Kerala ಮುಲ್ಲಪೆರಿಯಾರ್ ಅಣೆಕಟ್ಟು ಸುರಕ್ಷತೆ ಆತಂಕ: ಕೇಂದ್ರದೊಂದಿಗೆ ಕೇರಳ ಸರಕಾರ ಚರ್ಚೆ
125 ವರ್ಷಗಳಷ್ಟು ಹಳೆಯದಾದ ಅಣೆಕಟ್ಟು... ಹೊಸ ಅಣೆಕಟ್ಟಿನ ಬೇಡಿಕೆ...
Team Udayavani, Aug 12, 2024, 6:01 PM IST
ಇಡುಕ್ಕಿ (ಕೇರಳ): ಇತ್ತೀಚೆಗೆ ವಯನಾಡಿನಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದ ನಂತರ ಪರಿಶೀಲನೆಗೆ ಒಳಪಟ್ಟಿರುವ ಮುಲ್ಲಪೆರಿಯಾರ್ ಅಣೆಕಟ್ಟಿನ ಸುತ್ತಮುತ್ತಲಿನ ಸುರಕ್ಷತಾ ಕಾಳಜಿಗಳ ಬಗ್ಗೆ ಸಾರ್ವಜನಿಕರೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುವುದಾಗಿ ಕೇರಳ ಸರಕಾರ ಸೋಮವಾರ ಸಾರ್ವಜನಿಕರಿಗೆ ಭರವಸೆ ನೀಡಿದೆ.
ಕಲೆಕ್ಟರೇಟ್ ನಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ರಾಜ್ಯ ನೀರಾವರಿ ಸಚಿವ ರೋಶಿ ಆಗಸ್ಟಿನ್ ಅವರು ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಆತಂಕವನ್ನು ಒಪ್ಪಿಕೊಂಡಿದ್ದಾರೆ. ಮತ್ತು ಅವರ ಸಮಸ್ಯೆಗಳನ್ನು ನಿವಾರಿಸುವ ಕ್ರಮಗಳ ಭಾಗವಾಗಿ ಕೇಂದ್ರ ಸರ್ಕಾರದೊಂದಿಗೆ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳುವುದಾಗಿ ವಾಗ್ದಾನ ನೀಡಿದ್ದಾರೆ.
125 ವರ್ಷಗಳಷ್ಟು ಹಳೆಯದಾದ ಅಣೆಕಟ್ಟಿನ ಸುರಕ್ಷತೆ ಮತ್ತು ಸ್ಥಿರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿರುವ ಇತ್ತೀಚಿನ ಭೂಕುಸಿತದ ನಂತರದ ಪರಿಣಾಮಗಳನ್ನು ಪರಿಹರಿಸಲು ರಾಜ್ಯದ ಪ್ರಯತ್ನಗಳ ನಡುವೆ ಸಭೆಯನ್ನು ಕರೆಯಲಾಗಿತ್ತು. ಇದೇ ವೇಳೆ ಮುಲ್ಲಪೆರಿಯಾರ್ ಸಮರಸಮಿತಿ ಆಂದೋಲನದ ಯೋಜನೆಗಳನ್ನೂ ಪ್ರಕಟಿಸಿದೆ.
‘ಮುಲ್ಲಪೆರಿಯಾರ್‌ನಲ್ಲಿ ಹೊಸ ಅಣೆಕಟ್ಟಿನ ಕೇರಳದ ಬೇಡಿಕೆಯು ಪಕ್ಷ ರಾಜಕೀಯವನ್ನು ಮೀರಿ ಏಕೀಕೃತವಾಗಿದೆ. ನಾವು ಒಮ್ಮೆ 90-100 ಮಿಮೀ ಮಳೆಯನ್ನು ಗಮನಾರ್ಹವೆಂದು ಪರಿಗಣಿಸಿದ್ದೇವೆ, ಆದರೆ ಈಗ ಅದು 200 ಮಿಮೀ, 300 ಮಿಮೀ. 2018 ರ ವಿನಾಶಕಾರಿ ಪ್ರವಾಹವನ್ನು ನಾವೆಲ್ಲರೂ ನೋಡಿದ್ದೇವೆ. ಬದಲಾಗುತ್ತಿರುವ ಹವಾಮಾನದ ಮಾದರಿಗಳನ್ನು ಗಮನಿಸಿದರೆ, ಅಂತಹ ಸಂದರ್ಭಗಳನ್ನು ಮುಂದಾಲೋಚನೆ ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಮತ್ತು ಹೊಸ ಅಣೆಕಟ್ಟಿನ ಬಲವರ್ಧಿತ ಬೇಡಿಕೆಯನ್ನು ಕೇಂದ್ರ ಸರಕಾರದ ಗಮನಕ್ಕೆ ತರಲು, ನಮ್ಮ ಸಂಸದರು ಹೆಚ್ಚು ಜಾಗರೂಕರಾಗಿದ್ದಾರೆ” ಎಂದು ಸಚಿವ ರೋಶಿ ಆಗಸ್ಟಿನ್ ಹೇಳಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಸ್ತುತ ತಮಿಳುನಾಡು ಮತ್ತು ಕೇರಳ ನಡುವೆ ಪ್ರಕರಣ ಬಾಕಿ ಇದೆ.ಕೇರಳವು ತಮಿಳುನಾಡಿನೊಂದಿಗೆ ಎಂದಿಗೂ ದ್ವೇಷದ ಮನಸ್ಥಿತಿಯನ್ನು ಹೊಂದದ ರಾಜ್ಯವಾಗಿದೆ. ಸುಪ್ರೀಂ ಕೋರ್ಟ್‌ನಿಂದ ಶೀಘ್ರದಲ್ಲೇ ಸಕಾರಾತ್ಮಕ ತೀರ್ಪು ಬರುವ ಭರವಸೆ ಇದೆ.ನ್ಯಾಯಾಲಯದ ಹೊರಗೆ ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವ ಸಾಧ್ಯತೆಯನ್ನು ರಾಜ್ಯ ಸರ್ಕಾರವೂ ಅನ್ವೇಷಿಸುತ್ತದೆ ಎಂದು ಸಚಿವರು ಹೇಳಿದರು.
“ತಮಿಳುನಾಡಿಗೆ ಸಾಕಷ್ಟು ನೀರು ಸರಬರಾಜು ಮತ್ತು ಕೇರಳದ ಜನರ ಸುರಕ್ಷತೆಯನ್ನು ಖಚಿತಪಡಿಸುವುದು ಸರ್ಕಾರದ ಗುರಿಯಾಗಿದೆ.ಈ ಎರಡು ರಾಜ್ಯಗಳ ಜನರು ಪರಸ್ಪರ ಬೆರೆತು ಬದುಕುತ್ತಿದ್ದಾರೆ. ವ್ಯಾಪಾರ, ಜೀವನೋಪಾಯ ಮತ್ತು ಜೀವನವನ್ನು ಎರಡು ರಾಜ್ಯಗಳ ಜನರು, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ ಹಂಚಿಕೊಳ್ಳುತ್ತಾರೆ ”ಎಂದು ಸಚಿವ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.