:
ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದು ಎಂಬ ಅರಿವು ಭಾರತದಲ್ಲಿ ತುಂಬಾ ಜನರಿಗಿಲ್ಲ. ಕ್ರೀಡೆಯಲ್ಲಿ ಮಹತ್ತರವಾದುದನ್ನು ಸಾಧಿಸಲು ಸಾಧ್ಯವಿಲ್ಲ. ಇದರ ಬದಲು ಇತರೆ ಕ್ಷೇತ್ರಗಳನ್ನು ಆಯ್ದು ಕೊಂಡರೆ ಉತ್ತಮ ಎಂಬ ಭಾವನೆ ಬಹಳಷ್ಟು ಜನರಲ್ಲಿದೆ. ಇದು ಬದಲಾಗಬೇಕು. ಆಟವಾಡಿ ಕೈ ಕಾಲು ಮುರಿದುಕೊಂಡರೆ ಜೀವನ ಕಷ್ಟವಾಗುತ್ತದೆ ಎಂಬ ಭಯ ಪೋಷಕರನ್ನು ಕಾಡುತ್ತಿದೆ. ಇದನ್ನು ಬಗೆಹರಿಸುವಂತಹ ವ್ಯವಸ್ಥೆ ರೂಪುಗೊಂಡರೆ ಕ್ರೀಡಾಪಟುಗಳ ಸಂಖ್ಯೆ ಹೆಚ್ಚುತ್ತದೆ ಎಂದರು.

ಆಟ ಕಡ್ಡಾಯ ಮಾಡಿ:
ಈ ಮೊದಲಿಗೆ ಹೋಲಿಸಿದರೆ ಭಾರತದಲ್ಲಿ ಕ್ರೀಡೆಗೆ ಪ್ರೋತ್ಸಾಹ ನೀಡುವ ವ್ಯವಸ್ಥೆ ಸಾಕಷ್ಟು ಸುಧಾರಿಸಿದೆ. ಖೇಲೋ ಇಂಡಿಯಾದಂತಹ ಕಾರ್ಯಕ್ರಮಗಳನ್ನು ಹಲವು ಕ್ರೀಡಾಪಟುಗಳಿಗೆ ಅವಕಾಶವನ್ನು ಒದಗಿಸಿದೆ. ಆದರೆ ಪ್ರತಿಮಗುವಿಗೂ ಆಟಕ್ಕೆ ಸಮಯ ಮತ್ತು ಅವಕಾಶ ಒದಗಿಸುವಂತಹ ನೀತಿಗಳನ್ನು ರೂಪಿಸುವುದು ಬಾಕಿಯಿದೆ. ಶಾಲಾ ಮಟ್ಟ ದಿಂದಲೇ ಇವುಗಳನ್ನು ಕಡ್ಡಾಯವಾಗಿ ಜಾರಿ ಮಾಡಬೇಕಿದೆ ಎಂದು ಹೇಳಿದರು.

 

– ಗಣೇಶ್‌ ಪ್ರಸಾದ್‌

ಟಾಪ್ ನ್ಯೂಸ್

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್‌ ಟೆಸ್ಟ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Suspend

Nagamangala ಗಲಭೆ: ಡಿವೈಎಸ್ಪಿ ಅಮಾನತು

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.