![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 13, 2024, 7:15 AM IST
ಹೊಸದಿಲ್ಲಿ: ಪ್ರಸ್ತುತ ಸಾಲಿನ ಶಿಕ್ಷಣ ಸಂಸ್ಥೆಗಳ (ಎನ್‌ಐಆರ್‌ಎಫ್ -ನ್ಯಾಶನಲ್ ಇನ್‌ಸ್ಟಿಟ್ಯೂಶನಲ್ ರ್‍ಯಾಂಕಿಂಗ್ ಫ್ರೇಮ್ ವರ್ಕ್) ರ್‍ಯಾಂಕಿಂಗ್ ಸೋಮವಾರ ಬಿಡುಗಡೆಗೊಂಡಿದ್ದು, ಸತತ 9ನೇ ಬಾರಿಯೂ ಬೆಂಗಳೂರಿನ ಐಐಎಸ್‌ಸಿ ನಂ. 1 ವಿ.ವಿ. ಆಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಈ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ದೇಶದ ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿಯೂ 2ನೇ ಸ್ಥಾನ ಬೆಂಗಳೂರಿನ ಐಐಎಸ್‌ಸಿಗೆ ಸಂದಿದೆ. ಸತತ 6ನೇ ವರ್ಷ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಐಐಟಿ ಮದ್ರಾಸ್ ಉಳಿಸಿಕೊಂಡಿದೆ. ಐಐಟಿ ಬಾಂಬೆಗೆ 3ನೇ ಸ್ಥಾನ. ಐಐಟಿ ದಿಲ್ಲಿ, ಐಐಟಿ ಕಾನ್ಪುರ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದುಕೊಂಡಿವೆ.
ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಜೆಎನ್‌ಯು 2ನೇ ಸ್ಥಾನ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿ.ವಿ.ಯು 3ನೇ ಸ್ಥಾನವನ್ನು ಪಡೆದುಕೊಂಡಿವೆ. ಒಟ್ಟು 16 ವಿಭಾಗಗಳಲ್ಲಿ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ರ್‍ಯಾಂಕಿಂಗ್ ಪ್ರಕಟಿಸಲಾಗಿದ್ದು, ಈ ಪೈಕಿ 14 ವಿಭಾಗಗಳಲ್ಲಿ ಕರ್ನಾಟಕದ 76 ಶಿಕ್ಷಣ ಸಂಸ್ಥೆಗಳು ವಿವಿಧ ಶ್ರೇಯಾಂಕ ಗಳಿಸಿಕೊಂಡಿವೆ. ಸಂಶೋಧನ ವಿಭಾಗದಲ್ಲಿಯೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ -ಬೆಂಗಳೂರು ಅಗ್ರ ರ್‍ಯಾಂಕಿಂಗ್ ಪಡೆದುಕೊಂಡಿದೆ.
ಜತೆಗೆ ನಾವೀನ್ಯತೆ ವಿಭಾಗದಲ್ಲಿಯೂ ಐಐಎಸ್‌ಸಿ -ಬೆಂಗಳೂರು 4ನೇ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ ಮಣಿಪಾಲ ಸಮೂಹದ 11 ಶಿಕ್ಷಣ ಸಂಸ್ಥೆಗಳಿಗೆ 9 ವಿಭಾಗದಲ್ಲಿ ವಿವಿಧ ರ್‍ಯಾಂಕಿಂಗ್ ದೊರೆತಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.