Vitla: ಸಿಬಂದಿಯಿಲ್ಲದೆ ಕಚೇರಿಗೆ ಬೀಗ: ಗ್ರಾಹಕರು ತಬ್ಬಿಬ್ಬು

ವಿಟ್ಲ ದೂರವಾಣಿ ವಿನಿಮಯ ಕೇಂದ್ರ: ಸಿಬಂದಿ ಕೊರತೆ, ಸಮಸ್ಯೆ ಆಲಿಸುವವರಿಲ್ಲ

Team Udayavani, Aug 13, 2024, 1:21 PM IST

Vitla: ಸಿಬಂದಿಯಿಲ್ಲದೆ ಕಚೇರಿಗೆ ಬೀಗ: ಗ್ರಾಹಕರು ತಬ್ಬಿಬ್ಬು

ವಿಟ್ಲ: ವಿಟ್ಲ ದೂರವಾಣಿ ವಿನಿಮಯ ಕೇಂದ್ರಕ್ಕೆ ಸೋಮವಾರ ಬೆಳಗ್ಗೆ ಸೇವೆಗಾಗಿ ತೆರಳಿದ ಗ್ರಾಹಕರು ತಬ್ಬಿಬ್ಟಾಗಿದ್ದಾರೆ. ಕಾರಣ ದೂರವಾಣಿ ಕೇಂದ್ರದ ಬಾಗಿಲು ತೆರೆಯುವ ಸಮಯವಾದರೂ ತೆರೆಯದೇ ಇರುವುದು. ವಿಟ್ಲದ ಪ್ರಮುಖ ಕೇಂದ್ರದಲ್ಲಿ ಸಿಬಂದಿ ತಡವಾಗಿಯಾದರೂ ಬರಬಹುದು ಎಂಬ ನಂಬಿಕೆಯಿಂದ ಕಾದ ಗ್ರಾಹಕರು ಕೊನೆಗೂ ಯಾವುದೇ ಕಾರ್ಯ ಪೂರೈಸಲಾಗದೇ ನಿರಾಸೆಯಿಂದ ಹಿಂದಿರುಗಬೇಕಾಯಿತು.

ದೂರವಾಣಿ ಕೇಂದ್ರದಲ್ಲಿ ಜೆಟಿಒ ಇಲ್ಲ. ಬಂಟ್ವಾಳ ಜೆಟಿಒ ಅವರಿಗೆ ಚಾರ್ಜ್‌ ಇದೆ ಮತ್ತು ಒಬ್ಬರು ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಜೆಟಿಒ ಇರಲಿಲ್ಲ. ಮಹಿಳಾ ಸಿಬಂದಿ ರಜೆ ಹಾಕಿದ್ದಾರೆ. ಅದೇ ಕಾರಣಕ್ಕೆ ಒಳಗೆ ಯಾರೂ ಇಲ್ಲ. ಆದ್ದರಿಂದ ಬೀಗ ಹಾಕಲಾಗಿದೆ ಎಂದು ಮತ್ತೆ ತಿಳಿದುಬಂದಿದೆ.

ಸಂಪೂರ್ಣ ವಿಫಲ

ಲಕ್ಷಗಟ್ಟಲೆ ಅನುದಾನದಲ್ಲಿ ನಿರ್ಮಾ ಣವಾದ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ಗ್ರಾಹಕರಿಗೆ ಸೇವೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಮಸ್ಯೆ ಆಲಿಸುವವರೇ ಇಲ್ಲ. ಆದರೆ ಆವಶ್ಯಕತೆ ಹೊಂದಿರುವ ಗ್ರಾಹಕರಿಗೆ ಫೈಬರ್‌ ಕೇಬಲ್‌ ಸಂಪರ್ಕ ಹೇರಲಾಗುತ್ತಿದೆ. ಫೈಬರ್‌ ಕೇಬಲ್‌ ಸಂಪರ್ಕ ಹೊಂದಲು ಗ್ರಾಹಕರು ಕೇಬಲ್‌ ಖರೀದಿಸಬೇಕು. ಪ್ರತೀ ಮೀಟರಿಗೆ 18 ರೂಪಾಯಿ ತೆರಬೇಕಾಗುತ್ತದೆ. ಅತ್ಯಂತ ದೂರದಲ್ಲಿದ್ದರೆ ಗ್ರಾಹಕರು ಹತ್ತಾರು ಸಾವಿರ ತೆರಬೇಕಾಗುತ್ತದೆ. ಡೋಲಾಯಮಾನ ಸ್ಥಿತಿಯಲ್ಲಿರುವ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ವನ್ನು ಶಾಶ್ವತವಾಗಿ ಮುಚ್ಚಿಬಿಡುವ ಹುನ್ನಾರವಿದೆಯೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.

