![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 13, 2024, 4:22 PM IST
ಹಂಪನಕಟ್ಟೆ: ಕ್ಲಾಕ್ ಟವರ್ ಕಡೆಯಿಂದ ಹಂಪನಕಟ್ಟೆ- ಬಾವುಟಗುಡ್ಡೆ – ಕೆ.ಎಸ್.ರಾವ್ ರೋಡ್ ಮೊದಲಾದ ಕಡೆಗಳಿಗೆ ಹೋಗುವ ಬಸ್‌ಗಳು ಹಂಪನಕಟ್ಟೆ ಜಂಕ್ಷನ್(ಸಿಗ್ನಲ್) ಬಳಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಮತ್ತೂಮ್ಮೆ ಅವಕಾಶ ನೀಡಲಾಗಿದೆ. ಈ ಜಂಕ್ಷನ್ ಹಾಗೂ ಹೊಸ ಶೆಲ್ಟರ್ ಬಳಿ ಎರಡೂ ಕಡೆ ಬಸ್ ನಿಲುಗಡೆ ಮಾಡಲಾಗುತ್ತಿದ್ದು, ಇದರಿಂದಾಗಿ ಇಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗುತ್ತಿದೆ.
ನಗರದ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಿಂದ ಹೊರಡುವ ಬಹುತೇಕ ಎಲ್ಲ ಖಾಸಗಿ ಸಿಟಿ, ಎಕ್ಸ್ ಪ್ರಸ್, ಕೆಎಸ್‌ಆರ್‌ಟಿಸಿ ಬಸ್ ಗಳು ಹಂಪನಕಟ್ಟೆ ಜಂಕ್ಷನ್ ಮೂಲಕವೇ ಮುಂದುವರಿಯುತ್ತವೆ.
ಹಂಪನಕಟ್ಟೆ ಜಂಕ್ಷನ್‌ನಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳನ್ನು ಹತ್ತುತ್ತಿದ್ದರು. 2 ವರ್ಷಗಳ ಹಿಂದೆ ಹಂಪನಕಟ್ಟೆಯಲ್ಲಿ ಸಿಗ್ನಲ್ ಲೈಟ್ ಪುನರಾರಂಭಿಸಲಾಗಿತ್ತು.
ಆಗ ಸಿಗ್ನಲ್ ಬಳಿ ಬಸ್‌ಗಳ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು. ಇದನ್ನು ಗಮನಿಸಿದ ಪೊಲೀಸರು ಆ ಸ್ಥಳದಲ್ಲಿ ಬಸ್‌ಗಳು ಪ್ರಯಾಣಿಕರನ್ನು ಪಿಕ್ ಅಪ್ ಮಾಡದಂತೆ ಸೂಚನೆ ನೀಡಿದ್ದರು. ಬ್ಯಾರಿಕೇಡ್ ಗಳನ್ನು ಹಾಕಿ ಪ್ರಯಾಣಿಕರು ಆ ಸ್ಥಳದಲ್ಲಿ ನಿಲ್ಲುವುದನ್ನು ನಿರ್ಬಂಧಿಸಲಾಗಿತ್ತು.
ಹೊಸ ಬಸ್ ಶೆಲ್ಟರ್ ನಿರ್ಮಾಣ
ಸಿಗ್ನಲ್ ಬಳಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವುದನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಸಿಗ್ನಲ್‌ಗಿಂತ ಸ್ವಲ್ಪ ಹಿಂದೆ ಮಂಗಳೂರು ವಿ.ವಿ. ಕಾಲೇಜಿನ ಎದುರು ಬಸ್ ಶೆಲ್ಟರ್ ನಿರ್ಮಿಸಿ ಅಲ್ಲಿಯೇ ಬಸ್‌ಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು.
ಬಸ್ ನಿಲುಗಡೆ ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿತ್ತು. ಸಿಗ್ನಲ್ ಬಳಿ ವಾಹನ ದಟ್ಟಣೆ ಕಡಿಮೆಯಾಗಿ ಫ್ರೀ ಲೆಫ್ಟ್ಗೆ ಹೋಗುವ ವಾಹನಗಳಿಗೂ ಅನುಕೂಲವಾಗಿತ್ತು.
ಆದರೆ ಇದೀಗ ಸಿಗ್ನಲ್ ಸಮೀಪದ ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವುದಕ್ಕಾಗಿ ಬಸ್‌ಗಳ ನಿಲುಗಡೆಗೆ ಮುಕ್ತ ಅವಕಾಶ ಮಾಡಿಕೊಡಲಾಗಿದೆ. ಹೊಸ ಶೆಲ್ಟರ್ ಬಳಿಯೂ ಬಸ್‌ಗಳ ನಿಲುಗಡೆಗೆ ಅವಕಾಶವಿದೆ.
You seem to have an Ad Blocker on.
To continue reading, please turn it off or whitelist Udayavani.