ODI Worldcup ಫೈನಲ್ ಬ್ಯಾಟ್ಗೆ ಮಾರ್ನಸ್ ಲಬುಶೇನ್ ವಿದಾಯ!
Team Udayavani, Aug 12, 2024, 11:15 PM IST
ಮೆಲ್ಬರ್ನ್: ಆಸ್ಟ್ರೇಲಿಯದ ಕ್ರಿಕೆಟಿಗ ಮಾರ್ನಸ್ ಲಬುಶೇನ್ ಕಳೆದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಬಳಸಿದ ಬ್ಯಾಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದನ್ನವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಬ್ಯಾಟ್ನ ಚಿತ್ರವನ್ನೂ ಹಾಕಿದ್ದಾರೆ.
2023ರ ನ. 19ರಂದು ಆತಿಥೇಯ ಭಾರತದ ವಿರುದ್ಧ ಅಹ್ಮದಾಬಾದ್ನಲ್ಲಿ ಆಡಲಾದ ಫೈನಲ್ನಲ್ಲಿ ಮಾರ್ನಸ್ ಲಬುಶೇನ್ ಈ ಬ್ಯಾಟ್ ನೆರವಿನಿಂದ 58 ರನ್ ಹೊಡೆದಿದ್ದರು. 110 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಒಳಗೊಂಡಿತ್ತು. ಆಸ್ಟ್ರೇಲಿಯ 6ನೇ ವಿಶ್ವಕಪ್ ಗೆಲ್ಲುವಲ್ಲಿ ಲಬುಶೇನ್ ಕೊಡುಗೆಯೂ ದೊಡ್ಡದಿತ್ತು.
ಆದರೀಗ ಈ ಬ್ಯಾಟ್ನ ಸ್ಥಿತಿ ಹದಗೆಟ್ಟಿದ್ದು, ಮೇಲ್ಭಾಗ ಕಿತ್ತು ಹೋಗಲಾರಂಭಿಸಿದೆ. ಹೀಗಾಗಿ ಈ ಬ್ಯಾಟನ್ನು ಸವಿನೆನಪಿಗಾಗಿ ಜೋಪಾನವಾಗಿ ಕಾದಿರಿಸುವುದು ಲಬುಶೇನ್ ಉದ್ದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.