ದುರಸ್ತಿ ಮಾಡುವವರಿಲ್ಲ

ಈ ಕೇಂದ್ರದಲ್ಲಿ 185 ಮಂದಿ ದೂರವಾಣಿ ಸಂಪರ್ಕ ಹೊಂದಿದ್ದು, ಇದರಲ್ಲಿ 62 ದೂರವಾಣಿಗೆ ಇಂಟರ್‌ ನೆಟ್‌ (ಬ್ರಾಡ್‌ಬ್ಯಾಂಡ್‌) ಸೌಲಭ್ಯ ಇದೆ. ಹಲವಾರು ದೂರವಾಣಿ ಲೈನ್‌ ಸ್ತಬ್ಧಗೊಂಡಿದೆ. ದೂರವಾಣಿ ಸಂಪರ್ಕ ಕಡಿದುಹೋಗುವುದು, ಇಂಟರ್‌ನೆಟ್‌ ಸೌಲಭ್ಯ ತಪ್ಪಿಹೋಗುವುದು ಇತ್ಯಾದಿ ದೂರುಗಳು ಬಂದರೆ ದುರಸ್ತಿ ಮಾಡುವವರಿಲ್ಲ. ಕಾರಣ ದೂರವಾಣಿ ಲೈನ್‌ ಸರಿಪಡಿಸುವ ಸಿಬಂದಿಯ ಟೆಂಡರ್‌ ಜು.20ಕ್ಕೆ ಅಂತ್ಯಗೊಂಡಿದೆ. ಗುತ್ತಿಗೆಯನ್ನೂ ರದ್ದುಪಡಿಸಿ, ಸಿಬಂದಿಯೂ ಇಲ್ಲದೇ ಕಂಗಾಲಾದ ವಿಟ್ಲ ಬಿಎಸ್‌ಎನ್‌ಎಲ್‌ ಕೇಂದ್ರ ನಿಷ್ಪ್ರಯೋಜಕವಾಗಿದೆ.

ಟಾಪ್ ನ್ಯೂಸ್

3-vijayendra

Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ

1-vijju

Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್‌ ಲಿಸ್ಟ್

1-104

Bengal; 104 ವರ್ಷದ ವೃದ್ಧನಿಗೆ ಕೊನೆಗೂ ಜೈಲು ವಾಸದಿಂದ ಮುಕ್ತಿ!!

fadnavis

Mahayuti; ಮತ್ತೊಮ್ಮೆ ಮಹಾ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಆಯ್ಕೆ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

TV Actor: ಕಾಡಿದ ಕ್ಯಾನ್ಸರ್ 45ರ ಹರೆಯದಲ್ಲಿ ಇಹಲೋಕ ತ್ಯಜಿಸಿದ ಜನಪ್ರಿಯ ನಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

4

Subramanya: ಸಿದ್ಧಗೊಳ್ಳುತ್ತಿವೆ ಬೆತ್ತದ ತೇರು

2

Belthangady ಕೊಳಚೆ ಮತ್ತೆ ಸೋಮಾವತಿಗೆ!

Kadaba: ಬಿಳಿನೆಲೆ ಸಂದೀಪ್‌ ಕೊಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

Kadaba: ಬಿಳಿನೆಲೆ ಸಂದೀಪ್‌ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ

14

Punjalkatte: ಮಳೆಗೆ ಮನೆಯ ಗೋಡೆ ಕುಸಿತ

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

3-vijayendra

Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ

1-vijju

Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ

2-gadaga

Gadaga: ಸಂತ ರಾಜಕಾರಣಿ ಡಿ.ಆರ್. ಪಾಟೀಲ ಗ್ರಂಥ ಬಿಡುಗಡೆ

5

Bantwal: ತುಂಬೆ ಹೆದ್ದಾರಿಯಲ್ಲಿ ನೀರು; ಪೆರಾಜೆ ರಿಕ್ಷಾ ನಿಲ್ದಾಣಕ್ಕೆ ಹಾನಿ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

ಕರಾವಳಿಯ ಹೆದ್ದಾರಿ ಸಮಸ್ಯೆ ಪರಿಹಾರಕ್ಕಾಗಿ ಕೇಂದ್ರ ಸಚಿವರನ್ನು ಭೇಟಿಯಾದ ಸಂಸದರ ತಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.